AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ?

ತಮಿಳು ಚಿತ್ರರಂಗದ ಯಶಸ್ವಿ ನಟ ದಳಪತಿ ವಿಜಯ್ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಅವರ ಪತ್ನಿ ಸಂಗೀತಾ ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಜೀವನಾಂಶದ ಬಗ್ಗೆ ಸುದ್ದಿ ಕೇಳಿಬಂದಿದೆ. ವರದಿಗಳ ಪ್ರಕಾರ ಸಂಗೀತಾ ಅವರು 250 ಕೋಟಿ ರೂ. ಜೀವನಾಂಶಕ್ಕೆ ಪಡೆಯುತ್ತಾರೆ.

ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ?
Thalapathy Vijay, Sangeetha
ಮದನ್​ ಕುಮಾರ್​
|

Updated on: Mar 05, 2026 | 9:00 PM

Share

ಕಾಲಿವುಡ್‌ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ (Vijay wife Sangeetha) ಅವರ ವೈವಾಹಿಕ ಜೀವನದ ಕುರಿತು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ಸುದ್ದಿಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ. ಈ ದಂಪತಿ ವಿಚ್ಛೇದನ (Divorce) ಪಡೆಯಲಿದ್ದಾರೆ ಎಂಬ ವದಂತಿಗಳ ನಡುವೆ, ವಿಜಯ್ (Thalapathy Vijay) ಅವರು ಪತ್ನಿಗೆ ಬರೋಬ್ಬರಿ 250 ಕೋಟಿ ರೂಪಾಯಿ ಜೀವನಾಂಶ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಈ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸುಮಾರು 27 ವರ್ಷಗಳ ಕಾಲ ಜೊತೆಯಾಗಿದ್ದ ದಳಪತಿ ವಿಜಯ್ ಮತ್ತು ಸಂಗೀತಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಡಿವೋರ್ಸ್ ಇತ್ಯರ್ಥಕ್ಕಾಗಿ ವಿಜಯ್ ಅವರು ಸಂಗೀತಾ ಮತ್ತು ತಮ್ಮ ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶ ಅವರಿಗೆ ಒಟ್ಟು 250 ಕೋಟಿ ರೂ.ಗಳನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಣದ ಹಂಚಿಕೆಯ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿದ್ದರೂ, ಇಬ್ಬರೂ ಸೌಹಾರ್ದಯುತವಾಗಿ ಪ್ರಕರಣವನ್ನು ಮುಗಿಸಲು ಬಯಸಿದ್ದಾರೆ ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗೀತಾ ಅವರ ಅರ್ಜಿಯ ಪ್ರತಿಗಳ ಪ್ರಕಾರ, ವಿಜಯ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಮತ್ತು ಏಪ್ರಿಲ್ 2021ರಲ್ಲಿ ತನಗೆ ಈ ವಿಷಯ ತಿಳಿಯಿತು ಎಂದು ಸಂಗೀತಾ ಆರೋಪಿಸಿದ್ದಾರೆ ಎನ್ನಲಾಗಿದೆ. ನಟಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವ ಭರವಸೆ ನೀಡಿದ್ದರೂ ವಿಜಯ್ ಅದನ್ನು ಮುಂದುವರಿಸಿದರು. ಇದರಿಂದ ತನಗೆ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ.

ಆ ನಟಿಯು ವಿಜಯ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದು ತಮಗೆ ಮತ್ತು ಮಕ್ಕಳಿಗೆ ಮುಜುಗರ ಉಂಟುಮಾಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ವಿಜಯ್ ಬಗ್ಗೆ ಇಷ್ಟೆಲ್ಲ ಆರೋಪ ಹೊರಿಸಲಾಗಿದೆಯಾದರೂ ಯಾವುದೂ ಸದ್ಯಕ್ಕೆ ಸಾಬೀತಾಗಿಲ್ಲ.

ಇದನ್ನೂ ಓದಿ: ಮಗನಿಗೂ ಬೇಡವಾದ ದಳಪತಿ ವಿಜಯ್? ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅನ್​ಫಾಲೋ

ದಳಪತಿ ವಿಜಯ್ ಅವರು 1999ರ ಆಗಸ್ಟ್ 25ರಂದು ಸಂಗೀತಾ ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಜೇಸನ್ ಸಂಜಯ್ ಅವರು ಸಿನಿಮಾ ನಿರ್ದೇಶನದತ್ತ ಗಮನ ಹರಿಸುತ್ತಿದ್ದಾರೆ. ಪುತ್ರಿ ದಿವ್ಯಾ ಸಾಶ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ