Kannada News » Sports » Kl rahul birthday rare and unseen photos of kl rahul with rumoured girlfriend athiya shetty mdn
KL Rahul Birthday : ಪ್ರಿಯತಮೆ ಆಥಿಯಾ ಶೆಟ್ಟಿ ಜೊತೆ ಕೆ.ಎಲ್. ರಾಹುಲ್ ಕಾಣಿಸಿಕೊಂಡ 5 ಅಪರೂಪದ ಫೋಟೋಗಳು
Happy Birthday KL Rahul | ಯುವ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ಇಂದು (ಏ.18) ಜನ್ಮದಿನದ ಸಂಭ್ರಮ. ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿದೆ. ಇಬ್ಬರು ಜೊತೆಯಾಗಿ ಕಾಣಿಸಿಕೊಂಡು ಕೆಲವು ಅಪರೂಪದ ಫೋಟೋಗಳು ಇಲ್ಲಿವೆ.
ಐಪಿಎಲ್ನಲ್ಲಿ ಅಕ್ಯುಟ್ ಅಪೆಂಡಿಸೈಟಿಸ್ನಿಂದ ಅರ್ಧಕ್ಕೆ ಹೊರಬಿದ್ದಿದ್ದ ರಾಹುಲ್, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ರು. ಆದ್ರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಾಹುಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲೆ ಕಣ್ಣಿಟ್ಟಿದ್ದಾರೆ..
1 / 5
ಹೀಗೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯ ಸುಳಿವು ನೀಡಿದ್ರೂ, ಸಾರ್ವಜನಿಕವಾಗಿ ನಾವಿಬ್ರೂ ಪ್ರೀತಿಯಲ್ಲಿದ್ದೀವಿ ಅನ್ನೋದನ್ನ ಒಪ್ಪಿಕೊಂಡಿಲ್ಲ. ಸದ್ಯ ಟೀಮ್ ಇಂಡಿಯಾ ಆಟಗಾರರೊಂದಿಗೆ ಕನ್ನಡಿಗ ರಾಹುಲ್ ಇಂಗ್ಲೆಂಡ್ನಲ್ಲಿದ್ದಾರೆ.
2 / 5
ಸಮಯ ಸಿಕ್ಕಾಗಲೆಲ್ಲ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಜೊತೆಯಾಗಿ ಕಾಲ ಕಳೆಯುತ್ತಾರೆ. ಒಬ್ಬರಿಗೊಬ್ಬರು ಸಮಯ ನೀಡುತ್ತಾರೆ. ಆ ಸಂದರ್ಭದಲ್ಲಿ ಖುಷಿಖುಷಿಯಾಗಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಾರೆ. ಅವುಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತದೆ. ಇಂದಲ್ಲ ನಾಳೆ ಈ ಜೋಡಿಹಕ್ಕಿಗಳು ತಮ್ಮ ಪ್ರೀತಿಯನ್ನು ಬಹಿರಂಗಪಡಿಸಲಿವೆ ಎಂಬ ನಂಬಿಕೆ ಅಭಿಮಾನಿಗಳದ್ದು.
3 / 5
ಸ್ಟೈಲಿಶ್ ಕ್ರಿಕೆಟಿಗನಾಗಿರೋ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ನಡುವಿನ ಲವ್ವಿ-ಡವ್ವಿ ಬಗ್ಗೆ 2019ರಿಂದಲೂ ಗಾಸಿಪ್ಗಳು ಕೇಳಿಬರ್ತಿದೆ. 2020ರಲ್ಲಿ ಈ ಜೋಡಿ ಮುಂಬೈನಲ್ಲಿ ಡಿನ್ನರ್ ಪಾರ್ಟಿಗೆ ಹೋಗೋವಾಗ, ಕ್ಯಾಮೆರಾ ಕಣ್ಣಿಗೆ ಬಿದ್ದಿದ್ರು. ಆಗಲೇ ಗೊತ್ತಾಗಿದ್ದು ಇಬ್ಬರು ಲವ್ನಲ್ಲಿ ಬಿದ್ದಿದ್ದಾರೆ ಅನ್ನೋದು. ಇಬ್ಬರೂ ಆಗಾಗ್ಗೆ ಪರಸ್ಪರರ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಳ್ಳುತ್ತಾರೆ, ಆದಾಗ್ಯೂ, ಅಧಿಕೃತವಾಗಿ ಪರಸ್ಪರ ಡೇಟಿಂಗ್ ಮಾಡುವುದನ್ನು ದೃಡೀಕರಿಸಿಲ್ಲ.