ಮೊದಲನೆಯದಾಗಿ, ಐಪಿಎಲ್‌ನಲ್ಲಿ ಭಾರತೀಯರಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಹೊಡೆದ ದಾಖಲೆ. ಈಗ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿ ಮಾರ್ಪಟ್ಟಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 32 ರನ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಹೊಡೆದರು. ಈ ಸಿಕ್ಸರ್‌ಗಳನ್ನು ಹೊಡೆದ ಕೂಡಲೇ ಹಿಟ್‌ಮ್ಯಾನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಧೋನಿ 216 ಸಿಕ್ಸರ್‌ಗಳನ್ನು ಐಪಿಎಲ್‌ನಲ್ಲಿ ಬಾರಿಸಿದ್ದಾರೆ. ಈಗ ರೋಹಿತ್ 217 ಸಿಕ್ಸ್ ಬಾರಿಸಿ ಮೊದಲ ಸ್ಥಾನಕ್ಕೇರಿದರು.