AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನ ಸಂಪಾದನೆಯನ್ನು ವ್ಯರ್ಥ ಮಾಡುತ್ತಿದ್ದಾಳೆ! ನೆಟ್ಟಿಗರ ಕುಚೇಷ್ಟೆಯ ಕಾಮೆಂಟ್​ಗೆ ಖಡಕ್ ಉತ್ತರ ಕೊಟ್ಟ ಸಚಿನ್ ಪುತ್ರಿ ಸಾರಾ

Sara Tendulkar: ಸಾರಾ ತೆಂಡೂಲ್ಕರ್ ಅವರು ಕಾಫಿ ಕಪ್ ಹಿಡಿದಿರುವ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾರಾ ಅವರ ಈ ಪೋಸ್ಟ್​ಗೆ ಮಹಿಳಾ ಬಳಕೆದಾರರು ತಂದೆಯ ಹಣವನ್ನು ವ್ಯರ್ಥ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಅಪ್ಪನ ಸಂಪಾದನೆಯನ್ನು ವ್ಯರ್ಥ ಮಾಡುತ್ತಿದ್ದಾಳೆ! ನೆಟ್ಟಿಗರ ಕುಚೇಷ್ಟೆಯ ಕಾಮೆಂಟ್​ಗೆ ಖಡಕ್ ಉತ್ತರ ಕೊಟ್ಟ ಸಚಿನ್ ಪುತ್ರಿ ಸಾರಾ
ಸಾರಾ ತೆಂಡೂಲ್ಕರ್
ಪೃಥ್ವಿಶಂಕರ
| Updated By: Digi Tech Desk|

Updated on:Apr 17, 2021 | 5:42 PM

Share

ಸಚಿನ್ ತೆಂಡೂಲಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಒಂದು ಪೋಸ್ಟ್​ನಿಂದಾಗಿ ಮತ್ತೊಮ್ಮೆ ಚರ್ಚೆಗೆ ಬಂದಿದ್ದಾರೆ. ಈ ಪೋಸ್ಟ್​ನಿಂದಾಗಿ ಅವರನ್ನು ಟ್ರೋಲ್ ಮಾಡಿದಾಗ, ಸ್ಟಾರ್ ಕ್ರಿಕೆಟಿಗನ ಮಗಳು ಸಹ ಈ ಟ್ರೋಲರ್ಗೆ ಖಡಕ್ಕಾಗಿ ಉತ್ತರವನ್ನು ನೀಡಿ, ಕಾಲೆಳೆಯುವವರ ಬಾಯಿ ಮುಚ್ಚಿಸಿದ್ದಾರೆ. ವಾಸ್ತವವಾಗಿ, ಸಾರಾ ತೆಂಡೂಲ್ಕರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರ ಕೈಯಲ್ಲಿ ಕಾಪಿ ಕಪ್ ಕಾಣುತ್ತಿದೆ. ಈ ಚಿತ್ರವನ್ನು ಗುರಿಯಾಗಿಸಿಕೊಂಡು, ಮಹಿಳಾ ಬಳಕೆದಾರರು ಸಾರಾಳನ್ನು ಟ್ರೋಲ್ ಮಾಡಿದರು. ಆದರೆ ಸಚಿನ್ ಅವರ 23 ವರ್ಷದ ಮಗಳು ಟೀಕಕಾರರಿಗೆ ಸೂಕ್ತವಾದ ಉತ್ತರವನ್ನು ನೀಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ತಂದೆಯ ಹಣವನ್ನು ವ್ಯರ್ಥ ಮಾಡುತ್ತಾರೆ ವಾಸ್ತವವಾಗಿ, ಸಾರಾ ತೆಂಡೂಲ್ಕರ್ ಅವರು ಕಾಫಿ ಕಪ್ ಹಿಡಿದಿರುವ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾರಾ ಅವರ ಈ ಪೋಸ್ಟ್​ಗೆ ಮಹಿಳಾ ಬಳಕೆದಾರರು ತಂದೆಯ ಹಣವನ್ನು ವ್ಯರ್ಥ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸಾರಾ ಈ ಕಾಮೆಂಟ್ ನೋಡಿ ಅದಕ್ಕೆ ಸೂಕ್ತವಾದ ಉತ್ತರವನ್ನು ನೀಡಿದರು. ಈ ಕಾಮೆಂಟ್​ಗೆ ಉತ್ತರಿಸಿದ ಸಾರಾ, ಕೆಫೀನ್ಗಾಗಿ ಖರ್ಚು ಮಾಡಿದ ಹಣ ವ್ಯರ್ಥವಾಗುವುದಿಲ್ಲ. ಬದಲಿಗೆ ಅದನ್ನು ಸರಿಯಾದ ಸ್ಥಳದಲ್ಲಿ ಖರ್ಚು ಮಾಡಿದ್ದೇವೆ ಎಂದು ಬಾವಿಸಲಾಗುತ್ತದೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾರಾ ತೆಂಡೂಲ್ಕರ್ ಅವರ ಈ ಆಕ್ರಮಣಕಾರಿ ಶೈಲಿಯು ಅವರ ಅಭಿಮಾನಿಗಳನ್ನು ಸಹ ಮೆಚ್ಚಿಸಿದೆ.

ಸಾರಾ ಪೋಸ್ಟ್

ಅರ್ಜುನ್ ತೆಂಡೂಲ್ಕರ್ ಕೂಡ ಗುರಿಯಾಗಿದ್ದರು ಕುತೂಹಲಕಾರಿ ಸಂಗತಿಯೆಂದರೆ, ಸಾರಾ ತೆಂಡೂಲ್ಕರ್ ಕಾಫಿಗೆ ಹಣವನ್ನು ವ್ಯರ್ಥ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಳಕೆದಾರರು, ಸಚಿನ್ ತೆಂಡೂಲ್ಕರ್ ಅವರ ಮಗ ಅಂದರೆ ಸಾರಾ ಅವರ ಸಹೋದರ ಅರ್ಜುನ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗುರಿಯಾಗಿಸಿಕೊಂಡಿದ್ದರು. ವಾಸ್ತವವಾಗಿ, ಈ ವರ್ಷದ ಆರಂಭದಲ್ಲಿ ಐಪಿಎಲ್ 2021 ರ ಕ್ರಿಕೆಟಿಗರ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಖರೀದಿಸಿತು. ಮುಂಬೈ ಅರ್ಜುನ್‌ನನ್ನು ತನ್ನ ಮೂಲ ಬೆಲೆಗೆ ಅಂದರೆ 20 ಲಕ್ಷ ರೂಪಾಯಿಗೆ ಖರೀದಿಸಿತು. ಅರ್ಜುನ್ ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿಯಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡಿದರು. ಈ ಪಂದ್ಯಾವಳಿಯಲ್ಲಿ, ಅವರು ಲೀಗ್ ಹಂತದ ಎರಡು ಪಂದ್ಯಗಳನ್ನು ಆಡಿದರು. ಆದರೆ, ಅವರು ಕೇವಲ ಎರಡು ವಿಕೆಟ್‌ಗಳನ್ನು ತೆಗೆದುಕೊಳ್ಳಲಷ್ಟೇ ಶಕ್ತರಾದರು.

Published On - 5:30 pm, Sat, 17 April 21