AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Bigg Boss 8 Elimination: ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ?

ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಕಳೆದ ವಾರ ಅದೃಷ್ಟದ ಬಲದಿಂದ ಎಲಿಮಿನೇಷನ್​ನಿಂದ​ ತಪ್ಪಿಸಿಕೊಂಡ ಶಮಂತ್​ ಈ ವಾರ ನೇರವಾಗಿ ನಾಮಿನೇಟ್​ ಆಗಿದ್ದಾರೆ.

Kannada Bigg Boss 8 Elimination: ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ?
ಬಿಗ್ ​ಬಾಸ್​ ಮನೆ
ರಾಜೇಶ್ ದುಗ್ಗುಮನೆ
| Edited By: |

Updated on:Apr 18, 2021 | 2:18 PM

Share

ಬಿಗ್ ಬಾಸ್​ ಸ್ಪರ್ಧಿಗಳು ಏಳನೇ ವಾರದ ಎಲಿಮಿನೇಷನ್​ ಸನಿಹವಾಗಿದೆ. ಕಿಚ್ಚ ಸುದೀಪ್​ ಇಲ್ಲದೆ ಈ ವಾರದ ಎಲಿಮಿನೇಷನ್​ ನಡೆಯುತ್ತಿದೆ. ಹಾಗಾದರೆ, ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎನ್ನುವುದಕ್ಕೆ ನಾಳೆ (ಏ.18) ಉತ್ತರ ಸಿಗಲಿದೆ. ಸದ್ಯ, ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಕಳೆದ ವಾರ ಅದೃಷ್ಟದ ಬಲದಿಂದ ಎಲಿಮಿನೇಷನ್​ನಿಂದ​ ತಪ್ಪಿಸಿಕೊಂಡ ಶಮಂತ್​ ಈ ವಾರ ನೇರವಾಗಿ ನಾಮಿನೇಟ್​ ಆಗಿದ್ದಾರೆ. ಉಳಿದಂತೆ ಮಂಜು ಪಾವಗಡ, ದಿವ್ಯಾ ಸುರೇಶ್​, ಅರವಿಂದ್​ ಕೆ.ಪಿ, ದಿವ್ಯಾ ಉರುಡುಗ, ರಾಜೀವ್​, ಚಕ್ರವರ್ತಿ ಚಂದ್ರಚೂಡ್​, ವಿಶ್ವನಾಥ್​ ಅವರ ಮೇಲೆ ಎಲಿಮಿನೇಷನ್​ ಕತ್ತಿ ತೂಗುಗತ್ತಿ ತೂಗುತ್ತಿದೆ.

ಮಂಜು ಒಬ್ಬ ಟಫ್​ ಸ್ಪರ್ಧಿ ಹಾಗೂ ಅವರು ಕಂಫರ್ಟ್​ ಜೋನ್​ನಿಂದ ಹೊರಬರಲಿ ಎಂಬ ಉದ್ದೇಶದಿಂದ ಅವರನ್ನು ನಾಮಿನೇಟ್​ ಮಾಡಲಾಗಿತ್ತು. ಸ್ಪರ್ಧಿಗಳೇ ಹೇಳಿದಂತೆ ಮಂಜು ಮನೆಯಲ್ಲಿ ಸ್ಟ್ರಾಂಗ್​. ಹೀಗಾಗಿ, ಅವರು ಮನೆಯಿಂದ ಹೊರ ಹೋಗೋಕೆ ಚಾನ್ಸೇ ಇಲ್ಲ. ಅರವಿಂದ್​ ಕೆ.ಪಿ, ದಿವ್ಯಾ ಉರುಡುಗ, ದಿವ್ಯಾ ಸುರೇಶ್​, ರಾಜೀವ್​ ಮನೆಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ, ಅವರು ಮನೆಯಿಂದ ಹೊರ ಬರೋದು ಅನುಮಾನವೇ.

ಚಕ್ರವರ್ತಿ ಚಂದ್ರಚೂಡ್​ ಆರಂಭದಲ್ಲಿ ಮನೆಯಲ್ಲಿ ಹುಳಿ ಹಿಂಡೋಕೆ ಪ್ರಾರಂಭಿಸಿದ್ದರು. ಆದರೆ, ಮನೆಯವರ ಜತೆ ಉತ್ತಮವಾಗಿ ಬೆರೆಯುತ್ತಿದ್ದಾರೆ. ಹೀಗಾಗಿ, ಅವರು ಇನ್ನೂ ಕೆಲ ವಾರ ಉಳಿದುಕೊಳ್ಳಬಹುದು. ಕೊನೆಗೆ ಉಳಿದವರು ಶಮಂತ್​ ಹಾಗೂ ವಿಶ್ವನಾಥ್​. ಶಮಂತ್ ಕಳೆದ ವಾರವೇ ಎಲಿಮಿನೇಟ್​ ಆಗುವುದರಲ್ಲಿದ್ದರು. ಆದರೆ, ವೈಜಯಂತಿ ಅಡಿಗ ಅವರು ಶಮಂತ್​ ಅವರನ್ನು ಸೇವ್​ ಮಾಡಿದ್ದರು. ಹೀಗಾಗಿ ಈ ವಾರ ಶಮಂತ್​ ಮನೆಯಿಂದ ಹೊರಹೋಗುವ ಸಾಧ್ಯತೆ ಇತ್ತು. ಆದರೆ ಅಂತಿಮವಾಗಿ ವಿಶ್ವನಾಥ್​ ಎಲಿಮಿನೇಟ್​ ಆಗಿದ್ದಾರೆ ಎನ್ನಲಾಗುತ್ತಿದೆ.

Published On - 5:32 pm, Sat, 17 April 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More