ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ ತೂಗುದೀಪ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ನಟ ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ ಮತ್ತು ಆಪ್ತ ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ತಾಯಿ ಮೀನಾ ಸಮ್ಮುಖದಲ್ಲಿ ಸಂಧಾನ ಮಾಡುವ ಸಲುವಾಗಿಯೇ ದರ್ಶನ್ ಅವರು ಎಲ್ಲರನ್ನೂ ಒಟ್ಟಿಗೆ ಕರೆಸಿದ್ರಾ ಎಂಬ ಅನುಮಾನ ಮೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್ (Darshan) ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ ಹಾಗೂ ಆಪ್ತ ಧನ್ವೀರ್ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಕೆಲವು ದಿನಗಳಿಂದೀಚೆಗೆ ದರ್ಶನ್ ಕುಟುಂಬ ಮತ್ತು ಧನ್ವೀರ್ ನಡುವೆ ಮನಸ್ತಾಪ ಉಂಟಾಗಿದೆಯಾ ಎಂಬ ಅನುಮಾನ ಮೂಡಿತ್ತು. ಆದರೆ ಇಂದು (ಆಗಸ್ಟ್ 18) ಎಲ್ಲರೂ ಜೊತೆಯಾಗಿ ಬಂದು ದರ್ಶನ್ ಅವರನ್ನು ಭೇಟಿ ಮಾಡಿರುವುದರಿಂದ ಸಂಧಾನ ನಡೆದಿದೆ ಎಂದು ಊಹಿಸಲಾಗುತ್ತಿದೆ. ತಾಯಿ ಮೀನಾ ಅವರ ಸಮ್ಮುಖದಲ್ಲಿ ಸಂಧಾನ ಮಾಡುವ ಸಲುವಾಗಿಯೇ ದರ್ಶನ್ ಅವರು ಎಲ್ಲರನ್ನೂ ಒಟ್ಟಿಗೆ ಕರೆಸಿದ್ರಾ ಎಂಬ ಅನುಮಾನ ಕೂಡ ಮೂಡಿದೆ. ಈ ಭೇಟಿಯ ವೇಳೆ ಯಾವೆಲ್ಲ ಮಾತುಕಥೆ ನಡೆಯಿತು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಏಕಕಾಲಕ್ಕೆ ವಿಜಯಲಕ್ಷ್ಮಿ ದರ್ಶನ್, ಧನ್ವೀರ್ ಗೌಡ, ಮೀನಾ ತೂಗುದೀಪ ಅವರು ಜೈಲಿಗೆ ಭೇಟಿ ನೀಡಿದ್ದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
