AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಲಿ ಬಣ್ಣಕ್ಕೆ ತಿರುಗುವ ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!

ನೀಲಿ ಬಣ್ಣಕ್ಕೆ ತಿರುಗುವ ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!

ಪ್ರಸನ್ನ ಹೆಗಡೆ
|

Updated on:Feb 23, 2026 | 3:52 PM

Share

ಚೀನಾದ ಯುನಾನ್ ಪ್ರಾಂತ್ಯದಲ್ಲಿ ಕಂಡುಬರುವ ಲ್ಯಾನ್ಮಾವೋ ಏಷ್ಯಾಟಿಕಾ ಅಣಬೆ, ಬೇಯಿಸದೆ ತಿಂದರೆ ಭ್ರಮೆಗಳನ್ನು ಹುಟ್ಟಿಸುತ್ತದೆ. ಈ ಅಣಬೆ ಮುಟ್ಟಿದರೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಸಂಶೋಧಕ ಕಾಲಿನ್ ಡೊಮೋರ್ ಇದರ ಅಪಾಯಕಾರಿ ಅಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಇದನ್ನು ಹೆಚ್ಚಿನ ತಾಪಮಾನದಲ್ಲಿ ಸರಿಯಾಗಿ ಬೇಯಿಸುವುದು ಕಡ್ಡಾಯ ಎಂದವರು ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರು, ಫೆಬ್ರವರಿ 23: ಲ್ಯಾನ್ಮಾವೋ ಏಷ್ಯಾಟಿಕಾ ಎಂಬ ಕುತೂಹಲಕಾರಿ ಅಣಬೆಯು ಚೀನಾದ ಯುನಾನ್ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಇದನ್ನು ಸರಿಯಾಗಿ ಬೇಯಿಸದೆ ಸೇವಿಸಿದರೆ ವಿಚಿತ್ರ ಭ್ರಮೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಈ ಅಣಬೆಯನ್ನು “ಜಿಯಾನ್ ಶೋ ಕ್ವಿಂಗ್” ಎಂದೂ ಕರೆಯುತ್ತಾರೆ. ಇದರರ್ಥ ಮುಟ್ಟಿದಾಗ ನೀಲಿ ಬಣ್ಣಕ್ಕೆ ತಿರುಗುವುದು. ಆಕ್ಸಿಡೀಕರಣ ಪ್ರಕ್ರಿಯೆಯಿಂದಾಗಿ ಕತ್ತರಿಸಿದಾಗ ಅಥವಾ ಒತ್ತಿದಾಗ ಇದು ಗಾಢ ನೀಲಿ ಬಣ್ಣಕ್ಕೆ ಇದು ತಿರುಗುತ್ತದೆ. ಲ್ಯಾನ್ಮಾವೋ ಏಷ್ಯಾಟಿಕಾ ತಿಂದವರು ತಮ್ಮ ಸುತ್ತಮುತ್ತಲಿನ ಜನರನ್ನು ಪುಟ್ಟ ಪುಟ್ಟದಾಗಿ ಕಾಣುವ “ಲಿಟಲ್ ಪೀಪಲ್ ಹ್ಯಾಲುಸಿನೇಷನ್” ಅಂದರೆ “ಆಲಿಸ್ ಇನ್ ವಂಡರ್ಲ್ಯಾಂಡ್ ಸಿಂಡ್ರೋಮ್” ನಂತಹ ಭ್ರಮೆಗಳಿಗೆ ಒಳಗಾಗುತ್ತಾರೆ. ಇದು ಸಾಮಾನ್ಯ ಮ್ಯಾಜಿಕ್ ಮಶ್ರೂಮ್‌ಗಳಲ್ಲಿರುವ ಸೈಲೋಸೈಬಿನ್ ಅಂಶವನ್ನು ಹೊಂದಿಲ್ಲ. ಇದರ ವಿಷಕಾರಿ ಅಂಶಗಳು ಮತ್ತು ಅವು ಭ್ರಮೆ ಹುಟ್ಟಿಸುವ ವಿಧಾನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಯುನಾನ್‌ನಲ್ಲಿ ಇದು ರುಚಿಕರ ಅಣಬೆ ಎಂದು ಪರಿಗಣಿಸಲಾಗಿದ್ದರೂ ಇದನ್ನು ಹೆಚ್ಚಿನ ತಾಪಮಾನದಲ್ಲಿ ಚೆನ್ನಾಗಿ ಬೇಯಿಸುವುದು ಕಡ್ಡಾಯ. ಸರಿಯಾಗಿ ಬೇಯಿಸಿದಾಗ ಮಾತ್ರ ಇದರ ವಿಷಕಾರಿ ಅಂಶಗಳು ನಾಶವಾಗಿ ತಿನ್ನಲು ಯೋಗ್ಯವಾಗುತ್ತದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 23, 2026 03:51 PM