Kichcha Sudep: ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು? ಊಹಾಪೋಹಗಳಿಗೆ ಬಿತ್ತು ತೆರೆ

Kichcha Sudep: ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು? ಊಹಾಪೋಹಗಳಿಗೆ ಬಿತ್ತು ತೆರೆ
ಕಿಚ್ಚ ಸುದೀಪ್​

ಇಂದು ಅನಾರೋಗ್ಯದ ಬಗ್ಗೆ  ಸುದೀಪ್​ ಟ್ವೀಟ್​ ಮಾಡಿದ್ದರು. ನನಗೆ ಅನಾರೋಗ್ಯ ಕಾಡುತ್ತಿದೆ. ಈ ವಾರಾಂತ್ಯಕ್ಕೆ ನಾನು ಗುಣಮುಖನಾಗುವ ನಿರೀಕ್ಷೆ ಇದೆ ಎಂದಿದ್ದರು.

Rajesh Duggumane

| Edited By: Madan Kumar

Apr 17, 2021 | 9:15 AM


ನಟ ಕಿಚ್ಚ ಸುದೀಪ್​ ಇಂದು ಟ್ವೀಟ್​ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ ತಮಗೆ ಅನಾರೋಗ್ಯ ಇರುವ ಬಗ್ಗೆ ಹೇಳಿಕೊಂಡಿದ್ದರು. ಈ ಟ್ವೀಟ್​ ನೋಡಿ ಎಲ್ಲರೂ ಸುದೀಪ್​ಗೆ ಕೊರೊನಾ ಪಾಸಿಟಿವ್​ ಎಂದೇ ಭಾವಿಸಿದ್ದರು. ಆದರೆ, ಸುದೀಪ್​ಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಅವರ ಮ್ಯಾನೇಜರ್​ ಜಾಕ್​ ಮಂಜು ಟಿವಿ9 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. 

ಇಂದು ಅನಾರೋಗ್ಯದ ಬಗ್ಗೆ  ಸುದೀಪ್​ ಟ್ವೀಟ್​ ಮಾಡಿದ್ದರು. ನನಗೆ ಅನಾರೋಗ್ಯ ಕಾಡುತ್ತಿದೆ. ಈ ವಾರಾಂತ್ಯಕ್ಕೆ ನಾನು ಗುಣಮುಖನಾಗುವ ನಿರೀಕ್ಷೆ ಇದೆ. ಆದರೆ, ವೈದ್ಯರ ಸೂಚನೆಯಂತೆ ನಾನು ಕೆಲ ದಿನ ರೆಸ್ಟ್​ ಮಾಡುತ್ತಿದ್ದೇನೆ. ಹೀಗಾಗಿ, ಈ ವಾರದ ಬಿಗ್​ ಬಾಸ್​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಈ ವಾರದ ಎಲಿಮಿನೇಷನ್​ಗೆ ಯಾವ ಪ್ಲ್ಯಾನ್​ ಮೂಲಕ ತಂಡ ಬರುತ್ತದೆ ಎನ್ನುವ ಕುತೂಹಲ ನನ್ನದು ಎಂದಿದ್ದರು. ಈ ಟ್ವೀಟ್​ ಸಾಕಷ್ಟು ಕುತೂಹಲ ಸೃಷ್ಟಿ ಮಾಡಿತ್ತು. ಅಲ್ಲದೆ, ಸುದೀಪ್​ಗೆ ಕೊರೊನಾ ಇದೆ ಎಂದೇ ಎಲ್ಲರೂ ಭಾವಿಸಿದ್ದರು.

ಈ ಬಗ್ಗೆ ಸುದೀಪ್​ ಮ್ಯಾನೇಜರ್​ ಜಾಕ್ ಮಂಜು ಟಿವಿ9 ಜತೆ ಮಾತನಾಡಿದ್ದಾರೆ. ಸುದೀಪ್​ಗೆ ಕೊರೊನಾ ಪಾಸಿಟಿವ್​ ಇರುವ ವಿಚಾರ ದೃಢಪಟ್ಟಿಲ್ಲ. ಜ್ವರ ಹಿನ್ನೆಲೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಅಂದಹಾಗೆ, ಈ ವಾರ ಬಿಗ್​ ಬಾಸ್​ ಶೋ ಯಾರು ನಡೆಸಿಕೊಡುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಏಳನೇ ವಾರದ ವೀಕೆಂಡ್​ ಎಪಿಸೋಡ್​ಗಳನ್ನು ಸಮರ್ಥವಾಗಿ ನಡೆಸಿಕೊಡಬಲ್ಲ ನಿರೂಪಕರಿಗಾಗಿ ವಾಹಿನಿ ಹುಡುಕಾಟ ನಡೆಸುತ್ತಿದೆ ಎನ್ನಲಾಗಿದೆ.

ಬೇರೆ ಭಾಷೆಯ ಬಿಗ್​ ಬಾಸ್​ ಕಾರ್ಯಕ್ರಮಗಳಲ್ಲಿ ಇಂಥ ಪರಿಸ್ಥಿತಿ ಈ ಹಿಂದೆ ಎದುರಾಗಿತ್ತು. ಅಕ್ಕಿನೇನಿ ನಾಗಾರ್ಜುನ ಅವರ ಅನುಪಸ್ಥಿತಿಯಲ್ಲಿ ಅವರ ಸೊಸೆ ಸಮಂತಾ ಅವರು ತೆಲುಗು ಬಿಗ್​ ಬಾಸ್​ ನಿರೂಪಣೆ ಮಾಡಿದ್ದರು. ಹಿರಿಯ ನಟಿ ರಮ್ಯಾ ಕೃಷ್ಣ ಅವರ ಹೆಗಲಿಗೂ ಒಮ್ಮೆ ಈ ಜವಾಬ್ದಾರಿ ಹೋಗಿತ್ತು. ಹಿಂದಿಯಲ್ಲಿ ಸಲ್ಮಾನ್​ ಖಾನ್​ ಬದಲಿಗೆ ಬಿಗ್​ ಬಾಸ್​ 13ನೇ ಸೀಸನ್​ ವಿನ್ನರ್​ ಸಿದ್ದಾರ್ಥ್​ ಶುಕ್ಲಾ ನಡೆಸಿಕೊಟ್ಟಿದ್ದರು. ಕನ್ನಡದಲ್ಲಿ ಯಾರಿಗೆ ಈ ಚಾನ್ಸ್​ ಸಿಗಲಿದೆ ಎಂಬ ಕೌತುಕ ಮನೆ ಮಾಡಿದೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ 

Covid-19 Karnataka Update: ಕರ್ನಾಟಕದಲ್ಲಿ 14,859 ಜನರಿಗೆ ಕೊರೊನಾ ಸೋಂಕು, 78 ಮಂದಿ ಸಾವು

 

Follow us on

Related Stories

Most Read Stories

Click on your DTH Provider to Add TV9 Kannada