Covid-19 Karnataka Update: ಕರ್ನಾಟಕದಲ್ಲಿ 14,859 ಜನರಿಗೆ ಕೊರೊನಾ ಸೋಂಕು, 78 ಮಂದಿ ಸಾವು

Covid-19: ಬೆಂಗಳೂರಿನಲ್ಲಿ ಒಂದೇ ದಿನ 9,917 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 57 ಜನರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 5,22,438ಕ್ಕೇರಿಕೆಯಾಗಿದೆ.

  • TV9 Web Team
  • Published On - 18:32 PM, 16 Apr 2021
Covid-19 Karnataka Update: ಕರ್ನಾಟಕದಲ್ಲಿ 14,859 ಜನರಿಗೆ ಕೊರೊನಾ ಸೋಂಕು, 78 ಮಂದಿ ಸಾವು
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 14,859 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 78 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 11,24,509ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 9,917 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 57 ಜನರು ಬಲಿಯಾಗಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 5,22,438ಕ್ಕೇರಿಕೆಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಇಂದು 9000 ಗಡಿ ದಾಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 9,917 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕಲಬುರಗಿ 488, ತುಮಕೂರು 432, ಮೈಸೂರು 415, ಬೆಂಗಳೂರು ಗ್ರಾಮಾಂತರ 358, ಬೀದರ್ 326, ಬಳ್ಳಾರಿ 279, ದಕ್ಷಿಣ ಕನ್ನಡ 256, ಹಾಸನ 244, ವಿಜಯಪುರ 207, ಚಿಕ್ಕಬಳ್ಳಾಪುರ 180, ಧಾರವಾಡ 176, ಕೊಪ್ಪಳ 158, ಯಾದಗಿರಿ 153, ಮಂಡ್ಯ 137, ಬೆಳಗಾವಿ 120, ಕೋಲಾರ 109, ರಾಯಚೂರು 108, ಉಡುಪಿ 101, ರಾಮನಗರ 100, ದಾವಣಗೆರೆ 85, ಚಿಕ್ಕಮಗಳೂರು 73, ಉತ್ತರ ಕನ್ನಡ 72, ಬಾಗಲಕೋಟೆ 71, ಚಾಮರಾಜನಗರ 68, ಚಿತ್ರದುರ್ಗ 57, ಗದಗ 34, ಹಾವೇರಿ 35, ಕೊಡಗು 33, ಶಿವಮೊಗ್ಗ 67 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 78 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 57 ಜನರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಐವರು, ಕಲಬುರಗಿ ಮೂವರು, ಬೀದರ್, ತುಮಕೂರು ಜಿಲ್ಲೆಯಲ್ಲಿ ತಲಾ ಇಬ್ಬರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Covid-Update

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರದಿಯಾಗಿರುವ ಸೋಂಕು ಮತ್ತು ಸಾವಿನ ಸಂಖ್ಯೆಗಳ ವಿವರ

(Coronavirus in Karnataka 14859 new cases 78 deaths due to Covid-19)