AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ

ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ

ರಮೇಶ್ ಬಿ. ಜವಳಗೇರಾ
|

Updated on: Feb 23, 2026 | 5:58 PM

Share

ತರಕಾರಿಗಳು ಆರೋಗ್ಯಕ್ಕೆ ಪ್ರಯೋಜನದ ಜೊತೆಗೆ ಕೆಲವು ಅಡ್ಡ ಪರಿಣಾಮವನ್ನೂ ಉಂಟು ಮಾಡುತ್ತವೆ. ಹೌದು... ಕರ್ನಾಟಕ ತರಕಾರಿಗಳಲ್ಲಿ ಭಾರೀ ಲೋಹ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಹಿಂದಿನ ವರದಿಯು ಮತ್ತೊಮ್ಮೆ ದೃಢಪಟ್ಟಿದೆ. CPCB ಸಮಿತಿಯ FSSAI-ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ, 72 ಮಾದರಿಗಳಲ್ಲಿ 19 ಸೀಸದ ಅಂಶದ ಮಿತಿ ಮೀರಿವೆ. ಕೆಲ ತರಕಾರಿಗಳಲ್ಲಿ 20 ಪಟ್ಟು ಹೆಚ್ಚು ಸೀಸ, ನಿಷಿದ್ಧ ಕೀಟನಾಶಕಗಳು ಪತ್ತೆಯಾಗಿವೆ.

ಬೆಂಗಳೂರು, (ಫೆಬ್ರವರಿ 23): ತರಕಾರಿಗಳು (Vegetables) ಆರೋಗ್ಯಕ್ಕೆ ಪ್ರಯೋಜನದ ಜೊತೆಗೆ ಕೆಲವು ಅಡ್ಡ ಪರಿಣಾಮವನ್ನೂ ಉಂಟು ಮಾಡುತ್ತವೆ. ಹೌದು… ಕರ್ನಾಟಕ ತರಕಾರಿಗಳಲ್ಲಿ ಭಾರೀ ಲೋಹ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಹಿಂದಿನ ವರದಿಯು ಮತ್ತೊಮ್ಮೆ ದೃಢಪಟ್ಟಿದೆ. CPCB ಸಮಿತಿಯ FSSAI-ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ, 72 ಮಾದರಿಗಳಲ್ಲಿ 19 ಸೀಸದ ಅಂಶದ ಮಿತಿ ಮೀರಿವೆ. ಕೆಲ ತರಕಾರಿಗಳಲ್ಲಿ 20 ಪಟ್ಟು ಹೆಚ್ಚು ಸೀಸ, ನಿಷಿದ್ಧ ಕೀಟನಾಶಕಗಳು ಪತ್ತೆಯಾಗಿವೆ.

ಈ ಬಗ್ಗೆ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಮಾತನಾಡಿ, ಬೆಂಗಳೂರು ನಗರಕ್ಕೆ ವಿವಿಧ ಕಡೆ ಗಳಿಂದ ತರಕಾರಿಗಳು ಬರುತ್ತೆ. FSSAI ವರದಿ ಪ್ರಕಾರ ಕಲುಷಿತವಾಗಿರುವುದು ಕಂಡು ಬಂದಿದೆ.ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ತರಕಾರಿಗಳು ಬರುತ್ತವೆ. ಕೆಲವೊಂದು ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಾಗಿರುತ್ತೆ . ಕೆಲವು ತರಕಾರಿಗಳಲ್ಲಿ ಕಡಿಮೆ ಇರುತ್ತೆ. ತಿನ್ನೋ ಅನ್ನವನ್ನು ಗೊಂದಲದಲ್ಲಿ ತಿನ್ನಬಾರದು. ಕೆಲವು ಪೆಷ್ಠಿಸೈಟ್, ಫರ್ಟಿಲಿಸರ್ಸ್ ಜಾಸ್ತಿ ಹಾಕಿದಾಗ ಮೆಟಲ್ ಪ್ರಮಾಣ ಹೆಚ್ಚಾಗುತ್ತೆ.ಇಂಡಸ್ಟ್ರೀಯಲ್ ವೇಸ್ಟ್ ನಿಂದ ಮೆಟಲ್ ಪ್ರಮಾಣ ಹೆಚ್ಚಾಗಬಹುದು.ಇಂಡಸ್ಟ್ರೀಯಲ್ ವೇಸ್ಟ್ ಗಳನ್ನ ನದಿಗೆ, ಕೆರೆ ಗಳಿಗೆ ಹರಿ ಬಿಡೋದ್ರಿಂದ ಜಾಸ್ತಿ ಆಗುತ್ತೆ. ಕಲುಷಿತ ನೀರನ್ನ ತರಕಾರಿಗಳಿಗೆ ಹಾಕಿದಾಗ ಈ ರೀತಿ ಆಗುತ್ತೆ. ತರಕಾರಿಗಳಿಗೆ ಸರಿಯಾದ ನೀರನ್ನ ಹಾಕಬೇಕು. ಗಲೀಜು ನೀರು ಸೇರ್ಕೊಂಡಾಗ ಮೆಟಲ್ ಪ್ರಮಾಣ ಹೆಚ್ಚಾಗಬಹುದು. ಆಹಾರದಲ್ಲೂ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತೆ. ಕಲುಷಿತ ನೀರಿನಿಂದನೇ ಈ ರೀತಿಯ ಅಂಶ ಕಂಡು ಬರುತ್ತೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸಿಕ್ತು ಸೀಸದ ಅಂಶ!ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?