AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸಿಕ್ತು ಸೀಸದ ಅಂಶ!ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?

ಕರ್ನಾಟಕ ತರಕಾರಿಗಳಲ್ಲಿ ಭಾರೀ ಲೋಹ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಹಿಂದಿನ ವರದಿಯು ಮತ್ತೊಮ್ಮೆ ದೃಢಪಟ್ಟಿದೆ. CPCB ಸಮಿತಿಯ FSSAI-ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ, 72 ಮಾದರಿಗಳಲ್ಲಿ 19 ಸೀಸದ ಅಂಶದ ಮಿತಿ ಮೀರಿವೆ. ಕೆಲ ತರಕಾರಿಗಳಲ್ಲಿ 20 ಪಟ್ಟು ಹೆಚ್ಚು ಸೀಸ, ನಿಷಿದ್ಧ ಕೀಟನಾಶಕಗಳು ಪತ್ತೆಯಾಗಿವೆ. ಮಣ್ಣು ಸಹ ಕಲುಷಿತಗೊಂಡಿದ್ದು, ಇದು ಆಹಾರ ಸುರಕ್ಷತೆಗೆ ಗಂಭೀರ ಕಳವಳ ತಂದಿದೆ ಎನ್ನಲಾಗಿದೆ.

ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸಿಕ್ತು ಸೀಸದ ಅಂಶ!ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?
ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರೀನಾ?
ಭಾವನಾ ಹೆಗಡೆ
| Edited By: |

Updated on:Aug 17, 2026 | 12:34 PM

Share

ಬೆಂಗಳೂರು, ಫೆಬ್ರವರಿ 23: ರಾಜ್ಯದ ತರಕಾರಿಗಳಲ್ಲಿ ಲೆಡ್ ಪ್ರಮಾಣ ಹೇರಳವಾಗಿ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ಕರ್ನಾಟಕದಾದ್ಯಂತ 70ಕ್ಕೂ ಹೆಚ್ಚು ತರಕಾರಿ (Lead in Vegetable) ಸ್ಯಾಂಪಲ್​ಗಳನ್ನು ತಂದು ಪರಿಶೀಲಿಸಿದಾಗ 19 ಮಾದರಿಗಳಲ್ಲಿ ಸೀಸದ ಪ್ರಮಾಣ ಮಿತಿ ಮೀರಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೀಟನಾಶಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಮಂಡಳಿ ಶಿಫಾರಸು ಮಾಡಿದೆ.

ಎರಡು ವರ್ಷಗಳ ಹಿಂದೆಯೂ ತರಕಾರಿಗಳಲ್ಲಿ ಭಾರಿ ಲೋಹಗಳ ಅಂಶ ಪತ್ತೆಯಾಗಿದೆ ಎಂದು ಅಧ್ಯಯನ ವರದಿ ಪ್ರಕಟವಾಗಿತ್ತು. 2023ರ ಅಕ್ಟೋಬರ್ 25ರಂದು ಇಎಂಪ್ರಿ ಸಂಸ್ಥೆ 400 ಮಾದರಿಗಳ ಪರಿಶೀಲನೆ ಆಧಾರವಾಗಿ ಸೀಸ ಸೇರಿದಂತೆ ಭಾರಿ ಲೋಹಗಳ ಅಸ್ತಿತ್ವವಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, CPCBಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ಆದರೀಗ ಮತ್ತೊಮ್ಮೆ ಮಾಡಿದ ಅಧ್ಯಯನದಿಂದ ರಾಜ್ಯದ ವಿವಿಧ ಭಾಗದ ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಿರುವುದು ತಿಳಿದು ಬಂದಿದೆ.

ರಾಜ್ಯದ 19 ಸ್ಯಾಂಪಲ್​ಗಳಲ್ಲಿ ಲೋಹದ ಅಂಶ ಪತ್ತೆ!

ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ ಸಿಪಿಸಿಬಿ, ಐದು ಸದಸ್ಯರ ಸಮಿತಿಯನ್ನು ರಚಿಸಿ 72 ತರಕಾರಿ ಮಾದರಿಗಳನ್ನು ಸಂಗ್ರಹಿಸಿತ್ತು. ಇದರಲ್ಲಿ ನೆಲಮಂಗಲ, ರಾಜಾಜಿನಗರ, ಕೋಲಾರ ಮಾರುಕಟ್ಟೆಗಳಿಂದ 53 ಮಾದರಿಗಳು ಹಾಗೂ ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ಕೃಷಿ ಕ್ಷೇತ್ರಗಳಿಂದ ಉಳಿದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಸೀಸ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದೆ.

ಇದನ್ನೂ ಓದಿ ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರಿಗೂ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ 80 ಕಿಮೀ ವ್ಯಾಪ್ತಿಯಲ್ಲಿ ಸಂಚಾರ!

ಯಾವ್ಯಾವ ತರಕಾರಿಗಳಲ್ಲಿ ಸೀಸ?

72 ತರಕಾರಿ ಮಾದರಿಗಳಲ್ಲಿ 19 ಮಾದರಿಗಳು ಮಾನದಂಡಕ್ಕಿಂತ ಹೆಚ್ಚಾದ ಸೀಸದ ಅಂಶ ಹೊಂದಿರುವುದು ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಆರ್ಗ್ಯಾನಿಕ್ ಎಂದು ಮಾರಾಟವಾಗಿದ್ದ ಬದನೆಕಾಯಿಯಲ್ಲಿ 1.953 ಮಿ.ಗ್ರಾಂ/ಕೆಜಿ ಸೀಸ ಪತ್ತೆಯಾಗಿದ್ದು, ಇದು ನಿಗದಿತ 0.1 ಮಿ.ಗ್ರಾಂ ಮಿತಿಗಿಂತ ಸುಮಾರು 20 ಪಟ್ಟು ಹೆಚ್ಚಾಗಿದೆ. ತೊಂಡೆಕಾಯಿ, ಅವರೆಕಾಯಿ, ಸೊಪ್ಪು, ಕೋಸು ಸೇರಿದಂತೆ ಹಲವು ತರಕಾರಿಗಳಲ್ಲೂ ಮಿತಿಗಿಂತ ಹಲವು ಪಟ್ಟು ಅಧಿಕ ಸೀಸ ಕಂಡುಬಂದಿದೆ. ಸೌತೆಕಾಯಿ, ಹೀರೇಕಾಯಿ, ಕ್ಯಾಪ್ಸಿಕಂ, ಬೀಟ್‌ರೂಟ್, ಹಾಗಲಕಾಯಿ, ಶಲಗಂ, ಸ್ಕ್ವಾಶ್ ಮತ್ತು ಮೆಣಸಿನಕಾಯಿ ಮಾದರಿಗಳಲ್ಲೂ ಅತಿಯಾದ ಅಂಶ ಪತ್ತೆಯಾಗಿದೆ.

ಮಣ್ಣಿನಲ್ಲೂ ಸಿಕ್ತು ವಿಷಕಾರಿ ಅಂಶ

ಕೋಲಾರ, ಚಿಕ್ಕಬಳ್ಳಾಪುರ ಮತ್ತು ನೆಲಮಂಗಲ ಪ್ರದೇಶಗಳಿಂದ ಸಂಗ್ರಹಿಸಿದ 26 ಮಣ್ಣಿನ ಮಾದರಿಗಳಲ್ಲಿ 23 ಮಾದರಿಗಳು ದೋಷಪೂರಿತವಾಗಿವೆ. ಇದು ಪ್ರಾಥಮಿಕ ವರದಿ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಪರಿಶೀಲನೆ ವೇಳೆ ಎಫ್‌ಎಸ್‌ಎಸ್‌ಆರ್ ಮಾನದಂಡಕ್ಕಿಂತ ಹೆಚ್ಚು ಪ್ರಮಾಣದ 12 ವಿಧದ ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ. ಕ್ಯಾಪ್ಸಿಕಂ, ಮೆಣಸಿನಕಾಯಿ (ಬಜ್ಜಿ ಮೆಣಸು), ಶುಂಠಿ ಹಾಗೂ ಸೌತೆಕಾಯಿ ಮಾದರಿಗಳಲ್ಲಿ ಅತಿಯಾದ ಕೀಟನಾಶಕ ಅಂಶ ಕಂಡುಬಂದಿದೆ.

ಭಾರೀ ವಿಷಕಾರಿ ಕೀಟನಾಶಕವಾದ ಮೊನೋಕ್ರೋಟೊಫೋಸ್ ಕೂಡ ಪತ್ತೆಯಾಗಿದ್ದು, ಭಾರತದಲ್ಲಿ 2023ರಲ್ಲಿ ಇದನ್ನು ನಿಷೇಧಿಸಲಾಗಿತ್ತು. ಮೆಣಸಿನಕಾಯಿ ಮಾದರಿಗಳಲ್ಲಿ ನಿಗದಿತ 0.2 ಮಿ.ಗ್ರಾಂ/ಕೆಜಿ ಮಿತಿಗಿಂತ ಎರಡು ಪಟ್ಟು ಹೆಚ್ಚು ಮೊನೋಕ್ರೋಟೊಫೋಸ್ ಕಂಡುಬಂದಿದೆ.

ಇದನ್ನೂ ಓದಿ ಕರ್ನಾಟಕ ಹವಾಮಾನ ವರದಿ: ಕೂಲ್ ಸಿಟಿ ಇನ್ಮುಂದೆ ಹಾಟ್ ಸಿಟಿ! ಬೆಂಗಳೂರಿಗೆ ಗರಿಷ್ಠ ತಾಪಮಾನದ ಅಲರ್ಟ್

ಇದಲ್ಲದೆ ಏಸಿಫೇಟ್, ಇಥಿಯಾನ್, ಫಿಪ್ರೋನಿಲ್ ಹಾಗೂ ಪ್ರೊಫೆನೋಫೋಸ್ ಮುಂತಾದ ಕೀಟನಾಶಕಗಳು ಸಹ ಪತ್ತೆಯಾಗಿದ್ದು, ಅವುಗಳ ವಿಷಕಾರಿ ಪರಿಣಾಮದ ಹಿನ್ನೆಲೆಯಲ್ಲಿ ಯುರೋಪಿಯನ್ ಯೂನಿಯನ್‌ನಲ್ಲಿ ಈಗಾಗಲೇ ನಿಷೇಧಿಸಲಾಗಿದೆ ಆದರೆ ನಮ್ಮಲ್ಲಿ ಬಳಕೆಯಲ್ಲಿರುವುದು ಆತಂಕ ಸೃಷ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:43 am, Mon, 23 February 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ