ತುಮಕೂರು ಜ್ಯುವೆಲರಿ ಶಾಪ್ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ತುಮಕೂರು ಜಿಲ್ಲೆಯ ಬೆಂಚೆ ಗೇಟ್‌ನ ಜಗದಂಬಾ ಜ್ಯುವೆಲರಿ ಶಾಪ್‌ನಲ್ಲಿ ನಡೆದ ಸಿನಿಮೀಯ ದರೋಡೆಯ ಸುಳಿವನ್ನು ಪೊಲೀಸರು ಭೇದಿಸಿದ್ದಾರೆ. ಮೆಣಸಿನಕಾಯಿ ಪುಡಿ ಎರಚಿ ಚಿನ್ನಾಭರಣ ದೋಚಿದ್ದ ನಾಲ್ವರು ಆರೋಪಿಗಳನ್ನು, ಸಾರ್ವಜನಿಕರ ಹಾಗೂ ಪೊಲೀಸ್ ತಂಡಗಳ ಸಹಕಾರದಿಂದ ದರೋಡೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿ, ಸಂಪೂರ್ಣ ಕದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ತುಮಕೂರು, ಫೆಬ್ರವರಿ 23: ಜಿಲ್ಲೆಯ ಬೆಂಚೆಗೇಟ್ ಗ್ರಾಮದಲ್ಲಿ ಜಗದಂಬಾ ಜ್ಯುವೆಲರಿ ಶಾಪ್‌ನಲ್ಲಿ ನಡೆದ ಚಿನ್ನಾಭರಣ ದರೋಡೆಯ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ, ಮೂವರು ಅಪರಿಚಿತ ವ್ಯಕ್ತಿಗಳು ಅಂಗಡಿಗೆ ನುಗ್ಗಿ, ಅಲ್ಲಿದ್ದ ಯುವಕ ಮತ್ತು ಅಜ್ಜಿ ಮೇಲೆ ಮೆಣಸಿನಕಾಯಿ ಪುಡಿ ಎರಚಿ, ಚಿನ್ನ, ರೋಲ್ಡ್ ಗೋಲ್ಡ್ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿ ವಾಹನದಲ್ಲಿ ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 23, 2026 10:36 PM
Latest Videos
