National Handloom Day: ಕೈಮಗ್ಗದ ಬಟ್ಟೆ ಖರೀದಿಸಿ ಒಡಿಶಾದ ಹ್ಯಾಂಡ್ಲೂಮ್ ಪರಂಪರೆ ಬೆಂಬಲಿಸಿದ ಸಚಿವ ಪ್ರಲ್ಹಾದ್ ಜೋಶಿ
'ಭಾರತದ ಕೈಮಗ್ಗವು ಪರಂಪರೆ, ಕೌಶಲ ಮತ್ತು ಕೋಟ್ಯಂತರ ಕರಕುಶಲಕರ್ಮಿಗಳ ಪರಿಶ್ರಮದ ಸಂಕೇತವಾಗಿದೆ. ರಾಷ್ಟ್ರೀಯ ಕೈಮಗ್ಗ ದಿನದಂದು ಭುವನೇಶ್ವರದಲ್ಲಿರುವ ಒಡಿಶಾ ರಾಜ್ಯದ ಉತ್ಕಳಿಕಾ ಕೋಆಪರೇಟಿವ್‌ನಿಂದ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಾನು ಈ ಪರಂಪರೆಗೆ ಬೆಂಬಲ ಸೂಚಿಸಿದೆ. ಜೊತೆಗೆ ನಮ್ಮ ದೈನಂದಿನ ಜೀವನದ ಅನಿವಾರ್ಯ ಅಂಗವಾಗಿರುವ ಯುಪಿಐ ಮೂಲಕವೇ ಹಣ ಪಾವತಿಸಿದೆ. ನಾವೆಲ್ಲರೂ ವೋಕಲ್ ಫಾರ್ ಲೋಕಲ್ (Vocal For Local) ತತ್ವವನ್ನು ಅಳವಡಿಸಿಕೊಳ್ಳೋಣ ಹಾಗೂ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸೋಣ' ಎಂದು ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.
ನವದೆಹಲಿ, ಆಗಸ್ಟ್ 7: ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ (National Handloom Day) ಹಿನ್ನೆಲೆಯಲ್ಲಿ ಇಂದು ಯಾವುದಾದರೂ ಒಂದಾದರೂ ಕೈಮಗ್ಗದ ಉತ್ಪನ್ನವನ್ನು ಖರೀದಿಸುವಂತೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆನೀಡಿದ್ದರು. ವೋಕಲ್ ಫಾರ್ ಲೋಕಲ್ ಅಡಿ ಭಾರತೀಯ ಕೈಮಗ್ಗ ಪರಂಪರೆಯನ್ನು ಬೆಂಬಲಿಸಿ, ಅದರ ವಿಡಿಯೋ ಮಾಡಿ ಶೇರ್ ಮಾಡಿಕೊಳ್ಳುವಂತೆ ಮೋದಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಕೂಡ ಒಡಿಶಾದ ಕೈಮಗ್ಗದ ಬಟ್ಟೆಗಳನ್ನು ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
‘ಭಾರತದ ಕೈಮಗ್ಗವು ಪರಂಪರೆ, ಕೌಶಲ ಮತ್ತು ಕೋಟ್ಯಂತರ ಕರಕುಶಲಕರ್ಮಿಗಳ ಪರಿಶ್ರಮದ ಸಂಕೇತವಾಗಿದೆ. ರಾಷ್ಟ್ರೀಯ ಕೈಮಗ್ಗ ದಿನದಂದು ಭುವನೇಶ್ವರದಲ್ಲಿರುವ ಒಡಿಶಾ ರಾಜ್ಯದ ಉತ್ಕಳಿಕಾ ಕೋಆಪರೇಟಿವ್‌ನಿಂದ ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಾನು ಈ ಪರಂಪರೆಗೆ ಬೆಂಬಲ ಸೂಚಿಸಿದೆ. ಜೊತೆಗೆ ನಮ್ಮ ದೈನಂದಿನ ಜೀವನದ ಅನಿವಾರ್ಯ ಅಂಗವಾಗಿರುವ ಯುಪಿಐ ಮೂಲಕವೇ ಹಣ ಪಾವತಿಸಿದೆ. ನಾವೆಲ್ಲರೂ ವೋಕಲ್ ಫಾರ್ ಲೋಕಲ್ (Vocal For Local) ತತ್ವವನ್ನು ಅಳವಡಿಸಿಕೊಳ್ಳೋಣ ಹಾಗೂ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸೋಣ’ ಎಂದು ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೈ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೆಹಲಿಯಲ್ಲಿ ಭಾರೀ ಮಳೆ; ರಸ್ತೆಯಲ್ಲಿ ನಿಂತ ನೀರಲ್ಲಿ ಈಜಾಡಿದ ಮಕ್ಕಳು
5 ಸ್ಟಾರ್ ಹೋಟೆಲ್ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ
ಕಬಿನಿ ನದಿ ಪಾತ್ರದಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚನೆ

