5 ಸ್ಟಾರ್ ಹೋಟೆಲ್‌ಗಳಲ್ಲಿ ಕೊಳೆತ ತರಕಾರಿ, ಮಾಂಸ ಪತ್ತೆ: ಕಠಿಣ ಕ್ರಮ ಎಂದ ಸಚಿವ ಯುಟಿ ಖಾದರ್
ಮುಖ್ಯಾಂಶಗಳು
- ಜನರಿಗೆ ಆಹಾರದ ಸುರಕ್ಷತೆ ಬಗ್ಗೆ ತಿಳಿಸೋದು ನಮ್ಮ ಕರ್ತವ್ಯ
- ಆಹಾರ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕೊಳೆತ ಈರುಳ್ಳಿ, ಹೆಪ್ಪುಗಟ್ಟಿದ ಮಾಂಸ ಪತ್ತೆ
- ನಿಯಮ ಮೀರಿದರೆ ಕಠಿಣ ಕ್ರಮ ಎಂದ ಸಚಿವ
ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಪಂಚತಾರಾ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ ತಪಾಸಣೆ ಕುರಿತು ಮಾತನಾಡಿದ್ದಾರೆ. ಜನರಿಗೆ ಗುಣಮಟ್ಟದ ಆಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ. ತಪಾಸಣೆಯ ವೇಳೆ ಅವಧಿ ಮೀರಿದ ಹಾಲು, ಕೊಳೆತ ಈರುಳ್ಳಿ ಮತ್ತು ಆಮದು ಮಾಡಿದ ಮಾಂಸ ಕಂಡುಬಂದಿದೆ. ರೋಗಗಳ ಹೆಚ್ಚಳವನ್ನು ತಡೆಗಟ್ಟಲು ಈ ಕ್ರಮಗಳು ಅವಶ್ಯಕ ಎಂದು ಅವರು ಹೇಳಿದ್ದಾರೆ.
ಮಂಗಳೂರು, ಆಗಸ್ಟ್ 07: ‘ರಾಜ್ಯದ ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕೊಳೆತ ಈರುಳ್ಳಿ, ಡೆನ್ಮಾರ್ಕ್ನ ಹೆಪ್ಪುಗಟ್ಟಿದ ಮಾಂಸ, ಅವಧಿ ಮುಗಿದ ಹಾಲು ಪತ್ತೆ ಆಗಿದೆ. ಎಲ್ಲ ವಸ್ತುಗಳ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಮುಂದೆಯೂ ಈ ತಪಾಸಣೆಯನ್ನು ಮುಂದುವರಿಸುತ್ತೇವೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜನರಿಗೆ ಆಹಾರದ ಸುರಕ್ಷತೆ ಬಗ್ಗೆ ತಿಳಿಸೋದು ನಮ್ಮ ಕರ್ತವ್ಯ. ಸ್ಟಾರ್ ಹೋಟೆಲ್‌ಗಳಲ್ಲಿ ಅಧಿಕಾರಿಗಳು ತಪಾಸಣೆ ಮಾಡಲ್ಲ ಅಂತಾ ಭಾವನೆ ಇದೆ. ಆದರೆ ಮೊದಲು ದೊಡ್ಡವರನ್ನು ಹಿಡಿಯಬೇಕು ಆಮೇಲೆ ಎಲ್ಲ ಸರಿ ಆಗುತ್ತದೆ. ಇನ್ನು ಮಾಂಸ ಯಾವಾಗ ತಂದಿರುವುದು, ಫ್ರೆಶ್ ಎಂಬುದರ ಬಗ್ಗೆ ಸೂಚನ ಫಲಕ ಹಾಕಬೇಕು. ಸದ್ಯ ಇದು ತಪಾಸಣೆ ಅಷ್ಟೇ, ಮುಂದೆ ನಿಯಮ ಮೀರಿದರೆ ಕಠಿಣ ಕ್ರಮ ನಿಶ್ಚಿತ’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಸ್ತೆ ಮಧ್ಯೆ ದೊಡ್ಡ ಕಂದಕ; ಇದು 'ನರಕದ ಹಾದಿ' ಎಂದು ನೆಟ್ಟಿಗರ ಆಕ್ರೋಶ
ದುಬಾರೆ ದುರಂತಕ್ಕೆ 2.5 ತಿಂಗಳು: ಇಂದಿಗೂ ಜಾರಿಯಾಗದ ಎಸ್ಒಪಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ದಿಲ್ಲಿಯತ್ತ ಡಿಕೆಶಿ
ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಜನರು

