Video: ತನಗೆ ಕಾಟ ಕೊಟ್ಟ ಕೋತಿಗೆ ಪಂಚ್ ಕೊಡ್ತಾ ಈ ಕೋತಿ ಮರಿ ‘ಪಂಚ್’?
ಈ ಕೋತಿ ಮರಿ ಹುಟ್ಟಿನಿಂದಲೇ ಒಬ್ಬಂಟಿ, ಅದು ತೂಕ ಕಡಿಮೆ ಇದ್ದಿದ್ದರಿಂದ ತಾಯಿಗೂ ಅದನ್ನು ಸಾಕಲು ತಿಳಿಯದೆ ಬಿಟ್ಟು ಹೋಗಿತ್ತು. ಜಪಾನ್ನ ಮೃಗಾಲಯದಲ್ಲಿ ಅದನ್ನು ಬಿಡಲಾಗಿತ್ತು. ಆದರೆ ಅದಕ್ಕೆ ಸ್ನೇಹಿತರು ಯಾರೂ ಇರಲಿಲ್ಲ, ಕೋತೊಯನ್ನೇ ಹೋಲುವ ಗೊಂಬೆಯನ್ನೇ ಅದು ತನ್ನ ಕುಟುಂಬವನ್ನಾಗಿ ಮಾಡಿಕೊಂಡಿತ್ತು. ಉಳಿದ ಕೋತಿಗಳೆಲ್ಲಾ ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಅದಕ್ಕೆ ಕೆಲವು ಕೋತಿಗಳು ಫ್ರೆಂಡ್ಶಿಪ್ ಮಾಡಿವೆ ಎನ್ನುವ ಮಾಹಿತಿಯೂ ಇದೆ.
ಟೋಕಿಯೋ, ಫೆಬ್ರವರಿ 23: ಈ ಕೋತಿ ಮರಿ ಹುಟ್ಟಿನಿಂದಲೇ ಒಬ್ಬಂಟಿ, ಅದು ತೂಕ ಕಡಿಮೆ ಇದ್ದಿದ್ದರಿಂದ ತಾಯಿಗೂ ಅದನ್ನು ಸಾಕಲು ತಿಳಿಯದೆ ಬಿಟ್ಟು ಹೋಗಿತ್ತು. ಜಪಾನ್ನ ಮೃಗಾಲಯದಲ್ಲಿ ಅದನ್ನು ಬಿಡಲಾಗಿತ್ತು. ಆದರೆ ಅದಕ್ಕೆ ಸ್ನೇಹಿತರು ಯಾರೂ ಇರಲಿಲ್ಲ, ಕೋತೊಯನ್ನೇ ಹೋಲುವ ಗೊಂಬೆಯನ್ನೇ ಅದು ತನ್ನ ಕುಟುಂಬವನ್ನಾಗಿ ಮಾಡಿಕೊಂಡಿತ್ತು. ಉಳಿದ ಕೋತಿಗಳೆಲ್ಲಾ ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಅದಕ್ಕೆ ಕೆಲವು ಕೋತಿಗಳು ಫ್ರೆಂಡ್ಶಿಪ್ ಮಾಡಿವೆ ಎನ್ನುವ ಮಾಹಿತಿಯೂ ಇದೆ. @ Pediavenir ಎಂಬ ಎಕ್ಸ್ ಅಕೌಂಟ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಆದರೆ ಈಗ ಹೇಳಲು ಹೊರಟಿರುವ ವಿಚಾರ ಅದಲ್ಲ, ಆ ಮರಿಗೆ ಮೊದಲು ತೊಂದರೆ ಕೊಟ್ಟಿದ್ದ ಕೋತಿ ಮೇಲೆ ಸೇಡು ತೀರಿಸಿಕೊಳ್ಳುವ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಈ ಮರಿ ದೊಡ್ಡ ಕೋತಿಗೆ ಪಂಚ್ ಕೊಡುತ್ತಿರುವುದು, ಹಾರಿ ಒದೆಯುತ್ತಿರುವುದನ್ನು ಕಾಣಬಹುದು. ಆದರೆ ಇದು ಸತ್ಯ ಅಲ್ಲ ಇದು ಎಐ ರಚಿತ ವಿಡಿಯೋ ಆಗಿದ್ದು, ಮರಿ ಹೀಗೆ ಸೇಡು ತೀರಿಸಿಕೊಂಡರೆ ಹೇಗಿರುತ್ತೆ ಎಂಬುದಕ್ಕೆ ಈ ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಪಂಚ್ ಜುಲೈ 26, 2025 ರಂದು ಜನಿಸಿದ್ದು, ಕೇವಲ 500 ಗ್ರಾಂ ತೂಕವಿತ್ತು. ಮೈನಿಚಿ ಶಿಂಬುನ್ ವರದಿ ಮಾಡಿದಂತೆ, ಪಂಚ್ನ ತಾಯಿ ಮೊದಲ ಬಾರಿಗೆ ಗರ್ಭ ಧರಿಸಿತ್ತು, ಜನನದ ನಂತರ ಅವನನ್ನು ನೋಡಿಕೊಳ್ಳಲಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 23, 2026 02:01 PM
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

