Oxygen Cylinder: ಕೊರೊನಾದಿಂದ ಕಂಗಾಲಾದ ಬೆಂಗಳೂರಿಗೆ ಉಚಿತ ಆಕ್ಸಿಜನ್​ ನೀಡಲು ಮುಂದೆ ಬಂದ ಸುನೀಲ್​ ಶೆಟ್ಟಿ

Suniel Shetty: ಈ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸಿ. ಸದ್ಯಕ್ಕೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಸುನೀಲ್​ ಶೆಟ್ಟಿ ಹೇಳಿದ್ದಾರೆ.

Oxygen Cylinder: ಕೊರೊನಾದಿಂದ ಕಂಗಾಲಾದ ಬೆಂಗಳೂರಿಗೆ ಉಚಿತ ಆಕ್ಸಿಜನ್​ ನೀಡಲು ಮುಂದೆ ಬಂದ ಸುನೀಲ್​ ಶೆಟ್ಟಿ
ಸುನೀಲ್​ ಶೆಟ್ಟಿ - ಆಕ್ಸಿಜನ್​ ಸಿಲಿಂಡರ್​​​
Follow us
ಮದನ್​ ಕುಮಾರ್​
|

Updated on: Apr 29, 2021 | 11:48 AM

ಭಾರತದಲ್ಲಿ ಕೊರನಾ ವೈರಸ್​ ಹಾವಳಿ ಮಿತಿ ಮೀರಿದೆ. ಈ ಸಂದರ್ಭದಲ್ಲಿ ಕೆಲವು ಸೆಲೆಬ್ರಿಟಿಗಳು ವಿದೇಶದಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಬಹುತೇಕ ನಟ-ನಟಿಯರು ತಮ್ಮ ಐಷಾರಾಮಿ ಮನೆಗಳಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಕೆಲವರು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಮೊದಲಿನಿಂದಲೂ ಬಾಲಿವುಡ್​ ನಟ ಸೋನು ಸೂದ್​ ಅವರು ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈಗ ನಟ ಸುನೀಲ್​ ಶೆಟ್ಟಿ ಕೂಡ ಸಾಥ್​ ನೀಡುತ್ತಿದ್ದಾರೆ. ಅದರಲ್ಲೂ ಅವರು ಬೆಂಗಳೂರಿನ ಜನರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಆಕ್ಸಿಜನ್​ ಕೊರತೆ ತೀವ್ರವಾಗಿ ಕಾಡುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ಕೊವಿಡ್​ ಸೋಂಕಿತರಿಗೆ ಉಸಿರಾಟದ ತೊಂದರೆ ಆಗುತ್ತಿದೆ. ಸೂಕ್ತ ಕಾಲಕ್ಕೆ ಆಕ್ಸಿಜನ್​ ಸಿಲಿಂಡರ್​ಗಳು ಸಿಗದೇ ಅನೇಕರು ಮೃತಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಮತ್ತು ಮುಂಬೈ ನಗರದ ಜನರಿಗೆ ಆಕ್ಸಿಜನ್​ ಸಿಗುವಂತೆ ಮಾಡಲು ಸುನೀಲ್​ ಶೆಟ್ಟಿ ಪಣತೊಟ್ಟಿದ್ದಾರೆ.

‘ಇದು ನಮ್ಮೆಲ್ಲರಿಗೂ ಪರೀಕ್ಷೆಯ ಕಾಲ. ಆದರೆ ಜನರು ಒಬ್ಬರಿಗೊಬ್ಬರು ಸಹಾಯ ಮಾಡಲು ಕೈ ಜೋಡಿಸುತ್ತಿರುವುದು ಭರವಸೆಯ ಕಿರಣದಂತೆ ಕಾಣಿಸಿದೆ. ಉಚಿತವಾಗಿ ಆಕ್ಸಿಜನ್​ ನೀಡುವ ಈ ಅಭಿಯಾನದಲ್ಲಿ ಭಾಗಿ ಆಗುತ್ತಿರುವದಕ್ಕೆ ನಾನು ಧನ್ಯ ಎನಿಸುತ್ತಿದೆ’ ಎಂದು ಸುನೀಲ್​ ಶೆಟ್ಟಿ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಕೆವಿನ್​ ಫೌಂಡೇಶನ್​ ಜೊತೆ ಸೇರಿ ಅವರು ಈ ಕಾರ್ಯವನ್ನು ಮಾಡುತ್ತಿದ್ದಾರೆ. ಫೀಡ್​ ಮೈ ಸಿಟಿ ಹೆಸರಿನ ಈ ಅಭಿಮಾನಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ.

‘ಈ ಮೂಲಕ ತನ್ನ ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ನಿಮಗೆ ಸಹಾಯ ಬೇಕಾಗಿದ್ದರೆ ಅಥವಾ ಸಹಾಯದ ಅವಶ್ಯಕತೆ ಇರುವ ಯಾರಾದರೂ ನಿಮಗೆ ಗೊತ್ತಿದ್ದರೆ ನನಗೆ ಮೆಸೇಜ್​ ಮಾಡಿ. ಈ ಅಭಿಯಾನದಲ್ಲಿ ನೀವು ಭಾಗಿಯಾಗುವುದಾದರೆ, ಆ ಮೂಲಕ ಕೊಡುಗೆ ನೀಡುವುದಿದ್ದರೆ ನನಗೆ ಮೆಸೇಜ್​ ಕಳುಹಿಸಿ. ಈ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸಿ. ಸದ್ಯಕ್ಕೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಸುನೀಲ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.

ಮೂಲತಃ ಕರ್ನಾಟಕದವರಾದ ಸುನೀಲ್​ ಶೆಟ್ಟಿ ಹೆಚ್ಚು ಮಿಂಚಿದ್ದು ಬಾಲಿವುಡ್​ನಲ್ಲಿ. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಸುದೀಪ್​ ನಟನೆಯ ಪೈಲ್ವಾನ್​ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟರು. ಈಗ ಅವರು ಬೆಂಗಳೂರಿನ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದರಿಂದ ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Oxygen Cylinder: ಆಸ್ಪತ್ರೆಗೆ ಆಕ್ಸಿಜನ್​ ನೀಡಲು ಮುಂದಾದ ನಟಿ ಸುಶ್ಮಿತಾ ಸೇನ್​​ಗೆ ತಪ್ಪಲಿಲ್ಲ ಟ್ರೋಲ್ ಕಾಟ

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ