AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ

ರಾಹುಲ್​ ಮತ್ತು ಆಥಿಯಾ ಡೇಟಿಂಗ್​ ನಡೆಸುತ್ತಿದ್ದಾರೆ. ಕೆಲವು ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

ಬಾಯ್​ಫ್ರೆಂಡ್​ ರಾಹುಲ್​ ಜತೆ ಫೋಟೋ ಹಂಚಿಕೊಂಡ ಆಥಿಯಾ; ಇದು ನಿಜ ಎಂದ ಸುನೀಲ್​ ಶೆಟ್ಟಿ
ರಾಹುಲ್​ ಜತೆ ಆಥಿಯಾ
ರಾಜೇಶ್ ದುಗ್ಗುಮನೆ
|

Updated on: Apr 19, 2021 | 4:15 PM

Share

ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್​. ರಾಹುಲ್​ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಗುಸುಗುಸು ಸಾಮಾಜಿಕ ಜಾಲತಾಣದಲ್ಲಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಇದಕ್ಕೆ ಯಾರಿಂದಲೂ  ಉತ್ತರ ಸಿಕ್ಕಿಲ್ಲ. ಈಗ ರಾಹುಲ್​ ಜನ್ಮದಿನಕ್ಕೆ ಆಥಿಯಾ ಹಂಚಿಕೊಂಡ ಫೋಟೋ ಒಂದು ಸಾಕಷ್ಟು ವೈರಲ್​ ಆಗಿದೆ. ಇದರ ಜತೆಗೆ ಆಥಿಯಾ ತಂದೆ ಹಾಗೂ ನಟ ಸುನೀಲ್​ ಶೆಟ್ಟಿ ಇದಕ್ಕೆ ಹಾಕಿರುವ ಕಮೆಂಟ್​ ಕೂಡ ಎಲ್ಲರ ಗಮನಸೆಳೆಯುತ್ತಿದೆ. ರಾಹುಲ್​ ಮತ್ತು ಆಥಿಯಾ ಡೇಟಿಂಗ್​ ನಡೆಸುತ್ತಿದ್ದಾರೆ. ಕೆಲವು ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ. ಆದರೆ, ಎಲ್ಲಿಯೂ ಇಬ್ಬರೂ ಪ್ರೀತಿಸುತ್ತಿರುವ ವಿಚಾರ ಈವರೆಗೆ ಅಧಿಕೃತ ಮಾಡಿಲ್ಲ.

ಏಪ್ರಿಲ್​ 18ರಂದು ರಾಹುಲ್​ ಜನ್ಮದಿನ. ಈ ವಿಶೇಷ ದಿನದಂದು ಆಥಿಯಾ ಶೆಟ್ಟಿ ರಾಹುಲ್​ ಜತೆ ಇರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕನ್ನಡಿ ಎದುರು ಇಬ್ಬರೂ ನಿಂತಿದ್ದಾರೆ. ಈ ಫೋಟೋ ನೋಡಿ ‘ನಿನಗೆ ಕೃತಜ್ಞನಾಗಿದ್ದೇನೆ. ಜನ್ಮದಿನದ ಶುಭಾಶಯಗಳು’ ಎಂದು ​ ಬರೆದುಕೊಂಡಿದ್ದಾರೆ. ಇದಕ್ಕೆ ಆಥಿಯಾ ತಂದೆ ಸುನೀಲ್​ ಶೆಟ್ಟಿ ಕಮೆಂಟ್​ ಮಾಡಿದ್ದು, ‘ನಿಜ’ ಎಂದಿದ್ದಾರೆ.

ಈ ಫೋಟೋ ನೋಡಿದ ಕ್ರಿಕೆಟಿಗರು ಕೂಡ ಸಾಕಷ್ಟು ಕಮೆಂಟ್​ ಮಾಡಿದ್ದಾರೆ. ಹಾರ್ದಿಕ್​ ಪಾಂಡ್ಯ ಮೈ ಕ್ಯೂಟೀಸ್​ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕೂಡ ಈ ಜೋಡಿ ಸಖತ್​ ಆಗಿದೆ ಎಂದು ಉತ್ತರಿಸಿದ್ದಾರೆ.

ರಾಹುಲ್​ ಸದ್ಯ ಐಪಿಎಲ್​ 14ನೇ ಸೀಸನ್​ನಲ್ಲಿ ಪಂಜಾಬ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯದಲ್ಲಿ ಸೋಲು ಕಂಡು ಒಂದು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Kichcha Sudeep: ಸುದೀಪ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಪ್ರಿಯಾ; ಈಗ ಹೇಗಿದ್ದಾರೆ ಕಿಚ್ಚ?

KL Rahul Birthday : ಪ್ರಿಯತಮೆ ಆಥಿಯಾ ಶೆಟ್ಟಿ ಜೊತೆ ಕೆ.ಎಲ್. ರಾಹುಲ್ ಕಾಣಿಸಿಕೊಂಡ 5 ಅಪರೂಪದ ಫೋಟೋಗಳು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್