Kichcha Sudeep: ಸುದೀಪ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಪ್ರಿಯಾ; ಈಗ ಹೇಗಿದ್ದಾರೆ ಕಿಚ್ಚ?

ಬಿಗ್ ಬಾಸ್ ಸ್ಪರ್ಧಿಗಳು ಬರೆದ ಪತ್ರವನ್ನು ಪ್ರಿಯಾ ಸುದೀಪ್ ಓದಿದ್ದಾರೆ. ಎಲ್ಲರ ಪ್ರೀತಿ ಕಂಡು ಅವರು ಖುಷಿ ಆಗಿದ್ದಾರೆ. ಜೊತೆಗೆ ಕಿಚ್ಚನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

Kichcha Sudeep: ಸುದೀಪ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಪ್ರಿಯಾ; ಈಗ ಹೇಗಿದ್ದಾರೆ ಕಿಚ್ಚ?
ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: Apr 19, 2021 | 2:17 PM

ನಟ ಸುದೀಪ್​ ಅವರಿಗೆ ಆರೋಗ್ಯದಲ್ಲಿ ವ್ಯತ್ಯಯ ಆಗಿದ್ದು, ಆ ಬಗ್ಗೆ ಅಭಿಮಾನಿಗಳು ಬೇಸರಪಟ್ಟುಕೊಂಡಿದ್ದಾರೆ. ಅನಾರೋಗ್ಯದ ಕಾರಣ ಕಿಚ್ಚ ಎಲ್ಲ ಕೆಲಸಗಳಿಗೂ ಬ್ರೇಕ್​ ನೀಡಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಯಾವಾಗಲೂ ಆ್ಯಕ್ಟೀವ್​ ಆಗಿರುವ ಸುದೀಪ್​ ಅವರಿಗೆ ಈಗ ಆರೋಗ್ಯ ಕೈ ಕೊಟ್ಟಿರುವುದು ಫ್ಯಾನ್ಸ್​ ಚಿಂತೆಗೆ ಕಾರಣ ಆಗಿದೆ. ಹಾಗಾದರೆ ಕಿಚ್ಚ ಈಗ ಹೇಗಿದ್ದಾರೆ? ಆ ಬಗ್ಗೆ ಅಪ್​ಡೇಟ್​ ಸಿಕ್ಕಿದೆ.

ಅನಾರೋಗ್ಯದ ಕಾರಣದಿಂದಾಗಿ ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ 7ನೇ ವಾರದ ವೀಕೆಂಡ್ ಎಪಿಸೋಡ್​ಗಳನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ವೀಕ್ಷಕರು ಮತ್ತು ಬಿಗ್​ ಬಾಸ್​ ಸ್ಪರ್ಧಿಗಳು ಬೇಸರ ಮಾಡಿಕೊಂಡಿದ್ದರು. ಸುದೀಪ್​ ಬೇಗ ಗುಣಮುಖರಾಗಲಿ ಎಂದು ಹಾರೈಸಿ, ಬಿಗ್​ ಬಾಸ್​ ಮನೆಯಿಂದಲೇ ಕಿಚ್ಚಿನಿಗೆ ಪ್ರೀತಿಯ ಪತ್ರ ಬರೆಯಲಾಗಿದೆ. ಆ ಪತ್ರ ಓದಿ ಸುದೀಪ್​ ಪತ್ನಿ ಪ್ರಿಯಾ ಪತ್ರಿಕ್ರಿಯೆ ನೀಡಿದ್ದಾರೆ.

ಬಿಗ್​ ಬಾಸ್​ ಸ್ಪರ್ಧಿಗಳು ಬರೆದ ಪತ್ರವನ್ನು ಪ್ರಿಯಾ ಓದಿದ್ದಾರೆ. ಎಲ್ಲರ ಪ್ರೀತಿ ಕಂಡು ಅವರು ಖುಷಿ ಆಗಿದ್ದಾರೆ. ಆ ಬಗ್ಗೆ ಟ್ವಿಟರ್​ನಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಪ್ರೀತಿಭರಿತ ಪತ್ರ ಮತ್ತು ರುಚಿಕರವಾದ ಅಡುಗೆ ಕಳಿಸಿದ್ದಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳು ಮತ್ತು ಕಲರ್ಸ್​ ಕನ್ನಡ ವಾಹಿನಿಗೆ ಧನ್ಯವಾದಗಳು’ ಎಂದು ಪ್ರಿಯಾ ಟ್ವೀಟ್​ ಮಾಡಿದ್ದಾರೆ. ಅದರ ಜೊತೆಗೆ ಸುದೀಪ್​ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಸುದೀಪ್​ ತುಂಬ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಿಮ್ಮೆಲ್ಲರ ಜೊತೆ ಮಾತನಾಡಲು ಅವರು ಆದಷ್ಟು ಬೇಗ ಬರುತ್ತಾರೆ’ ಎನ್ನುವ ಮೂಲಕ ಎಲ್ಲ ಅಭಿಮಾನಿಗಳಿಗೂ ಕಿಚ್ಚ ಆರೋಗ್ಯದ ಬಗ್ಗೆ ಪ್ರಿಯಾ ಅಪ್​ಡೇಟ್​ ನೀಡಿದ್ದಾರೆ. ಇನ್ನು, ಬಿಗ್​ ಬಾಸ್​ ಸ್ಪರ್ಧಿಗಳು ಬರೆದ ಪತ್ರವನ್ನು ಸುದೀಪ್​ ಕೂಡ ಓದಿದ್ದಾರೆ. ಎಲ್ಲರ ಪ್ರೀತಿ ಕಂಡು ಭಾವುಕರಾಗಿರುವ ಅವರು ದೊಡ್ಮನೆಯ ಸದಸ್ಯರಿಗಾಗಿ ಒಂದು ವಾಯ್ಸ್​ ಮೆಸೇಜ್​ ಕಳಿಸಿದ್ದಾರೆ.

ಎಲ್ಲರಿಗೂ ನನ್ನ ಹಾಯ್​. ನೀವು ಬರೆದ ಪತ್ರ ಓದಿದ್ದೇನೆ. ಪ್ರತಿಕ್ರಿಯಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು. ಸ್ವಲ್ಪ ಆರೋಗ್ಯ ಸರಿ ಇಲ್ಲ. ಆದಷ್ಟು ಬೇಗ ಗುಣವಾಗುವ ಭರವಸೆ ಇದೆ. ನೀವು ಕಳಿಸಿದ ಅಡುಗೆಯ ರುಚಿ ಸವಿದೆ. ತುಂಬಾ ಚೆನ್ನಾಗಿ ಮಾಡಿದ್ದೀರಿ. ಇಷ್ಟೊಂದು ಪ್ರೀತಿಯಿಂದ ನೀವು ಮಾಡಿ ಕಳಿಸಿದ್ದರ ಬಗ್ಗೆ ಪ್ರೀತಿ ಇದೆ. ನಾವು ಮಾಡುವ ಕೆಲವು ಕೆಲಸ ಸಾರ್ಥಕ ಅಂತ ಅನಿಸುತ್ತದೆ. ವೀಕೆಂಡ್​ ಎಪಿಸೋಡ್​ ಮಿಸ್​ ಮಾಡಲು ನನಗೂ ಇಷ್ಟ ಇಲ್ಲ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ