ಸಂಜನಾ ಗಲ್ರಾನಿಗೆ ಕೊರೊನಾ ಪಾಸಿಟಿವ್; ಇಮ್ಯುನಿಟಿ ಬೆಳೆಸಿಕೊಳ್ಳಲು ಟಿಪ್ಸ್ ಕೊಟ್ಟ ನಟಿ
ವೈದ್ಯರೊಬ್ಬರಿದ್ದಾರೆ. ಅವರು ಕೊರೊನಾ ವಾರಿಯರ್. ಹೀಗಾಗಿ ಅವರು ಸಮಾಜಕ್ಕೆ ಸರ್ವ್ ಮಾಡಲೇಬೇಕು. ಹೀಗಾಗಿ, ನನಗೆ ಕೊರೊನಾ ಬಂದಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ವೈರಸ್ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಕೊರೊನಾ ಬಿಟ್ಟು ಬಿಡದೆ ಕಾಡುತ್ತಿದೆ. ಈಗ ನಟಿ ಸಂಜನಾ ಗಲ್ರಾನಿ ಅವರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಸಂಜನಾ, ನಮ್ಮ ಕುಟುಂಬದಲ್ಲಿ ಓರ್ವ ಡಾಕ್ಟರ್ ಇದ್ದಾರೆ. ಅವರು ಕೊರೊನಾ ವಾರಿಯರ್. ಹೀಗಾಗಿ ಅವರು ಸಮಾಜಕ್ಕೆ ಸರ್ವ್ ಮಾಡಲೇಬೇಕು. ಹೀಗಾಗಿ, ನನಗೆ ಕೊರೊನಾ ಬಂದಿದೆ. ಆದರೆ, ನನಗೆ ಭಯ ಇಲ್ಲ. ಅವರು ಹೇಳಿದ ಟ್ಯಾಬ್ಲೆಟ್ ತೆಗೆದುಕೊಂಡೆ. ವಿಟಾಮಿನ್ ಮಾತ್ರೆಗಳನ್ನು ತೆಗೆದುಕೊಂಡೆ. ಈ ಮೂಲಕ ಇಮ್ಯುನಿಟಿ ಬೆಳೆಸಿಕೊಂಡೆ ಎಂದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಡ್ರಗ್ ಕೇಸ್ನಲ್ಲಿ ಅನೇಕರು ಜೈಲು ಪಾಲಾಗಿದ್ದರು. ಇದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಸಂಜನಾ ಅನೇಕ ದಿನ ಜೈಲಿನಲ್ಲಿದ್ದು ಬಂದಿದ್ದರು. ಜಾಮೀನು ಪಡೆದು ಅವರು ಜೈಲಿನಿಂದ ಹೊರ ಬಂದಿದ್ದರು. ಇದಾದ ಬೆನ್ನಲ್ಲೇ ಅವರಿಗೆ, ಖಿನ್ನತೆ ಕಾಣಿಸಿಕೊಂಡಿತ್ತು. ಇದರಿಂದ ಅವರಿಗೆ ಬೊಜ್ಜು ಕಾಣಿಸಿಕೊಂಡಿತ್ತು. ಈ ಬಗ್ಗೆ ರೀಲ್ಸ್ ಮಾಡಿ ಇನ್ಸ್ಟ್ರಾಗ್ರಾಂನಲ್ಲಿ ವಿಡಿಯೋ ಸಂಜನಾ ವಿಡಿಯೋ ಹಂಚಿಕೊಂಡಿದ್ದರು. ಡಿಪ್ರೆಷನ್ನಿಂದ ಫ್ಯಾಟ್ ಬಂದಿದೆ ಎಂದು ಬೇಸರ ಹೊರ ಹಾಕಿದ್ದರು.
ಇದನ್ನೂ ಓದಿ: ಜಸ್ಪ್ರೀತ್ ಬೂಮ್ರಾಗಿಂತ ಸಂಜನಾ ಗಣೇಶನ್ ವಯಸ್ಸಿನಲ್ಲಿ ದೊಡ್ಡವರು; ಎಷ್ಟು ವರ್ಷ ಗ್ಯಾಪ್ ಗೊತ್ತಾ?
ಹೇಗಿದ್ದೆ, ಹೇಗಾದೆ; ಟಮ್ಮಿ ಫ್ಯಾಟ್ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು?
Published On - 10:26 pm, Mon, 19 April 21