ಜಸ್ಪ್ರೀತ್ ಬೂಮ್ರಾಗಿಂತ ಸಂಜನಾ ಗಣೇಶನ್ ವಯಸ್ಸಿನಲ್ಲಿ ದೊಡ್ಡವರು; ಎಷ್ಟು ವರ್ಷ ಗ್ಯಾಪ್ ಗೊತ್ತಾ?
ತನ್ನ ಮದುವೆಯ ಫೋಟೋಗಳನ್ನ ಸ್ವತಃ ಮದುಮಗ ಜಸ್ಪ್ರೀತ್, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅವರ ಫೋಟೋಗೆ ಅಭಿಮಾನಿಗಳು ಸಂತಸ ವ್ಯಕ್ತಪರಿಸಿದ್ದರು.
ಕ್ರಿಕೆಟ್ ವೇಗಿ ಜಸ್ಪ್ರೀತ್ ಬೂಮ್ರಾ ವೈಯಕ್ತಿಕ ಕಾರಣ ನೀಡಿ ಭಾರತ vs ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದರು. ನಂತರ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಮದುವೆ ಆಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ವಿಶೇಷ ಎಂದರೆ, ಸಂಜನಾ ಗಣೇಶನ್ ಅವರಿಗಿಂತ ಬೂಮ್ರಾ ಚಿಕ್ಕವರು! ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಗೋವಾದಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಬುಮ್ರಾ- ಸಂಜನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಕೆಲವೇ ಮಂದಿ ಆಗಮಿಸಿದ್ದರು. ಟೀಂ ಇಂಡಿಯಾದ ಯಾವ ಆಟಗಾರರು ಸಹ ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಇಬ್ಬರೂ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಬುಮ್ರಾ ಮತ್ತು ಸಂಜನಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
View this post on Instagram
ತನ್ನ ಮದುವೆಯ ಫೋಟೋಗಳನ್ನ ಸ್ವತಃ ಮದುಮಗ ಜಸ್ಪ್ರೀತ್, ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಅವರ ಫೋಟೋಗೆ ಅಭಿಮಾನಿಗಳು ಸಂತಸ ವ್ಯಕ್ತಪರಿಸಿದ್ದರು.
ಸಂಜನಾ ಭಾರತದ ಅತ್ಯಂತ ಜನಪ್ರಿಯ ಕ್ರೀಡಾ ಪತ್ರಕರ್ತರಲ್ಲಿ ಒಬ್ಬರು. ಡಿಜಿಟಲ್ ಹೋಸ್ಟ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನ ಪ್ರಸಿದ್ಧ ಟಿವಿ ನಿರೂಪಕಿ. ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ಹಿಡಿದು ಟಾಕ್ ಶೋಗಳವರೆಗೆ, ಸಂಜನಾ ಅವರು ಕ್ರೀಡಾ ನಿರೂಪಕಿಯಾಗಿ ತಮ್ಮ ವೃತ್ತಿಜೀವನದಲ್ಲಿ ಹಲವಾರು ಕ್ರೀಡಾ ಕ್ರೀಡಾಪಟುಗಳನ್ನು ಸಂದರ್ಶನ ಮಾಡಿದ್ದಾರೆ. ಸಂಜನಾ 2019 ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕ್ರಮದ ಸಂದರ್ಭದಲ್ಲಿ ಬುಮ್ರಾ ಅವರನ್ನು ಸಂದರ್ಶಿಸಿದ್ದರು. ಈ ವಿಡಿಯೋಗಳು ಭಾರೀ ವೈರಲ್ ಆಗಿತ್ತು.
View this post on Instagram
ಸದ್ಯ ಸುದ್ದಿ ಇರುವ ವಿಚಾರ ಎಂದರೆ ಇಬ್ಬರ ವಯಸ್ಸಿನ ಗ್ಯಾಪ್. ಬೂಮ್ರಾ ಹುಟ್ಟಿದ್ದು, 1993ರ ಡಿಸೆಂಬರ್ 6ರಂದು. ಸಂಜನಾ ಹುಟ್ಟಿದ್ದು, 1991ರ ಮೇ 6ರಂದು. ಅಂದರೆ, ಬೂಮ್ರಾಗಿಂತ ಸಂಜನಾ ಸುಮಾರು ಎರಡುವರೆ ವರ್ಷ ದೊಡ್ಡವರು. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ! ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ ಜಸ್ಪ್ರೀತ್ ಬುಮ್ರಾ ಹಂಚಿಕೊಂಡ ನವಜೋಡಿಗಳ ಫೋಟೋ!!
Published On - 6:31 pm, Sun, 21 March 21