ಹೇಗಿದ್ದೆ, ಹೇಗಾದೆ; ಟಮ್ಮಿ ಫ್ಯಾಟ್ ತೋರಿಸಿ ಸಂಜನಾ ಗಲ್ರಾನಿ ಹೇಳಿದ್ದೇನು?
ನಟ ನಟಿಯರಿಗೆ ಮುಖ್ಯವಾಗಿ ಬೇಕಾಗಿದ್ದು ಫಿಟ್ನೆಸ್. ತೆರೆಮೇಲೆ ಉತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದರೆ ಅವರು ಫಿಟ್ ಆಗಿ ಇರಲೇಬೇಕು. ಇದಕ್ಕಾಗಿ ಅವರು ನಿತ್ಯ ಜಿಮ್-ಯೋಗ ಮಾಡುತ್ತಾರೆ.
ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಡ್ರಗ್ ಕೇಸ್ನಲ್ಲಿ ಅನೇಕರು ಜೈಲು ಪಾಲಾಗಿದ್ದರು. ಇದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಒಬ್ಬರು. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಸಂಜನಾ ಅನೇಕ ದಿನ ಜೈಲಿನಲ್ಲಿದ್ದು ಬಂದಿದ್ದರು. ಈಗ ಜಾಮೀನು ಪಡೆದು ಅವರು ಜೈಲಿನಿಂದ ಹೊರ ಬಂದಿದ್ದಾರೆ. ಆದರೆ, ಖಿನ್ನತೆಯಿಂದ ಬೊಜ್ಜು ಕಾಣಿಸಿಕೊಂಡಿದೆ ಎಂದು ಸಂಜನಾ ಬೇಸರ ಹೊರ ಹಾಕಿದ್ದಾರೆ. ನಟ ನಟಿಯರಿಗೆ ಮುಖ್ಯವಾಗಿ ಬೇಕಾಗಿದ್ದು ಫಿಟ್ನೆಸ್. ತೆರೆಮೇಲೆ ಉತ್ತಮವಾಗಿ ಕಾಣಿಸಿಕೊಳ್ಳಬೇಕು ಎಂದರೆ ಅವರು ಫಿಟ್ ಆಗಿ ಇರಲೇಬೇಕು. ಇದಕ್ಕಾಗಿ ಅವರು ನಿತ್ಯ ಜಿಮ್-ಯೋಗ ಮಾಡುತ್ತಾರೆ. ಆಹಾರ ಕ್ರಮದ ಮೇಲೂ ತುಂಬಾನೇ ಗಮನ ಹರಿಸುತ್ತಾರೆ. ಸ್ವಲ್ಪ ಬೊಜ್ಜು ಕಾಣಿಸಿಕೊಂಡರೂ ಸೆಲೆಬ್ರಿಟಿಗಳಿಗೆ ಚಿಂತೆ ಶುರುವಾಗಿ ಬಿಡುತ್ತದೆ. ಈಗ ಸಂಜನಾಗೆ ಟಮ್ಮಿ ಫ್ಯಾಟ್ ಕಾಣಿಸಿಕೊಂಡಿದೆ. ಹಾಗಂತ ಅವರು ಚಿಂತೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಈ ಬಗ್ಗೆ ರೀಲ್ಸ್ ಮಾಡಿ ಇನ್ಸ್ಟ್ರಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಸಂಜನಾ, ಡಿಪ್ರೆಷನ್ನಿಂದ ಫ್ಯಾಟ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಫ್ಯಾಟ್ ಬಂದಿರುವುದನ್ನು ಈ ವಿಡಿಯೋದಲ್ಲಿ ಅವರು ತೋರಿಸಿದ್ದಾರೆ.
View this post on Instagram
ಈ ಬಗ್ಗೆ ಕ್ಯಾಪ್ಶನ್ ಕೊಟ್ಟಿರುವ ಸಂಜನಾ, ಜನರು ಸಣ್ಣ ಆದರೆ ಬಂದು ಸಣ್ಣ ಆದೆ ಸಣ್ಣ ಆದೆ ಎನ್ನುತ್ತಾರೆ. ಆದರೆ, ಈಗ ನಾನು ದಪ್ಪ ಆಗಿದ್ದೇನೆ. ಬೇರೆಯವರು ಬಂದು ಹೇಳುವ ಮೊದಲೇ ನಾನೇ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ. ಜತೆಗೆ ಫ್ಯಾಟ್ ಕರಗಿಸೋಕೆ ಅವರು ಸೊಲ್ಯೂಷನ್ ಕೂಡ ಕೇಳಿದ್ದಾರೆ.
ಇದನ್ನೂ ಓದಿ: ಜಾಲಿ ಮೂಡ್ನಲ್ಲಿ ಯಾರ್ಕರ್ ಕಿಂಗ್ ಬುಮ್ರಾ- ಸಂಜನಾ ಗಣೇಶನ್.. ಫುಲ್ ವೈರಲ್ ಆಯ್ತು ದಂಪತಿಗಳ ಕ್ಯೂಟ್ ಲುಕ್!
ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು
Published On - 8:15 pm, Wed, 14 April 21