ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು

ಯುಗಾದಿ ಹಬ್ಬದಲ್ಲೂ ರಾಗಿಣಿ, ಸಂಜನಾಗೆ ತಪ್ಪಲಿಲ್ಲ ಕಣ್ಣೀರು! ಕಿರುತೆರೆಗೆ ಬಂದ ನಟಿಯರು
ರಾಗಿಣಿ ದ್ವಿವೇದಿ - ಸಂಜನಾ ಗಲ್ರಾನಿ

ಹಬ್ಬದ ರಂಗು ಹೆಚ್ಚಿಸಲು ಇಬ್ಬರೂ ನಟಿಯರು ಹಾಡಿ ಕುಣಿದರಾದರೂ ಅವರನ್ನು ಹಳೇ ನೋವು ಕಾಡದೇ ಬಿಟ್ಟಿಲ್ಲ. ಹಾಗಾಗಿ ವಿಶೇಷ ಕಾರ್ಯಕ್ರಮದ ವೇದಿಕೆಯಲ್ಲೂ ಅವರು ಕಣ್ಣೀರು ಹಾಕುವಂತಾಗಿದೆ.

Madan Kumar

|

Apr 10, 2021 | 8:42 AM


ಹಾಯಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಕಳೆದ ವರ್ಷ ಒಂದು ಆಘಾತ ಎದುರಾಗಿತ್ತು. ಮಾದಕ ವಸ್ತು ಜಾಲದ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಅವರಿಬ್ಬರು ಬಂಧನಕ್ಕೆ ಒಳಗಾದರು. ಮೊದಲ ಹಂತದ ವಿಚಾರಣೆ ಬಳಿಕ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಯಿತು. ತಿಂಗಳುಗಟ್ಟಲೆ ಕಷ್ಟಪಟ್ಟ ಈ ನಟಿಯರು ಕಡೆಗೂ ಜಾಮೀನು ಪಡೆದು ಹೊರಬಂದರು. ಈಗ ಹಳೆಯದನ್ನೆಲ್ಲ ಮರೆತು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಗಿದ್ದರೂ ಅವರು ಅಳುವುದು ತಪ್ಪಿಲ್ಲ.

ಎಲ್ಲರಂತೆಯೇ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಯುಗಾದಿ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಹಬ್ಬದ ಪ್ರಯುಕ್ತ ಸುವರ್ಣ ವಾಹಿನಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದಾರೆ. ಆದರೆ ಈ ಖುಷಿಯ ಕ್ಷಣದ ನಡುವೆಯೂ ಅವರು ಭಾವುಕರಾಗಿದ್ದಾರೆ. ಹಬ್ಬದ ರಂಗು ಹೆಚ್ಚಿಸಲು ಇಬ್ಬರೂ ನಟಿಯರು ಹಾಡಿ ಕುಣಿದರಾದರೂ ಅವರನ್ನು ಹಳೇ ನೋವು ಕಾಡದೇ ಬಿಟ್ಟಿಲ್ಲ. ಹಾಗಾಗಿ ಆ ವಿಶೇಷ ಕಾರ್ಯಕ್ರಮದ ವೇದಿಕೆಯಲ್ಲೇ ಅವರು ಕಣ್ಣೀರು ಹಾಕುವಂತಾಗಿದೆ.

‘ಜೀವನ ಇಷ್ಟೇ ಅಲ್ಲ. ಆ ಪಾಠವನ್ನು ನಾನು 2020ರಿಂದ ಕಲಿತಿದ್ದೇನೆ. ಇಡೀ ಪ್ರಪಂಚದ ಎದುರು ನಿಂತುಕೊಂಡು ನಾನು ಗಟ್ಟಿಯಾಗಿ ಫೈಟ್​ ಮಾಡಬಹುದು. ಆದರೆ ಅಪ್ಪ-ಅಮ್ಮನ ಕಣ್ಣಲ್ಲಿ ನೀರು ನೋಡಿದರೆ ಪ್ರಾಣ ಹೋದಂಗೆ ಆಗುತ್ತೆ. ಅದು ನನಗೆ ತುಂಬ ಘಾಸಿ ಮಾಡಿತು’ ಎಂದು ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ರಾಗಿಣಿ ಕಂಬನಿ ಸುರಿಸಿದಿದ್ದಾರೆ.

‘ಇವತ್ತು ಇದನ್ನೆಲ್ಲ ನೋಡಿದರೆ ತುಂಬ ಎಮೋಷನಲ್​ ಎನಿಸುತ್ತದೆ. ಆ ರೀತಿಯ ವಿವಾದಲ್ಲಿ ಬಿದ್ದು ಬೇರೆಯವರಿಗೆ ಮನರಂಜನೆ ಆಗೋದಲ್ಲ. ಜೀವನದಲ್ಲಿ ನಮ್ಮವರು ಅಂತ ಯಾರೂ ಇಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇನೆ. ತಂದೆ-ತಾಯಿಯ ಆಶೀರ್ವಾದದಿಂದಲೇ ಬದುಕಿದ್ದೇನೆ. ಯಾರೂ ಬಂದಿಲ್ಲ. ತುಂಬಾ ಬೇಜಾರಾಯಿತು’ ಎಂದು ಸಂಜನಾ ಗಲ್ರಾನಿ ಕಣ್ಣೀರು ಹಾಕಿದ್ದಾರೆ. ಈ ಎಪಿಸೋಡ್​ಗಳು ಏ.11ರಂದು ಸಂಜೆ 6 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿವೆ.

ಜಾಮೀನಿನ ಮೇಲೆ ಹೊರಬಂದಿರುವ ಈ ಇಬ್ಬರು ನಟಿಯರು ಈಗ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಎದುರಾಗಿದ್ದ ಎಲ್ಲ ಸಂಕಷ್ಟಗಳನ್ನು ನಿವಾರಿಸಿಕೊಳ್ಳುತ್ತ ಹೊಸ ಜೀವನ ಆರಂಭಿಸಿದ್ದಾರೆ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅವುಗಳನ್ನು ಲೆಕ್ಕಿಸದೇ ಪಾಸಿಟಿವ್​ ಆಗಿ ಯೋಚಿಸುತ್ತಿದ್ದಾರೆ. ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಲೈವ್​ ಬಂದು ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

 

(Sanjjanaa Galrani and Ragini Dwivedi get emotional on Star Suvarna Channel Ugadi Sambhrama Program Show)

Follow us on

Most Read Stories

Click on your DTH Provider to Add TV9 Kannada