Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡೆದು ಆಳೋಕೆ ಬಂದ ಚಕ್ರವರ್ತಿ ಚಂದ್ರಚೂಡ್​ಗೆ ಮರೆಯಲಾರದ ಪಾಠ ಕಲಿಸಿದ ಸ್ಪರ್ಧಿಗಳು

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ಚಕ್ರವರ್ತಿ ಸದಾ ಪ್ರಶಾಂತ್​ ಜತೆಯಲ್ಲೇ ಇರುತ್ತಿದ್ದಾರೆ. ಅಷ್ಟೇ ಅಲ್ಲ, ಒಂದಲ್ಲಾ ಒಂದು ತಂತ್ರ ಹೆಣೆಯುತ್ತಿದ್ದಾರೆ. ಪ್ರತಿ ಸ್ಪರ್ಧಿಗಳ ಎದುರು ಒಂದು ರೀತಿ ಮಾತನಾಡಿದರೆ, ಹಿಂಬದಿಯಿಂದ ಮತ್ತೊಂದು ರೀತಿ ಮಾತನಾಡುತ್ತಿದ್ದಾರೆ.

ಒಡೆದು ಆಳೋಕೆ ಬಂದ ಚಕ್ರವರ್ತಿ ಚಂದ್ರಚೂಡ್​ಗೆ ಮರೆಯಲಾರದ ಪಾಠ ಕಲಿಸಿದ ಸ್ಪರ್ಧಿಗಳು
ಪ್ರಶಾಂತ್​-ಚಕ್ರವರ್ತಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 10, 2021 | 7:07 AM

ಬಿಗ್​ ಬಾಸ್​ ಮನೆಯ ಮೊದಲ ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಚಕ್ರವರ್ತಿ ಚಂದ್ರಚೂಡ್​ ಅವರು ದೊಡ್ಮನೆ ಪ್ರವೇಶಿಸಿದ್ದರು. ಅವರು ಮನೆಗೆ ಬಂದ ನಂತರ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಪ್ರಶಾಂತ್​ ಸಂಬರ್ಗಿ ಜತೆ ಸೇರಿಕೊಂಡು ಅವರು ಮನೆಯನ್ನು ಇಬ್ಭಾಗ ಮಾಡೋಕೆ ಪ್ರಯತ್ನಪಟ್ಟಿದ್ದಾರೆ. ಆದರೆ, ಮನೆ ಸದಸ್ಯರು ಇದಕ್ಕೆ ಅವಕಾಶವನ್ನೇ ನೀಡಿಲ್ಲ. ಅಷ್ಟೇ ಅಲ್ಲ, ಅವರು ಮರೆಯದಂಥ ಪಾಠ ಒಂದನ್ನು ಕಲಿಸಿದ್ದಾರೆ. ಬಿಗ್​ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ಚಕ್ರವರ್ತಿ ಸದಾ ಪ್ರಶಾಂತ್​ ಜತೆಯಲ್ಲೇ ಇರುತ್ತಿದ್ದಾರೆ. ಅಷ್ಟೇ ಅಲ್ಲ, ಒಂದಲ್ಲಾ ಒಂದು ತಂತ್ರ ಹೆಣೆಯುತ್ತಿದ್ದಾರೆ. ಪ್ರತಿ ಸ್ಪರ್ಧಿಗಳ ಎದುರು ಒಂದು ರೀತಿ ಮಾತನಾಡಿದರೆ, ಹಿಂಬದಿಯಿಂದ ಒಂದು ರೀತಿ ಮಾತನಾಡುತ್ತಿದ್ದಾರೆ. ಇದು ಮನೆಯ ಎಲ್ಲಾ ಸದಸ್ಯರ ಗಮನಕ್ಕೆ ಬಂದಿದೆ. ಹೀಗಾಗಿ, ಈ ತಪ್ಪು ಮತ್ತೆ ಮಾಡದಂತೆ ನೋಡಿಕೊಳ್ಳಲು ಹೊಸ ಪಾಠ ಒಂದನ್ನು ಕಲಿಸಿದ್ದಾರೆ.

ಪ್ರತಿವಾರ ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಪ್ರದರ್ಶನ ಯಾರದ್ದು ಎನ್ನುವುದು ಘೋಷಣೆ ಮಾಡಬೇಕು. ಇದು ಮನೆಯ ಸದಸ್ಯರಿಗೆ ಸಿಗುವ ಅತಿ ಕಡಿಮೆ ಗೌರವ. ಈ ಕಳಪೆ ಎನ್ನುವ ಪಟ್ಟ ಚಕ್ರವರ್ತಿ ಚಂದ್ರಚೂಡ್​​ ಅವರ ಪಾಲಾಗಿದೆ.

ಮನೆಯಲ್ಲಿ ಬಹುತೇಕ ಮಂದಿ ಚಕ್ರವರ್ತಿ ಹೆಸರನ್ನು ತೆಗೆದುಕೊಂಡರು. ಚಕ್ರವರ್ತಿ ಅವರು ಹೇಳುವ ಕಮೆಂಟ್​ ಇಷ್ಟವಾಗಿಲ್ಲ, ಚಕ್ರವರ್ತಿ ನಡೆ ಇಷ್ಟವಾಗಿಲ್ಲ, ಅವರು ಬಂದ ಮೇಲೆ ಮನೆ ಒಡೆದು ಆಳುತ್ತಿದ್ದಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದರು. ಮೊದಲು ಎಲ್ಲರೂ ಒಟ್ಟಿಗೆ ಕೂರುತ್ತಿದ್ದೆವು. ಈಗ ಎರಡು ಮೂರು ಗುಂಪುಗಳಾಗಿ ಕೂರುತ್ತಿದ್ದೇವೆ. ಇದಕ್ಕೆ ಚಕ್ರವರ್ತಿ ಕಾರಣ ಎಂದು ನಿಧಿ ಹೇಳಿದ್ದಾರೆ. ನನ್ನ ಟೀಂ ಸೋಲಿಗೆ, ಜಗಳಕ್ಕೆ ಚಕ್ರವರ್ತಿ ನೇರ ಕಾರಣ ಎಂದು ಆರೋಪಿಸಿದರು.

ಇದನ್ನೂ ಓದಿ: 96 ದಿನ ಜೈಲಿಗೆ ಹೋಗಿ ಬಂದಿದ್ದರಂತೆ ವೈಲ್ಡ್​ ಕಾರ್ಡ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ! ಕಾರಣ?

‘ಮಂಜುನ ನಾನು ಸುಮ್ನೆ ಬಿಡಲ್ಲ’: ಸವಾಲು ಹಾಕಿ ಯುದ್ಧ ಶುರು ಮಾಡಿದ ಚಕ್ರವರ್ತಿ ಚಂದ್ರಚೂಡ್!

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ