23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ

ಸಾಯೇಶಾ ಮೂಲತಃ ಮುಂಬೈನವರು. 1997ರ ಆಗಸ್ಟ್​ 12ರಂದು ಸಾಯೇಶಾ ಜನಿಸಿದರು. 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್​ನಲ್ಲಿ ಆ್ಯಕ್ಟಿವ್​ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್​ ಸೈಗಲ್​ ಪುತ್ರಿ ಸಾಯೇಶಾ.

23 ವರ್ಷದ ಯುವರತ್ನ ನಾಯಕಿ ಸಾಯೇಶಾ ಪತಿ ತಮಿಳಿನ ಸ್ಟಾರ್​ ಹೀರೋ; ಇಲ್ಲಿದೆ ಇವರ ಲವ್​ ಸ್ಟೋರಿ
ಸಾಯೇಶಾ ಸೈಗಲ್​
Follow us
|

Updated on: Apr 09, 2021 | 8:42 PM

ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿ ನಂತರ ಯುವರತ್ನ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​ಗೆ ಕಾಲಿಟ್ಟವರು ನಟಿ ಸಾಯೇಶಾ ಸೈಗಲ್​. ಯುವರತ್ನದಲ್ಲಿ ಸಿಕ್ಕ ಅವಕಾಶವನ್ನು ಸಾಯೇಶಾ ಸರಿಯಾಗಿ ಬಳಸಿಕೊಂಡಿದ್ದರು. ಸಾಯೇಶಾಗೆ ಮದುವೆ ಆಗಿದೆ ಅನ್ನೋ ವಿಚಾರ ಅನೇಕರಿಗೆ ಗೊತ್ತಿಲ್ಲ. ಅದರಲ್ಲೂ ಇವರದ್ದು ಲವ್​ ಮ್ಯಾರೇಜ್​ ಅನ್ನೋದು ವಿಶೇಷ. ಸಾಯೇಶಾ ಮೂಲತಃ ಮುಂಬೈನವರು. 1997ರ ಆಗಸ್ಟ್​ 12ರಂದು ಸಾಯೇಶಾ ಜನಿಸಿದರು. 1987ರಿಂದ 1995ರ ಅವಧಿಯಲ್ಲಿ ಬಾಲಿವುಡ್​ನಲ್ಲಿ ಆ್ಯಕ್ಟಿವ್​ ಆಗಿದ್ದ ನಟ ಹಾಗೂ ನಿರ್ಮಾಪಕ ಸುಮೀತ್​ ಸೈಗಲ್​ ಪುತ್ರಿ ಸಾಯೇಶಾ. ಹೀಗಾಗಿ, ಇವರಿಗೆ ಸಹಜವಾಗಿಯೇ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.

2015ರಲ್ಲಿ ತೆರೆಗೆ ಬಂದ ತೆಲುಗಿನ ‘ಅಖಿಲ್​’ ಸಿನಿಮಾ ಮೂಲಕ ಸಾಯೆಶಾ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಂತರ ಅಜಯ್​ ದೇವಗನ್​ ನಟನೆಯ ಶಿವಾಯ್​ ಸಿನಿಮಾದಲ್ಲಿ ಬಣ್ಣ ಹಚ್ಚಲು ಅವಕಾಶ ಗಿಟ್ಟಿಸಿಕೊಂಡರು. ಈ ಮೂಲಕ ಬಾಲಿವುಡ್​ನಲ್ಲೂ ಅವರು ಖಾತೆ ತೆರೆದರು. ನಂತರ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ಸಾಯೇಶಾ ಬಣ್ಣ ಹಚ್ಚಿದ್ದರು. 2018ರಲ್ಲಿ ತೆರೆಗೆ ಬಂದ ಗಜನಿಕಾಂತ್​ ಸಿನಿಮಾದಲ್ಲಿ ತಮಿಳಿನ ಸ್ಟಾರ್​ ಹೀರೋ ಆರ್ಯಗೆ ಜೋಡಿಯಾಗಿ ಸಾಯೇಶಾ ಕಾಣಿಸಿಕೊಂಡಿದ್ದರು. ನಂತರ ಕಾಪನ್​, ಟೆಡ್ಡಿ ಸಿನಿಮಾಗಳಲ್ಲೂ ಇಬ್ಬರೂ ಒಟ್ಟಾಗಿ ನಟಿಸಿದ್ದರು.

ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ ಇವರ ಮಧ್ಯೆ ಸೆಟ್​ನಲ್ಲೇ ಪ್ರೀತಿ ಮೂಡಿತು. ಇವರು ಕದ್ದುಮುಚ್ಚಿ ಓಡಾಡುತ್ತಿರುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ನಂತರ 2019ರ ಮಾರ್ಚ್​​ 10ರಂದು ಇಬ್ಬರೂ ಮದುವೆ ಆಗಿ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದರು. ಈ ಮೂಲಕ 21ನೇ ವಯಸ್ಸಿಗೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

2019ರಲ್ಲಿ ತೆರೆಗೆ ಬಂದ ಟೆಡ್ಡಿ ಸಿನಿಮಾ ನಂತರ ತೆರೆಕಂಡಿದ್ದು ಯುವರತ್ನ ಚಿತ್ರ. ಈ ಸಿನಿಮಾದಲ್ಲಿ ಕೆಲವೇ ಕೆಲವು ದೃಶ್ಯಗಳಿಗೆ ಹಾಗೂ ಹಾಡುಗಳಿಗೆ ಮಾತ್ರ ಸಾಯೆಶಾ ಸೀಮಿತವಾದರು. ಆದಾಗ್ಯೂ, ಸಿಕ್ಕ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು. ಸದ್ಯ, ಸಾಯೇಶಾ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ. ಕನ್ನಡದಿಂದ ಅವರಿಗೆ ಬೇರೆ ಯಾವುದಾದರೂ ಆಫರ್​ ಬರಬಹುದೇ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್​ ನಿರ್ಧಾರಕ್ಕೆ ಫ್ಯಾನ್ಸ್​ ಆಕ್ರೋಶ 

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ