Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್​ ನಿರ್ಧಾರಕ್ಕೆ ಫ್ಯಾನ್ಸ್​ ಆಕ್ರೋಶ

ಭಾರೀ ನಿರೀಕ್ಷೆಗಳೊಂದಿಗೆ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ತೆರೆಗೆ ಬಂದಿತ್ತು. ಸಿನಿಮಾ ತೆರೆಕಂಡ ಎರಡೇ ದಿನಕ್ಕೆ ಹೌಸ್​ಫುಲ್​ ಪ್ರದರ್ಶನಕ್ಕೆ ಸರ್ಕಾರ ತಡೆ ನೀಡಿತ್ತು. ಇದು ಅಭಿಮಾನಿಗಳು ಹಾಗೂ ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿತ್ತು.

Yuvarathnaa On Prime: ನೀವು ಹೀಗೆ ಮಾಡಿದ್ದು ಸರಿನಾ?; ಪುನೀತ್​ ನಿರ್ಧಾರಕ್ಕೆ ಫ್ಯಾನ್ಸ್​ ಆಕ್ರೋಶ
ಯುವರತ್ನದಲ್ಲಿ ಪುನೀತ್​
Follow us
ರಾಜೇಶ್ ದುಗ್ಗುಮನೆ
|

Updated on:Apr 08, 2021 | 3:08 PM

ನೆಚ್ಚಿನ ನಟನ ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಬೇಕು, 100 ದಿನ ಓಡಬೇಕು ಎಂಬುದು ಫ್ಯಾನ್ಸ್​ ಆಸೆ. ಆದರೆ, ಕೆಲವೊಮ್ಮೆ ಸಿನಿಮಾ ಅಂದುಕೊಂಡ ರೀತಿಯಲ್ಲಿ ಮೂಡಿ ಬಂದಿರುವುದಿಲ್ಲ. ಹೀಗಾದಾಗ, ಅಭಿಮಾನಿಗಳಿಗೆ ಬೇಸರ ಆಗಿಯೇ ಆಗುತ್ತದೆ. ಆದರೆ, ಸಿನಿಮಾ ಉತ್ತಮವಾಗಿದ್ದೂ, ಯಶಸ್ಸು ಕಂಡಿಲ್ಲ ಎಂದರೆ ಅಭಿಮಾನಿಗಳಿಗೆ ದುಪ್ಪಟ್ಟು ಬೇಸರವಾಗುತ್ತದೆ. ಈಗ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ಗೂ ಇದೇ ರೀತಿ ಆಗಿದೆ. ಯುವರತ್ನ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಎರಡನೇ ವಾರಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗುತ್ತಿರುವುದು ಬೇಸರ ತರಿಸಿದೆ. ಭಾರೀ ನಿರೀಕ್ಷೆಗಳೊಂದಿಗೆ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ತೆರೆಗೆ ಬಂದಿತ್ತು. ಸಿನಿಮಾ ತೆರೆಕಂಡ ಎರಡೇ ದಿನಕ್ಕೆ ಹೌಸ್​ಫುಲ್​ ಪ್ರದರ್ಶನಕ್ಕೆ ಸರ್ಕಾರ ತಡೆ ನೀಡಿತ್ತು. ಇದು ಅಭಿಮಾನಿಗಳು ಹಾಗೂ ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿತ್ತು. ಪುನೀತ್​ ಹಾಗೂ ಅಭಿಮಾನಿಗಳ ಮನವಿಗೆ ಮಣಿದ ಸರ್ಕಾರ ಕೆಲ ದಿನಗಳವರೆಗೆ ಹೌಸ್​ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಿತ್ತು.

ಈಗ ಚಿತ್ರಮಂದಿರಗಳಲ್ಲಿ ಮತ್ತೆ ಶೇ. 50 ಆಸನ ವ್ಯವಸ್ಥೆ ಜಾರಿಗೆ ಬಂದಿದೆ. ಅಂದರೆ, ಥಿಯೇಟರ್​ನಲ್ಲಿರುವ ಒಟ್ಟು ಆಸನದಲ್ಲಿ ಅರ್ಧದಷ್ಟು ಮಂದಿ ಮಾತ್ರ ಕೂರಬಹುದು. ಹೀಗಾದಾಗ, ಫ್ಯಾಮಿಲಿ ಆಡಿಯನ್ಸ್​ ಚಿತ್ರಮಂದಿರಕ್ಕೆ ಹೋಗೋದು ಕಡಿಮೆ ಆಗಲಿದೆ. ಇದು ನೇರವಾಗಿ ಚಿತ್ರದ ಕಲೆಕ್ಷನ್​ ಮೇಲೆ ಪರಿಣಾಮ ಬೀರಲಿದೆ.

ಇದನ್ನು ಅರಿತ ಚಿತ್ರತಂಡ ಏಪ್ರಿಲ್​ 9ಕ್ಕೆ ಯುವರತ್ನ ಸಿನಿಮಾವನ್ನು ಪ್ರೈಮ್​ನಲ್ಲಿ ರಿಲೀಸ್​ ಮಾಡುತ್ತಿದೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಪುನೀತ್​ ನಟನೆಯ ಸಿನಿಮಾ ರಿಲೀಸ್​ ಆದ ಎಂಟೇ ದಿನಕ್ಕೆ ಒಟಿಟಿ ಪ್ಲಾಟ್​ಫಾರ್ಮ್​ಗೆ ಬರುತ್ತಿರುವುದೇಕೆ? ಹೀಗೆ ಮಾಡುತ್ತಿರುವುದು ಸರಿಯಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಒಟಿಟಿಯಲ್ಲಿ ಸಿನಿಮಾ ರಿಲೀಸ್​ ಆದರೆ ನಂತರ ಚಿತ್ರಮಂದಿರದತ್ತ ಯಾರೂ ಹೆಜ್ಜೆ ಹಾಕುವುದಿಲ್ಲ. ಹೀಗಾಗಿ, ಯುವರತ್ನ 25ನೇ ದಿನ ಸಂಭ್ರಮಾಚರಣೆಯನ್ನೂ ಆಚರಿಸಿಕೊಳ್ಳುವುದು ಅನುಮಾನವಿದೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರಮೂಡಿಸಿದೆ.

ಇದನ್ನೂ ಓದಿ: Yuvarathnaa OTT Release: ಬಿಡುಗಡೆಯಾದ ಎಂಟೇ ಎಂಟು ದಿನಕ್ಕೆ ಅಮೇಜಾನ್​ ಪ್ರೈಂನತ್ತ ಮುಖ ಮಾಡಿದ ಯುವರತ್ನ; ಕೊರೊನಾ ಕಾಟದಿಂದ ಓಟಿಟಿಗೆ ಬಂದ ಚಿತ್ರ

Published On - 3:08 pm, Thu, 8 April 21