AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuvarathnaa OTT Release: ಬಿಡುಗಡೆಯಾದ ಎಂಟೇ ಎಂಟು ದಿನಕ್ಕೆ ಅಮೇಜಾನ್​ ಪ್ರೈಂನತ್ತ ಮುಖ ಮಾಡಿದ ಯುವರತ್ನ; ಕೊರೊನಾ ಕಾಟದಿಂದ ಓಟಿಟಿಗೆ ಬಂದ ಚಿತ್ರ

Yuvarathnaa OTT Release Date | Amazon Prime Video: ಬಿಡುಗಡೆ ಆಗಿ ಕೇವಲ ಎಂಟು ದಿನಕ್ಕೆ ಯುವರತ್ನ ಸಿನಿಮಾ ಓಟಿಟಿಯತ್ತ ಮುಖ ಮಾಡಿದ್ದು, ನಾಳೆಯಿಂದ ಚಿತ್ರ ಅಮೆಜಾನ್ ಪ್ರೈಮ್​ನಲ್ಲಿ ಸಿಗಲಿದೆ. ವೆಬಿನಾರ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ ವೀಕ್ಷಕರನ್ನು ತಲುಪಲು ಓಟಿಟಿ ಮೂಲಕ ಆಗಮಿಸುತ್ತಿರುವುದಾಗಿ ಹೇಳಿದೆ.

Yuvarathnaa OTT Release: ಬಿಡುಗಡೆಯಾದ ಎಂಟೇ ಎಂಟು ದಿನಕ್ಕೆ ಅಮೇಜಾನ್​ ಪ್ರೈಂನತ್ತ ಮುಖ ಮಾಡಿದ ಯುವರತ್ನ; ಕೊರೊನಾ ಕಾಟದಿಂದ ಓಟಿಟಿಗೆ ಬಂದ ಚಿತ್ರ
ಯುವರತ್ನ ಮೂವಿ ಏಪ್ರಿಲ್​.9ರಿಂದ ಅಮೇಜಾನ್​ ಪ್ರೈಮ್​ನಲ್ಲಿ ಲಭ್ಯ
Skanda
|

Updated on:Apr 08, 2021 | 1:18 PM

Share

ಬೆಂಗಳೂರು: ಕೊರೊನಾ ಎರಡನೇ ಅಲೆಯ ಭೀತಿ ಮತ್ತೆ ಕಳೆದ ವರ್ಷದ ಲಾಕ್​ಡೌನ್ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಿದೆ. ಜನರು ಜಾಗ್ರತೆಯಿಂದ ಇದ್ದರೆ ಸಾಕು ಎಂದು ಆರಂಭದಿಂದಲೂ ಹೇಳಲಾಗುತ್ತಿತ್ತಾದರೂ ಈಗ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳ ಮೊರೆ ಹೋಗಬೇಕಾಗಿರುವುದು ಅನಿವಾರ್ಯವೇನೋ ಎಂಬ ಪರಿಸ್ಥಿತಿಯತ್ತ ರಾಜ್ಯ ಹೆಜ್ಜೆ ಹಾಕುತ್ತಿದೆ. ಈ ನಡುವೆ ಕಳೆದ ವಾರವಷ್ಟೇ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಯುವರತ್ನ ಸಿನಿಮಾ ಕೂಡ ಕೊರೊನಾ ಭೀತಿಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಾಗುತ್ತಿಲ್ಲ. ಸಿನಿಮಾ ಚೆನ್ನಾಗಿದ್ದರೂ ಕೊರೊನಾ ಭಯಕ್ಕೆ ಜನ ಥಿಯೇಟರ್ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೆಲ್ಲಾ ಅವಲೋಕಿಸಿದ ಯುವರತ್ನ ತಂಡ ಇದೀಗ ಓಟಿಟಿ ವೇದಿಕೆಯತ್ತ ಮುಖ ಮಾಡಿದೆ.

ಬಿಡುಗಡೆ ಆಗಿ ಕೇವಲ ಎಂಟು ದಿನಕ್ಕೆ ಯುವರತ್ನ ಸಿನಿಮಾ ಓಟಿಟಿಯತ್ತ ಮುಖ ಮಾಡಿದ್ದು, ಏಪ್ರಿಲ್​ 9ರಿಂದ ಚಿತ್ರ ಅಮೆಜಾನ್ ಪ್ರೈಮ್​ನಲ್ಲಿ ಸಿಗಲಿದೆ. ವೆಬಿನಾರ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ ವೀಕ್ಷಕರನ್ನು ತಲುಪಲು ಓಟಿಟಿ ಮೂಲಕ ಆಗಮಿಸುತ್ತಿರುವುದಾಗಿ ಹೇಳಿದೆ. ವೆಬಿನಾರ್​ನಲ್ಲಿ ನಾಯಕ ನಟ ಪುನೀತ್ ರಾಜ್‍ಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಭಾಗಿಯಾಗಿದ್ದು, ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸಿಗುವ ಬಗ್ಗೆ ಹೇಳಿಕೊಂಡಿದ್ದಾರೆ.

ಯುವರತ್ನ ಬಿಡುಗಡೆಯಾಗಿ ಒಂದೇ ದಿನಕ್ಕೆ ರಾಜ್ಯ ಸರ್ಕಾರ ಕೆಲ ನಗರಗಳಿಗೆ ಅನ್ವಯವಾಗುವಂತೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವುದಕ್ಕೆ ನಿರ್ಬಂಧ ಹೇರಿ, ಕೇವಲ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಬೇಕೆಂದು ಆದೇಶಿಸಿತ್ತು. ಆದರೆ, ಇದಕ್ಕೆ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ವ್ಯಾಪಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಪುನೀತ್ ರಾಜ್​ಕುಮಾರ್ ಸೇರಿ ಚಿತ್ರರಂಗದ ಅನೇಕರು ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರ ಪರಿಣಾಮವಾಗಿ ಏಪ್ರಿಲ್​ 8ರ ತನಕ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಆ ಗಡುವು ಮುಕ್ತಾಯವಾಗುತ್ತಿದ್ದು, ಚಿತ್ರಮಂದಿರಗಳತ್ತ ಜನ ತಲೆ ಹಾಕುವುದೂ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಕಾರಣದಿಂದ ಕಳೆದ ಒಂದು ವರ್ಷದಿಂದಲೂ ಮೇಲಿಂದ ಮೇಲೆ ಹೊಡೆತ ಅನುಭವಿಸುತ್ತಿರುವ ಚಿತ್ರರಂಗ ಹೊಸವರ್ಷದಲ್ಲಿ ಪುಟಿದೇಳುವ ಆಶಾಭಾವನೆಯಲ್ಲಿತ್ತು. ಅದೇ ಕಾರಣಕ್ಕಾಗಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿದ್ದವು. ಸಿನಿಪ್ರಿಯರು ಸಹ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ಬೆಂಬಲ ನೀಡಿದ್ದರು. ಆದರೆ, ಕೊರೊನಾ ಈ ಎಲ್ಲಾ ಪರಿಸ್ಥಿತಿಯನ್ನೂ ನಿಯಂತ್ರಿಸುತ್ತಿದ್ದು ಎಲ್ಲವೂ ಮತ್ತೆ ಹಿಡಿತಕ್ಕೆ ಬರುತ್ತಿದೆ. ಇಂತಹ ಸಮಯದಲ್ಲಿ ಯುವರತ್ನ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದ್ದು, ಭಾರೀ ಮೊತ್ತಕ್ಕೆ ಸಿನಿಮಾದ ಹಕ್ಕು ಮಾರಾಟವಾಗಿರುವ ಬಗ್ಗೆ ಮಾತುಗಳು ಓಡಾಡುತ್ತಿವೆ.

ಇದನ್ನೂ ಓದಿ: Yuvarathnaa: ಮೃತ ಮಗನ ಫೋಟೋ ಜೊತೆ ಯುವರತ್ನ ನೋಡಿದ ಪಾಲಕರು; ಪುನೀತ್​ ಭಾವುಕ! 

ಚಿತ್ರಮಂದಿರಕ್ಕೆ ಏಕಾಏಕಿ ಪ್ರವೇಶ ನಿರ್ಬಂಧಿಸಿದರೆ ನಾವೇನು ಮಾಡಬೇಕು?; ಸರ್ಕಾರದ ಕ್ರಮಕ್ಕೆ ಪುನೀತ್​ ಬೇಸರ

(Yuvarathnaa movie to be released on Amazon Prime due to spike in Covid 19 in Karnataka)

Published On - 1:06 pm, Thu, 8 April 21

ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ