ಕೊರೊನಾ ಲಸಿಕೆ ಪಡೆದ ಪವರ್ಸ್ಟಾರ್ ಪುನೀತ್; ಅಭಿಮಾನಿಗಳಿಗೆ ಬಂತು ಹೊಸ ಸ್ಫೂರ್ತಿ
ಬುಧವಾರ (ಏ.7) ನಟ ಪುನೀತ್ ರಾಜ್ಕುಮಾರ್ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಕೊರೊನಾ ಬಾರದಂತೆ ನೀಡುವ ಔಷಧವನ್ನು ಸ್ವೀಕರಿಸಿದ್ದಾರೆ.
ಭಾರತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಸಾಕಷ್ಟು ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಕೊರೊನಾ ಲಸಿಕೆ ಪಡೆಯುತ್ತಿದ್ದಾರೆ. ಈಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಕೊವಿಡ್ ಲಸಿಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಅವರು ಮಾಡಿದ್ದಾರೆ. ಇಂದು (ಏಪ್ರಿಲ್ 7) ನಟ ಪುನೀತ್ ರಾಜ್ಕುಮಾರ್ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಕೊರೊನಾ ಬಾರದಂತೆ ನೀಡುವ ಔಷಧವನ್ನು ಸ್ವೀಕರಿಸಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ನಾನು ಇಂದು ಕೊರೊನಾ ಲಸಿಕೆ ಪಡೆದಿದ್ದೇನೆ. 45 ವರ್ಷ ಮೇಲ್ಪಟ್ಟವರು ಹೋಗಿ ಕೊವಿಡ್ ಲಸಿಕೆ ಸ್ವೀಕರಿಸಿ ಎಂದು ಮನವಿ ಮಾಡಿದ್ದಾರೆ.
ಈ ಟ್ವೀಟ್ ನೋಡಿದ ಅನೇಕರು ಸ್ಫೂರ್ತಿ ಪಡೆದುಕೊಂಡಿದ್ದಾರೆ. ಕೆಲವರು ನಮ್ಮ ಕುಟುಂಬದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಿಸುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಇನ್ನೂ ಕೆಲವರು ಪುನೀತ್ ಫಿಟ್ನೆಸ್ಗೆ ಹೊಗಳಿದ್ದಾರೆ. ನಿಮಗೆ 45 ವರ್ಷ ಆಯಿತು ಎಂದು ಹೇಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.
Got my first dose of vaccination today. If you are 45 years & above ensure you get vaccinated. #vaccinated #LargestVaccineDrive pic.twitter.com/QsX9NnkjGS
— Puneeth Rajkumar (@PuneethRajkumar) April 7, 2021
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ಕೊರೋನಾ ಲಸಿಕೆ ಪಡೆದರು.
— K’taka Health Dept (@DHFWKA) April 7, 2021
ಏಪ್ರಿಲ್ 1ರಂದು ಯುವರತ್ನ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ ರಾಜ್ಯ ಸರ್ಕಾರ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿತ್ತು. ನಂತರ ಪುನೀತ್ ಮನವಿ ಮೇರೆಗೆ ಏಪ್ರಿಲ್ 6ರವರೆಗೆ ಹೌಸ್ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದಿನಿಂದ, ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಕೂರಲು ಅವಕಾಶ ನೀಡಲಾಗುತ್ತಿದೆ.
ಇದನ್ನೂ ಓದಿ: ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿ ಮಂತ್ರಾಲಯದ ರಾಯರ ದರ್ಶನ ಪಡೆದ ಪುನೀತ್-ಜಗ್ಗೇಶ್