Pratima Devi Passed Away: ಚಂದನವನದ ಹಿರಿಯ ನಟಿ ಪ್ರತಿಮಾ ದೇವಿ ನಿಧನ

ಪ್ರತಿಮಾ ದೇವಿ ಸುಮಾರು 60ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಕೃಷ್ಣ ಲೀಲಾ, ಜಗನ್ಮೋಹಿನಿ, ನಾಗಕನ್ಯೆ, ಶಿವಪಾರ್ವತಿ, ಶ್ರೀ ಶ್ರೀನಿವಾಸ ಕಲ್ಯಾಣ ಮುಂತಾದ ಸಿನಿಮಾಗಳು ಪ್ರತಿಮಾ ದೇವಿ ನಟಿಸಿದ ಪ್ರಮುಖ ಸಿನಿಮಾಗಳಾಗಿವೆ.

  • TV9 Web Team
  • Published On - 20:01 PM, 6 Apr 2021
Pratima Devi Passed Away: ಚಂದನವನದ ಹಿರಿಯ ನಟಿ ಪ್ರತಿಮಾ ದೇವಿ ನಿಧನ
ಪ್ರತಿಮಾ ದೇವಿ

ಮೈಸೂರು: ಚಂದನವನದ ಹಿರಿಯ ನಟಿ, 1947 ಸುಮಾರರಿಂದ 2000ನೇ ದಶಕದ ವರೆಗೆ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಮಾಡಿದ್ದ ಅನುಭವಿ ಕಲಾವಿದೆ ಪ್ರತಿಮಾ ದೇವಿ ಇಂದು (ಏಪ್ರಿಲ್ 6) ನಿಧನ ಹೊಂದಿದ್ದಾರೆ. ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ತಾಯಿಯೂ ಆಗಿರುವ, 88 ವರ್ಷ ವಯಸ್ಸಿನ ಪ್ರತಿಮಾ ದೇವಿ ಇಂದು ಮರಣಿಸಿದ್ದಾರೆ. ಮೈಸೂರಿನ ಸರಸ್ವತೀಪುರಂ ನಿವಾಸದಲ್ಲಿ ಅವರ ಪಾರ್ಥಿವ ಶರೀರ ಇರಿಸಲಾಗಿದೆ. ನಾಳೆ (ಏಪ್ರಿಲ್ 7) ಮಧ್ಯಾಹ್ನ 1 ಗಂಟೆಗೆ ಪ್ರತಿಮಾ ದೇವಿ ಅಂತ್ಯಕ್ರಿಯೆ ನಡೆಯಲಿದೆ. ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿಮಾ ದೇವಿ ಸುಮಾರು 60ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಕೃಷ್ಣ ಲೀಲಾ, ಜಗನ್ಮೋಹಿನಿ, ನಾಗಕನ್ಯೆ, ಶಿವಪಾರ್ವತಿ, ಶ್ರೀ ಶ್ರೀನಿವಾಸ ಕಲ್ಯಾಣ ಮುಂತಾದ ಸಿನಿಮಾಗಳು ಪ್ರತಿಮಾ ದೇವಿ ನಟಿಸಿದ ಪ್ರಮುಖ ಸಿನಿಮಾಗಳಾಗಿವೆ. ಕನ್ನಡದ ಮೊದಲ ಸೂಪರ್ ಹಿಟ್‌ ಸಿನಿಮಾ ಜಗನ್ಮೋಹಿನಿಯ ನಾಯಕಿಯಾಗಿಯೂ ಪ್ರತಿಮಾ ದೇವಿ ಖ್ಯಾತಿಗಳಿಸಿದ್ದರು.

ನಿರ್ದೇಶಕ ಶಂಕರ್ ಸಿಂಗ್​ರನ್ನು ಪ್ರತಿಮಾ ದೇವಿ ವರಿಸಿದ್ದರು. ಪ್ರತಿಮಾ ದೇವಿ ಪುತ್ರ ಎಸ್.ವಿ.ರಾಜೇಂದ್ರಸಿಂಗ್ ಬಾಬು ಕೂಡ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದಾರೆ. ಪ್ರತಿಮಾ ದೇವಿ ಪುತ್ರಿ ವಿಜಯಲಕ್ಷ್ಮೀ ಸಿಂಗ್ ನಟಿ ಹಾಗೂ ನಿರ್ಮಾಪಕಿಯಾಗಿದ್ದಾರೆ.

ಚಲನಚಿತ್ರ ರಂಗಕ್ಕೆ ಪ್ರತಿಮಾ ದೇವಿ ನೀಡಿದ ಕೊಡುಗೆಗಳನ್ನು ಪರಿಗಣಿಸಿದ ಕರ್ನಾಟಕ ರಾಜ್ಯ ಸರ್ಕಾರ 2001-02ರ ಅವಧಿಯಲ್ಲಿ ಡಾ. ರಾಜ್​ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನೂ ಓದಿ: ಧಾರವಾಡದ ಹಿರಿಯ ಸಿತಾರ್​ವಾದಕ ಪಂಡಿತ್ ಶಿವಾನಂದ ತರಲಗಟ್ಟಿ ನಿಧನ

ಇದನ್ನೂ ಓದಿ: ಬರಾಕ್ ಒಬಾಮ ಅಜ್ಜಿ, 99 ವರ್ಷದ ಸಾರಾ ಒಬಾಮ ನಿಧನ; ಭಾವುಕ ಪೋಸ್ಟ್ ಹಂಚಿಕೊಂಡ ಅಮೆರಿಕ ಮಾಜಿ ಅಧ್ಯಕ್ಷ