ಬರಾಕ್ ಒಬಾಮ ಅಜ್ಜಿ, 99 ವರ್ಷದ ಸಾರಾ ಒಬಾಮ ನಿಧನ; ಭಾವುಕ ಪೋಸ್ಟ್ ಹಂಚಿಕೊಂಡ ಅಮೆರಿಕ ಮಾಜಿ ಅಧ್ಯಕ್ಷ

ಸಾರಾ ಒಬಾಮ, ಬರಾಕ್ ಒಬಾಮ ತಂದೆಯ ಮಲತಾಯಿ. ಆದರೂ ಒಬಾಮಗೆ ಸಾರಾ ಮೇಲೆ ಬಹಳಷ್ಟು. ಪ್ರೀತಿ. ಅವರನ್ನು ‘Granny’ ಎಂದೇ ಕರೆಯುವ ಬರಾಕ್ ಒಬಾಮ, ತಮ್ಮ ಅಧ್ಯಕ್ಷ ಅವಧಿ ಮುಕ್ತಾಯವಾದ ಬಳಿಕ 2018ರಲ್ಲೂ ಒಬಾಮ ಸಾರಾ ಮನೆಗೆ ಭೇಟಿ ನೀಡಿದ್ದರು.

ಬರಾಕ್ ಒಬಾಮ ಅಜ್ಜಿ, 99 ವರ್ಷದ ಸಾರಾ ಒಬಾಮ ನಿಧನ; ಭಾವುಕ ಪೋಸ್ಟ್ ಹಂಚಿಕೊಂಡ ಅಮೆರಿಕ ಮಾಜಿ ಅಧ್ಯಕ್ಷ
ಅಜ್ಜಿ ಸಾರಾ ಒಬಾಮ ಜೊತೆ ಬರಾಕ್ ಒಬಾಮ
Follow us
ganapathi bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 29, 2021 | 10:29 PM

ನೈರೋಬಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಜ್ಜಿ ಸಾರಾ ಒಬಾಮ ತಮ್ಮ ಇಂದು ಪಶ್ಚಿಮ ಕೀನ್ಯಾದಲ್ಲಿ ನಿಧನರಾಗಿದ್ದಾರೆ. ಸಾರಾ ಒಬಾಮ ಅವರಿಗೆ 99 ವರ್ಷ ವಯಸ್ಸಾಗಿತ್ತು. ಅವರು ದೇವರೊಂದಿಗೆ ಹೋಗಿರುವುದು ನಿಜ. ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ ಎಂದು ಸಾರಾ ಪುತ್ರಿ ಮಾರ್ಸತ್ ಒನ್ಯಾಂಗೊ ತಿಳಿಸಿದ್ದಾರೆ.

ಮಾಮ ಒಬಾಮ ಎಂದೇ ಕರೆಯಲ್ಪಡುತ್ತಿದ್ದ ಸಾರಾ ಒಬಾಮ ಕಿಸುಮು ಎಂಬಲ್ಲಿನ ಜರಮೊಗಿ ಒಗಿಂಗ ಒಡಿಂಗ ಟೀಚಿಂಗ್ & ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕಳೆದೊಂದು ವಾರದಿಂದ ಅನಾರೋಗ್ಯ ಉಂಟಾಗಿತ್ತು. ಆದರೆ, ಕೊವಿಡ್-19 ನೆಗೆಟಿವ್ ಆಗಿದ್ದರು ಎಂದು ಕುಟುಂಬದ ಶೇಖ್ ಮುಸಾ ಇಸ್ಮಾಯಿಲ್ ಹೇಳಿಕೆ ನೀಡಿದ್ದಾರೆ. ಬರಾಕ್ ಒಬಾಮ ಶೃದ್ಧಾಂಜಲಿ ಸಂದೇಶ ಕಳಿಸಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಒಂದೊಮ್ಮೆ ಸಾಮಾನ್ಯ ಮಹಿಳೆಯಾಗಿದ್ದ ಸಾರಾ ಒಬಾಮ ಬಳಿಕ, ಸ್ಥಳೀಯ ಶಾಲೆಗೆ ಡೋನಟ್ಸ್ ಹಾಗೂ ಬಿಸಿ ಗಂಜಿ ಒದಗಿಸುತ್ತಿದ್ದರು. ಈ ಕೆಲಸಕ್ಕಾಗಿ ಅವರು ಜನಜನಿತರೂ ಆಗಿದ್ದರು. ಸಾರಾ ಒಬಾಮ ಜಗತ್ತಿಗೇ ಪರಿಚಿತರಾಗಿದ್ದು 2008ರಲ್ಲಿ. ಸಾರಾ ಮೊಮ್ಮಗ ಬರಾಕ್ ಒಬಾಮ ಅಮೆರಿಕದ ಮೊದಲ ಕಪ್ಪುವರ್ಣೀಯ ಅಧ್ಯಕ್ಷರಾದಾಗ. 2006ರಲ್ಲೇ ಬರಾಕ್ ಒಬಾಮ ಕೀನ್ಯಾಕ್ಕೆ ಭೇಟಿ ನೀಡಿದ್ದರು. 2008ರಲ್ಲಿ ಅವರು ಅಮೆರಿಕ ಅಧ್ಯಕ್ಷರಾದರು. ಆ ನಂತರವಂತೂ ಸಾರಾ ಮನೆ ಪ್ರವಾಸಿಗರ ಆಕರ್ಷಣೀಯ ತಾಣವಾಗಿತ್ತು.

1922ರಲ್ಲಿ ವಿಕ್ಟೋರಿಯಾ ಸರೋವರದ ದಡದ ಹಳ್ಳಿಯಲ್ಲಿ ಜನಿಸಿದ ಸಾರಾ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಜ್ಜನ ಮೂರನೇ ಹೆಂಡತಿಯಾಗಿದ್ದರು. ಒಬಾಮ ಅಜ್ಜ, ಹುಸೈನ್ ಒನ್ಯಾಂಗೊ ಒಬಾಮ ಹಳ್ಳಿಯ ಗಿಡಮೂಲಿಕೆ ವೈದ್ಯರಾಗಿದ್ದರು ಹಾಗೂ ಬರ್ಮಾದಲ್ಲಿ (ಈಗಿನ ಮಯನ್ಮಾರ್) ಬ್ರಿಟಿಷರ ಪರವಾಗಿ ಹೋರಾಡಿದ್ದರು.

ಅಜ್ಜಿ ಸಾವಿನ ಬಗ್ಗೆ ಫೇಸ್ಬುಕ್​ನಲ್ಲಿ ಬರೆದುಕೊಂಡಿರುವ ಒಬಾಮ, ತಮ್ಮ ಹಾಗೂ ಹಿರಿಯರ ಹಿಂದಿನ ಜೀವನವನ್ನು ನೆನಪಿಸಿಕೊಂಡಿದ್ದಾರೆ. ಸಣ್ಣ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಅಜ್ಜಿ ಯಾವುದೇ ಶಾಲಾ ಶಿಕ್ಷಣವನ್ನು ಪಡೆದುಕೊಂಡವರಲ್ಲ. ಸಣ್ಣ ವಯಸ್ಸಿಗೆ ತಮಗಿಂತ ಬಹು ಹಿರಿಯರನ್ನು ಮದುವೆಯಾದರು. ವಿದ್ಯುತ್ ಸಂಪರ್ಕ ಇರದ ಮಣ್ಣಿನ ಗೋಡೆಯ ಮನೆಯಲ್ಲಿ ಬದುಕು ಸಾಗಿಸಿದರು. ಎಂಟು ಮಕ್ಕಳನ್ನು ಸಾಕಿದರು. ಆಡು, ಕೋಳಿಗಳನ್ನು ಸಾಕಿ ಬದುಕಿದರು ಎಂದು ನೆನಪಿಸಿಕೊಂಡಿದ್ದಾರೆ.

My family and I are mourning the loss of our beloved grandmother, Sarah Ogwel Onyango Obama, affectionately known to…

Posted by Barack Obama on Monday, March 29, 2021

ಸಾರಾ ಒಬಾಮ, ಬರಾಕ್ ಒಬಾಮ ತಂದೆಯ ಮಲತಾಯಿ. ಆದರೂ ಒಬಾಮಗೆ ಸಾರಾ ಮೇಲೆ ಬಹಳಷ್ಟು ಪ್ರೀತಿ. ಅವರನ್ನು ‘Granny’ ಎಂದೇ ಕರೆಯುವ ಬರಾಕ್ ಒಬಾಮ, ತಮ್ಮ ಅಧ್ಯಕ್ಷ ಅವಧಿ ಮುಕ್ತಾಯವಾದ ಬಳಿಕ 2018ರಲ್ಲೂ ಸಾರಾ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Suez canal unblocked: ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್ ಗಿವನ್ ಹಡಗು ಮುಕ್ತ ಮುಕ್ತ ಮುಕ್ತ

ಇದನ್ನೂ ಓದಿ: WHO-China joint study: ಕೊರೊನಾ ಹುಟ್ಟಿದ್ದು ಲ್ಯಾಬ್​ನಲ್ಲಿ ಅಲ್ಲ, ಪ್ರಾಣಿಯಿಂದ ಬಂದಿದ್ದು!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ