WHO-China joint study: ಕೊರೊನಾ ಹುಟ್ಟಿದ್ದು ಲ್ಯಾಬ್​ನಲ್ಲಿ ಅಲ್ಲ, ಪ್ರಾಣಿಯಿಂದ ಬಂದಿದ್ದು!

ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳಲ್ಲಿ ಒಂದಾದ ಅಸೋಸಿಯೇಟೆಡ್​ ಪ್ರೆಸ್​ ವರದಿ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ದೇಶ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ವುಹಾನ್​ ವೈರಸ್​ ಪ್ರಯೋಗಾಲಯದಲ್ಲಿ ಹುಟ್ಟಿದ್ದಲ್ಲ ಎಂದು ಹೇಳಿದೆ. ಇದು ವಿಶೇಷ

WHO-China joint study: ಕೊರೊನಾ ಹುಟ್ಟಿದ್ದು ಲ್ಯಾಬ್​ನಲ್ಲಿ ಅಲ್ಲ,  ಪ್ರಾಣಿಯಿಂದ ಬಂದಿದ್ದು!
WHO-China joint study: ಕೊರೊನಾ ಹುಟ್ಟಿದ್ದು ಲ್ಯಾಬ್​ನಲ್ಲಿ ಅಲ್ಲ, ಪ್ರಾಣಿಯಿಂದ ಬಂದಿದ್ದು!
Follow us
ಡಾ. ಭಾಸ್ಕರ ಹೆಗಡೆ
| Updated By: ಸಾಧು ಶ್ರೀನಾಥ್​

Updated on: Mar 29, 2021 | 3:40 PM

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಜಂಟಿಯಾಗಿ ಕೈಗೊಂಡ ಕೊರೊನಾ ಎಲ್ಲಿ ಹುಟ್ಟಿರಬಹುದು ಎಂಬ ವೈಜ್ಞಾನಿಕ ಅಧ್ಯಯನದ ಕರಡು ಪ್ರತಿ ಈಗ ಹೊರಬಿದ್ದಿದೆ. ಅದರ ಪ್ರಕಾರ, ಈ ವೈರಸ್ ಪ್ರಯೋಗಾಲಯದಲ್ಲಿ ಹುಟ್ಟಿರುವ ಸಾಧ್ಯತೆ ತುಂಬಾ ಕಡಿಮೆ ಮತ್ತು ಇದು, ಬಾವಲಿಯಿಂದ ಮಾನವನಿಗೆ ಬೇರೆ ಯಾವುದೋ ಪ್ರಾಣಿ ಮೂಲಕ ಹಬ್ಬಿದೆ. ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್​ನ ವರದಿ ಪ್ರಕಾರ, ಇಷ್ಟು ದಿನ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿಕೊಂಡು ಬಂದಿದ್ದವೋ ಅದನ್ನೇ ಈ ವರದಿಯಲ್ಲಿ ಪುನರುಚ್ಚರಿಸಿದಂತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಜಂಟಿ ಸಂಶೋಧನಾ ಟೀಂ ಈ ಸಂಶೋಧನೇ ಮುಂದುವರಿಸಬೇಕು ಮತ್ತು ಇದರ ಮೂಲ ಹುಡುಕಬೇಕೆಂದು ಹೇಳಿವೆ ಎಂದು ಈ ಕರಡು ಪ್ರತಿಯಲ್ಲಿ ನಮೂದಿಸಲಾಗಿದೆ. ಆದರೆ, ಅಧಿಕೃತವಾಗಿ ವರದಿ ಬಿಡುಗಡೆ ಮುಂದಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲೋ ಒಂದು ಕಡೆ ಚೀನಾ ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ಒತ್ತಡ ಹೇರುತ್ತಿದೆಯಾ ಎಂಬ ಸಂಶಯ ಬರುತ್ತಿದೆ ಎಂದು ಎಪಿ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ತನ್ನ ಬಳಿ ಕರಡು ಪ್ರತಿಯೊಂದಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಇದನ್ನೇ ಬಿಡುಗಡೆ ಮಾಡುತ್ತದೆಯೋ ಅಥವಾ ಕರಡಿನಲ್ಲಿ ಇನ್ನೂ ಏನಾದರೂ ಬದಲಾವಣೆ ಮಾಡಲು ಸಾಧ್ಯವೋ ಎಂಬುದನ್ನು ಕಾದು ನೋಡಬೇಕು ಎಂದು ಎಪಿ ಸುದ್ದಿಸಂಸ್ಥೆ ಹೇಳಿದೆ.

ಅಮೆರಿಕದ ತಜ್ಞರು ಹೇಳೋದು ಬೇರೆ ಈ ನಡುವೆ ಅಮೆರಿಕದ ತಜ್ಞರು ಹೇಳುತ್ತಿರುವುದೇ ಬೇರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ, ಅಮೆರಿಕದ ಮಾಜಿ ನಿರ್ದೇಶಕ, ರಾಬರ್ಟ್ ರೆಡ್ಫೀಲ್ಡ್ ಅವರು ಈ ವೈರಸ್ ಪ್ರಯೋಗಾಲಯದಲ್ಲೇ ಹುಟ್ಟಿದ್ದು. ಶುಕ್ರವಾರ ಅಮೆರಿಕದ ಕೆಲವು ಸುದ್ದಿ ಸಂಸ್ಥೆಗಳಿಗೆ ಸಂದರ್ಶನ ನೀಡಿದ ಅವರು ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 2019 ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳು ವುಹಾನ್, ಚೀನಾದಿಂದ ಇದು ಹೊರಬಂದಿದೆ ಎಂದು ಅವರು ಹೇಳಿದ್ದಾರೆ.

ಆದರೆ ಅವರು ಒಂದು ಮಾತನ್ನು ಒತ್ತಿ ಹೇಳಿದ್ದಾರೆ: ಇದು ನನ್ನ ಅಭಿಪ್ರಾಯವೇ ಹೊರತು, ಯಾವುದೇ ಸಂಶೋಧನೆಯ ಅಂತಿಮ ವರದಿ ಅಲ್ಲ. ನನಗೆ ಗೊತ್ತು ನನ್ನ ಅಭಿಪ್ರಾಯವನ್ನು ಬೇರೆಯವರು ಒಪ್ಪುತ್ತಿಲ್ಲ ಎಂದು. ಅದರ ಬಗ್ಗೆ ನನಗೆ ಬೇಸರ ಇಲ್ಲ. ಒಂದಲ್ಲ ಒಂದು ದಿನ ವಿಜ್ಞಾನ ಇದರ ಹಿಂದಿನ ಮರ್ಮವನ್ನು ಭೇದಿಸಲಿದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಕಾರಕ ವೈರಸ್​ಅನ್ನು ಪ್ರಯೋಗಲಾಯದಲ್ಲಿ ಕೆಲಸ ಮಾಡುವವರ ಮೇಲೆ ದಾಳಿ ಮಾಡಲು ಪ್ರಯೋಗಲಾಯದಲ್ಲಿಯೇ ಈ ವೈರಸ್​ಅನ್ನು ಹುಟ್ಟು ಹಾಕಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಬೇರೆಯವರ ಕೆಲಸದ ಬಗ್ಗೆ ಟಿಪ್ಪಣಿ ಮಾಡೋಲ್ಲ. ನಾನೊಬ್ಬ ವೈರಾಲಜಿಸ್ಟ್. ಇಡೀ ಜೀವನವನ್ನು ಈ ವೈರಾಲಜಿ ವಿಷಯ ಅಧ್ಯಯನದಲ್ಲಿಯೇ ಕಳೆದಿದ್ದೇನೆ. ನನಗೆ ಒಂದು ಸಂಶಯ ಕಾಡುತ್ತಿದೆ: ಯಾವುದೇ ವೈರಸ್ ಪ್ರಾಣಿಯಿಂದ ಮನುಷ್ಯನಿಗೆ ಹಬ್ಬಿದಾಗ, ಆ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹಬ್ಬುವ ಗುಣ ಸ್ವಲ್ಪ ನಿಧಾನವಾಗಿರುತ್ತದೆ. ಆದರೆ ಇಲ್ಲಿ ಆದದ್ದೇ ಬೇರೆ. ಇದರಿಂದಾಗಿ ಈ ವೈರಸ್ ಪ್ರಯೋಗಾಲಯದಲ್ಲಿಯೇ ಹುಟ್ಟಿರಬಹುದು ಎಂಬುದು ನನ್ನ ಬಲವಾದ ನಂಬಿಕೆ ಎಂದು ಅವರು ಸಿಎನ್ಎನ್ ಟಿವಿ ಸಂದರ್ಶನದಲ್ಲಿ ಹೇಳಿದರು.

ಫೌಜಿ ನಂಬಿಕೆಯೇ ಬೇರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ವೈದ್ಯಕೀಯ ಸಲಹಾಕಾರ ಮತ್ತು ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಅಧ್ಯಯನ ಕೇಂದ್ರದ ಮುಖ್ಯಸ್ಥ ಅಂಥೊನಿ ಫೌಜಿ ಅವರಿಗೆ ಈ ಕುರಿತು ಕೇಳಿದಾಗ, ಈ ಸಾಧ್ಯತೆ ಕಡಿಮೆ ಎಂದು ಹೇಳಿದರು.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?