AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ಭಾಸ್ಕರ ಹೆಗಡೆ

ಡಾ. ಭಾಸ್ಕರ ಹೆಗಡೆ

Editor, TV9 Kannada Digital - TV9 Kannada

bhaskar.hegde@tv9.com

ಟಿವಿ9 ಡಿಜಿಟಲ್​ ಸಂಪಾದಕ. 28 ವರ್ಷಗಳಿಂದ ಇಂಗ್ಲಿಷ್ ಮುದ್ರಣ ಮಾಧ್ಯಮ​ ಮತ್ತು ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಸುದ್ದಿ, ದೀರ್ಘ ಲೇಖನ, ನುಡಿಚಿತ್ರ, ವಿಶ್ಲೇಷಣೆ, ಅಂಕಣ ಸ್ಕೂಪ್​ ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಎರಡು ಕಥಾ ಸಂಕಲನಗಳ ಪ್ರಕಟಣೆ. ಸಾರ್ವಜನಿಕ ನೀತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್​ಡಿ ಪದವಿ. ಹಿಂದೂಸ್ತಾನಿ ಸಂಗೀತ, ಕ್ರಿಕೆಟ್​, ತತ್ವಶಾಸ್ತ್ರ ಮತ್ತು ಕಾನೂನಿನ ವಿಷಯದ ತೀವ್ರ ಆಸಕ್ತಿ.

Read More
Follow On:
ಬೇಡ್ತಿ ಮತ್ತು ಬೆಂಗಳೂರಿನ ಟನೆಲ್​ ರಸ್ತೆ ವಿವಾದ: ಸೋನಿಯಾ ಗಾಂಧಿ ಮತ್ತು ಜೈರಾಮ್​ ರಮೇಶ್ ಪರಿಸರ ಪ್ರೇಮ ತೋರಿಸಲಿ​

ಬೇಡ್ತಿ ಮತ್ತು ಬೆಂಗಳೂರಿನ ಟನೆಲ್​ ರಸ್ತೆ ವಿವಾದ: ಸೋನಿಯಾ ಗಾಂಧಿ ಮತ್ತು ಜೈರಾಮ್​ ರಮೇಶ್ ಪರಿಸರ ಪ್ರೇಮ ತೋರಿಸಲಿ​

ಕಾಂಗ್ರೆಸ್​ ಪಕ್ಷಕ್ಕೆ ಒಂದು ಇತಿಹಾಸವಿದೆ. ಕೇರಳದ ಸೈಲೆಂಟ್​ ವ್ಯಾಲಿ ಹೋರಾಟ ನಡೆದಾಗ, ಹೋರಾಟಗಾರರ ಮಾತಿಗೆ ಒಪ್ಪಿ ಆ ಯೋಜನೆಯನ್ನು ಕೈ ಬಿಟ್ಟಿದ್ದು ಅಂದಿನ ಇಂದಿರಾಗಾಂಧಿ ಸರಕಾರ. ಈಗ ಮತ್ತೆ ಪರಿಸರ ವಿರೋಧಿ ಯೋಜನೆಗೆ ರಾಜ್ಯ ಸರಕಾರ ಕೈ ಹಾಕಿರುವಾಗ ಕೇಂದ್ರದ ಕಾಂಗ್ರೆಸ್ ನಾಯಕರು ಮಧ್ಯಪ್ರವೇಶಿಸಿಸುವುದು ಅತೀ ಅವಶ್ಯ.

ಭೈರಪ್ಪ ನಿರ್ಗಮನ: ಸಂತಾಪದ ಬೆಳಕು ಆರಿಸಿದ ಪ್ರಗತಿಪರ ದೀಪಗಳು

ಭೈರಪ್ಪ ನಿರ್ಗಮನ: ಸಂತಾಪದ ಬೆಳಕು ಆರಿಸಿದ ಪ್ರಗತಿಪರ ದೀಪಗಳು

ಸಮಾಜದಲ್ಲಿರುವ ಕಟ್ಟರ್​ ಬಲಪಂಥೀಯರ ನಡವಳಿಕೆ ಹೇಗಿರುತ್ತದೆ ಎಂಬುದರ ಕುರಿತು ಸಂಶೋಧನೆಯಾಗಿದೆ, ಮಾಹಿತಿ ದಾಖಲಾಗಿವೆ. ಆದರೆ ಪ್ರಗತಿಪರರ ನಡುವಳಿಕೆ ಮತ್ತು ಕೊಡುಗೆಯನ್ನು ಆಳವಾಗಿ ಅಧ್ಯಯನ ಮಾಡುತ್ತಿರುವಂತೆ ಕಾಣುತ್ತಿಲ್ಲ. ಭೈರಪ್ಪನವರ ಸಾವಿನ ನಂತರ ಕರ್ನಾಟಕದ ಸಾರಸ್ವತ ಲೋಕದಲ್ಲಿ ನಡೆದ ಬೆಳವಣಿಗೆ ಇವರ ಮುಖವನ್ನು ಅನಾವರಣಗೊಳಿಸಿದೆ.

ಹಿಂದೂ ಧರ್ಮದಲ್ಲಿಲ್ಲದ ಹೊಸ ಜಾತಿ ಕರ್ನಾಟಕದಲ್ಲಿ ಹುಟ್ಟಿದ್ದು ಯಾಕೆ?

ಹಿಂದೂ ಧರ್ಮದಲ್ಲಿಲ್ಲದ ಹೊಸ ಜಾತಿ ಕರ್ನಾಟಕದಲ್ಲಿ ಹುಟ್ಟಿದ್ದು ಯಾಕೆ?

ಜಾತಿ ಗಣತಿಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಜಾತಿ ಕುರಿತ ವಿವಾದದ ಜ್ವಾಲೆ ಕರ್ನಾಟಕದಲ್ಲಿ ತೀವ್ರಗೊಂಡಿದೆ. ಜಾತಿ ಪದ್ಧತಿ ಇರುವವರೆಗೆ ಸಮಾಜದಲ್ಲಿ ಸಮಾನತೆ ಬರುವುದಿಲ್ಲ, ಜಾತಿ ಪದ್ಧತಿ ತೊಲಗಬೇಕು ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿಯೇ ಕರ್ನಾಟಕದಲ್ಲಿ ಹೊಸ ಜಾತಿಗಳು ಹುಟ್ಟಿದ್ದು ಇತಿಹಾಸದ ವ್ಯಂಗ್ಯವಲ್ಲವೇ?

ಸಾಮಾಜಿಕ ಆರ್ಥಿಕ ಸಮೀಕ್ಷೆ 2025 ಉರುಫ್​ ಜಾತಿ ಗಣತಿ: ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಅಖಾಡ ರೆಡಿ

ಸಾಮಾಜಿಕ ಆರ್ಥಿಕ ಸಮೀಕ್ಷೆ 2025 ಉರುಫ್​ ಜಾತಿ ಗಣತಿ: ಮತ್ತೊಂದು ರಾಜಕೀಯ ಜಿದ್ದಾಜಿದ್ದಿಗೆ ಅಖಾಡ ರೆಡಿ

ಕರ್ನಾಟಕ ಹಿಂದುಳಿದ ವರ್ಗ ಆಯೋಗ ನಡೆಸಲು ಮುಂದಾಗಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆ- 2025 ಉರುಫ್​ ಜಾತಿ ಗಣತಿ ಉದ್ದೇಶ ಸ್ಪಷ್ಟ: ಕರ್ನಾಟಕ ಸರಕಾರದ ಯೋಜನೆಗಳು ನಿಜವಾಗಿಯೂ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಕಂಡುಕೊಳ್ಳುವುದು. ಆದರೆ, ಗಣತಿಯ ಹಿಂದಿನ ನೀಲನಕ್ಷೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಸರಕಾರದ ಈ ಉದ್ದೇಶ ಈಡೇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಧರ್ಮಸ್ಥಳ ವಿರೋಧಿ ಅಭಿಯಾನದ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್​ಐಟಿಗಿದೆ ತಾಂತ್ರಿಕ ಸಂಕಷ್ಟ

ಧರ್ಮಸ್ಥಳ ವಿರೋಧಿ ಅಭಿಯಾನದ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್​ಐಟಿಗಿದೆ ತಾಂತ್ರಿಕ ಸಂಕಷ್ಟ

‘ಧರ್ಮಸ್ಥಳದ ಅನ್ಯಾಯ’ದ ಕುರಿತು ನಡೆಯುತ್ತಿರುವ ತನಿಖೆ ಯಾರೂ ಊಹಿಸದ ದಾರಿಯಲ್ಲಿ ಮುಂದುವರೆದಿದೆ. ಅಲ್ಲಿ ನಡೆದಿದೆ ಎನ್ನಲಾದ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಯಾರು ಸಾಕ್ಷಿ ನೀಡಬಹುದೆಂದು ನಂಬಲಾಗಿತ್ತೋ, ಅವರೇ ಇವತ್ತು ಪಿತೂರಿಯ ಭಾಗವಾಗಿ ನಿಂತಿರುವುದು ವಿಪರ್ಯಾಸ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಧರ್ಮಸ್ಥಳ ವಿರೋಧಿ ಸಂಕಥನಕ್ಕೆ ಕಾರಣಿಕರ್ತರಾದ ನಿಜವಾದ ಶಕ್ತಿಗಳನ್ನು ಹುಡುಕಿ ಅವರಿಗೆ ಕೋಳ ತೊಡಿಸುವವರೆಗೂ ತನಿಖೆ ಮುಂದುವರೆಸಿ ಎಂದು ಕಾಂಗ್ರೆಸ್ ಸರಕಾರ ನಿರ್ದೇಶನ ನೀಡಬೇಕಿದೆ.

OMG! ಆನ್​ಲೈನ್ ಮನಿ ಗೇಮಿಂಗ್ ನಿಷೇಧ – ನೈತಿಕತೆ ಎತ್ತಿಹಿಡಿಯುವ ಕಾನೂನೋ ಅಥವಾ ಗದಾ ಪ್ರಹಾರವೋ?

OMG! ಆನ್​ಲೈನ್ ಮನಿ ಗೇಮಿಂಗ್ ನಿಷೇಧ – ನೈತಿಕತೆ ಎತ್ತಿಹಿಡಿಯುವ ಕಾನೂನೋ ಅಥವಾ ಗದಾ ಪ್ರಹಾರವೋ?

ಭಾರತದಲ್ಲಿ ಆನ್​​ಲೈನ್ ಮನಿ ಗೇಮಿಂಗ್ (OMG) ನಿಷೇಧಿಸುವ ‘ಆನ್‌ಲೈನ್ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಮಸೂದೆ, 2025 (TPROG)’ ಸಂಸತ್​​ನಲ್ಲಿ ಅನುಮೋದಿಸಲ್ಪಟ್ಟಿದೆ. ಈ ಕ್ರಮದ ಬಗ್ಗೆ ಇದೀಗ ದೇಶದಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೊಸ ಉದ್ಯಮವನ್ನು ಗುರಿಯಾಗಿಸಿಕೊಂಡಿರುವ ಕೇಂದ್ರ ಸರ್ಕಾರದ ಈ ಕ್ರಮ ಸಮರ್ಥನೀಯವೇ ಅಥವಾ ಅನಿಯಂತ್ರಿತ ಅತಿಕ್ರಮಣವೇ? ಈ ಕುರಿತಾದ ಎಲ್ಲಾ ಆಯಾಮಗಳನ್ನು ವಿಮರ್ಶಿಸಿದ ನಂತರವೇ ಜನಾಭಿಪ್ರಾಯ ಮೂಡಬೇಕು.

ಮತ ಕಳ್ಳತನ ಆರೋಪ: ಹೊಸ ಬಾಟಲಿಯಲ್ಲಿ ಹಳೆ ಮದ್ಯದೊಂದಿಗೆ ಬಂದ ರಾಹುಲ್ ಗಾಂಧಿ?

ಮತ ಕಳ್ಳತನ ಆರೋಪ: ಹೊಸ ಬಾಟಲಿಯಲ್ಲಿ ಹಳೆ ಮದ್ಯದೊಂದಿಗೆ ಬಂದ ರಾಹುಲ್ ಗಾಂಧಿ?

ನಮ್ಮಲ್ಲಿ ಪ್ರಜಾಪ್ರಭುತ್ವ ಬೇರು ಬಿಟ್ಟಾಗಿನಿಂದಲೇ ಮತದಾರರ ಪಟ್ಟಿಯಲ್ಲಿ ಲೋಪದೋಷ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೊದಲು, ಮತ ಪತ್ರಗಳ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಗಿಂತ ಹೆಚ್ಚಿನ ಪಾರದರ್ಶಕತೆ ಬಂದಿದ್ದರೂ, ನಮ್ಮ ಮತದಾರ ಪಟ್ಟಿಗಳು ಸಂಪೂರ್ಣ ಸ್ವಚ್ಛವಾಗಿಲ್ಲ. ಇದಕ್ಕೆ ರಾಜಕೀಯ ಪಕ್ಷಗಳು ಮತ್ತು ಜನರೇ ಕಾರಣ. ಇದನ್ನಿಟ್ಟುಕೊಂಡು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ದ ಮತ ಕಳವಿನ ಆರೋಪ ಮಾಡುವ ರಾಹುಲ್ ಗಾಂಧಿಗೆ ಬೇರೆ ಉದ್ದೇಶ ಇರಬಹುದೇ ಎಂಬ ಶಂಕೆ ಹುಟ್ಟಿದರೆ ಅದು ತಪ್ಪಲ್ಲ.

ಮನೆ ಮನೆಗೆ ಕರ್ನಾಟಕ ಪೊಲೀಸ್: ಅಪರಾಧ ಕೃತ್ಯ ಭೇದಿಸಲು ಹೊರ ರಾಜ್ಯಗಳ ಪೊಲೀಸ್!

ಮನೆ ಮನೆಗೆ ಕರ್ನಾಟಕ ಪೊಲೀಸ್: ಅಪರಾಧ ಕೃತ್ಯ ಭೇದಿಸಲು ಹೊರ ರಾಜ್ಯಗಳ ಪೊಲೀಸ್!

ಕಳೆದ ಕೆಲವು ವಾರಗಳಲ್ಲಿ ಅಪರಾಧಕ್ಕೆ ಮುನ್ನುಡಿ ಬರೆವ ಮೂರ್ನಾಲ್ಕು ಘಟನೆಗಳು ಕರ್ನಾಟಕದಲ್ಲಿ ನಡೆದಿವೆ. ಬೇರೆ ಬೇರೆ ತರಹದ ಅಪರಾಧ ಕೃತ್ಯದಲ್ಲಿ ತೊಡಗಿರುವವರನ್ನು ಹೊರ ರಾಜ್ಯಗಳ ಪೊಲೀಸರು ಬಂದು ಬಂಧಿಸಿರುವುದು ತೀರಾ ಕಳವಳಕಾರಿ ಬೆಳವಣಿಗೆ. ಇದಕ್ಕೆ ಕಾರಣ; ಪೊಲೀಸ್ ಇಲಾಖೆಯಲ್ಲಿರುವ ಹಲವು ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನೇ ಗುರಾಣಿಯನ್ನಾಗಿ ಮಾಡಿಕೊಂಡು, ಕೆಲ ಪೊಲೀಸ್​ ಅಧಿಕಾರಿಗಳು ನಡೆಸುವ ಭ್ರಷ್ಟ ವ್ಯವಸ್ಥೆ. ಇದು ಇಡೀ ಇಲಾಖೆಗೆ ಕಪ್ಪು ಚುಕ್ಕೆ ತರುವಂತಾಗಿದೆ.

ಹಿಂದೂ ಅಸ್ಮಿತೆಯನ್ನು ಹೊಸ ರೀತಿಯಲ್ಲಿ ಓದಲು ಕಲಿಸಿದ ಎಸ್​.ಕೆ. ರಾಮಚಂದ್ರ ರಾಯರು: ಮರೆತರೆ ನಮಗೇ ಹಾನಿ

ಹಿಂದೂ ಅಸ್ಮಿತೆಯನ್ನು ಹೊಸ ರೀತಿಯಲ್ಲಿ ಓದಲು ಕಲಿಸಿದ ಎಸ್​.ಕೆ. ರಾಮಚಂದ್ರ ರಾಯರು: ಮರೆತರೆ ನಮಗೇ ಹಾನಿ

ನಾಳೆ ರವಿವಾರ, ಕನ್ನಡದ ಅಪರೂಪದ ವ್ಯಕ್ತಿ ಸಾ.ಕೃ. ರಾಮಚಂದ್ರ ರಾಯರ ಬಗ್ಗೆ ಒಂದು ಸಂಸ್ಮರಣ ಗ್ರಂಥ ಹೊರಬರಲಿದೆ. ರಾಮಚಂದ್ರ ರಾಯರ ಕೊಡುಗೆಯ ಹಿಂದೆ ಇರುವ ಕೆಲವು ಅಂಶಗಳನ್ನು ಎತ್ತಿ ಹಿಡಿದು, ಅವರ ಪ್ರಸ್ತುತತೆಯನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ತೋರಿಸುವ ಒಂದು ಸಣ್ಣ ಪ್ರಯತ್ನ ಇದು.

ಸುಪ್ರೀಂ ಕೋರ್ಟ್ ಚಾಟಿ ಏಟಿನ ಹಿನ್ನೆಲೆ: ಸುಳ್ಳು ಸುದ್ದಿ ನಿಯಂತ್ರಣಾ ವಿಧೇಯಕ ರಾಜಕೀಯಕ್ಕೆ ಬೇಕು ಬ್ರೇಕ್

ಸುಪ್ರೀಂ ಕೋರ್ಟ್ ಚಾಟಿ ಏಟಿನ ಹಿನ್ನೆಲೆ: ಸುಳ್ಳು ಸುದ್ದಿ ನಿಯಂತ್ರಣಾ ವಿಧೇಯಕ ರಾಜಕೀಯಕ್ಕೆ ಬೇಕು ಬ್ರೇಕ್

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿಆರ್​ ಗವಾಯಿ ನ್ಯಾಯಪೀಠ, ಸುಳ್ಳು ಸುದ್ದಿ ಹಬ್ಬಿಸುವವರ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಾವ ರೀತಿ ವರ್ತಿಸಬೇಕು ಎಂಬ ಕುರಿತಾಗಿ ತೇಜಸ್ವಿ ಸೂರ್ಯ ಅವರ ಪ್ರಕರಣದಲ್ಲಿ ತಿಳಿಸಿದೆ. ಇದನ್ನು ಮನಗಂಡು ಮುಂಗಾರು ಅಧಿವೇಶನದಲ್ಲಿ ತರಲು ಹೊರಟಿರುವ ಹೊಸ ವಿಧೇಯಕದ ಬಗ್ಗೆ ಮರು ಚಿಂತನೆ ಮಾಡಿದರೆ ಸರಕಾರಕ್ಕೆ ಒಳ್ಳೆಯದು.

ಸರಕಾರಿ ಬ್ಯಾಂಕುಗಳಲ್ಲಿ ಕನ್ನಡ ಅಸ್ಮಿತೆಯ ಹರಣ: ಎಷ್ಟು ಸುಳ್ಳು? ಎಷ್ಟು ನಿಜ?

ಸರಕಾರಿ ಬ್ಯಾಂಕುಗಳಲ್ಲಿ ಕನ್ನಡ ಅಸ್ಮಿತೆಯ ಹರಣ: ಎಷ್ಟು ಸುಳ್ಳು? ಎಷ್ಟು ನಿಜ?

ನಾವೀಗ ಬ್ರಿಟಿಷರ ಕಾಲದಲ್ಲಿ ಇಲ್ಲ. ಅಧಿಕಾರಿಯ ಭಾಷೆಯಲ್ಲಿಯೇ ನಾವು ವ್ಯವಹರಿಸಬೇಕು ಅಥವಾ ಅಧಿಕಾರಿ ಹೇಳಿದ್ದೇ ಕಾನೂನು ಎಂಬುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಲ್ಲ. ಆದರೆ ಇತ್ತೀಚೆಗೆ ಹಲವಾರು ರಾಷ್ಟ್ರೀಯ ಬ್ಯಾಂಕುಗಳ ಶಾಖೆಗಳಲ್ಲಿ ಅಧಿಕಾರಿಗಳು ಮತ್ತು ಗುಮಾಸ್ತರು ಸ್ಥಳೀಯ ಗ್ರಾಹಕರ ಜೊತೆ ಕೆಟ್ಟದಾಗಿ ವರ್ತಿಸಿ ಸ್ಥಳೀಯ ಭಾಷೆ, ಅಂದರೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸುತ್ತಿರುವುದು ಖಂಡಿತವಾಗಿ ಒಳ್ಳೆಯ ಬೆಳವಣಿಗೆ ಅಲ್ಲ.

ದಯಾನಂದ್​ ಮತ್ತು ಅಧಿಕಾರಿಗಳ ಅಮಾನತು: ಭಾವನಾತ್ಮಕ ಆಕ್ರೋಶ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸದು

ದಯಾನಂದ್​ ಮತ್ತು ಅಧಿಕಾರಿಗಳ ಅಮಾನತು: ಭಾವನಾತ್ಮಕ ಆಕ್ರೋಶ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸದು

ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಸಂಭವಿಸಿದ ಕಾಲ್ತುಳಿತ ವಿಚಾರವಾಗಿ ಬೆಂಗಳೂರಿನ ಪೊಲೀಸ್​ ಕಮಿಷನರ್​ ಆಗಿದ್ದ ದಯಾನಂದ್​ ಮತ್ತು ಇನ್ನಿತರೇ ಹಿರಿಯ ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಿರುವ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಕಟವಾಗುತ್ತಿರುವ ಸಿಟ್ಟು, ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗದು. ಇದನ್ನು ಸಾರ್ವಜನಿಕರು ಮೊದಲು ಗಮನಿಸಬೇಕು.