AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂ ಕೋರ್ಟ್ ಚಾಟಿ ಏಟಿನ ಹಿನ್ನೆಲೆ: ಸುಳ್ಳು ಸುದ್ದಿ ನಿಯಂತ್ರಣಾ ವಿಧೇಯಕ ರಾಜಕೀಯಕ್ಕೆ ಬೇಕು ಬ್ರೇಕ್

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿಆರ್​ ಗವಾಯಿ ನ್ಯಾಯಪೀಠ, ಸುಳ್ಳು ಸುದ್ದಿ ಹಬ್ಬಿಸುವವರ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಾವ ರೀತಿ ವರ್ತಿಸಬೇಕು ಎಂಬ ಕುರಿತಾಗಿ ತೇಜಸ್ವಿ ಸೂರ್ಯ ಅವರ ಪ್ರಕರಣದಲ್ಲಿ ತಿಳಿಸಿದೆ. ಇದನ್ನು ಮನಗಂಡು ಮುಂಗಾರು ಅಧಿವೇಶನದಲ್ಲಿ ತರಲು ಹೊರಟಿರುವ ಹೊಸ ವಿಧೇಯಕದ ಬಗ್ಗೆ ಮರು ಚಿಂತನೆ ಮಾಡಿದರೆ ಸರಕಾರಕ್ಕೆ ಒಳ್ಳೆಯದು.

ಸುಪ್ರೀಂ ಕೋರ್ಟ್ ಚಾಟಿ ಏಟಿನ ಹಿನ್ನೆಲೆ: ಸುಳ್ಳು ಸುದ್ದಿ ನಿಯಂತ್ರಣಾ ವಿಧೇಯಕ ರಾಜಕೀಯಕ್ಕೆ ಬೇಕು ಬ್ರೇಕ್
ಸುಳ್ಳು ಸುದ್ದಿ ನಿಯಂತ್ರಣಾ ವಿಧೇಯಕ (ಟಿವಿ9 ಕನ್ನಡದ ಫೋಟೋ)Image Credit source: Tv9 kannada
ಡಾ. ಭಾಸ್ಕರ ಹೆಗಡೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 22, 2025 | 6:29 PM

Share

ಮೈಸೂರಿನ ಮುಡಾ ಪ್ರಕರಣಕ್ಕೆ (muda case) ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪತ್ನಿ ಪಾರ್ವತಿಯವರನ್ನು ವಿಚಾರಣೆಗೆ ಕರೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯಕ್ಕೆ ಸರ್ವೋಚ್ಚ ನ್ಯಾಯಾಲಯ (supreme court) ನೀಡಿದ ತಪರಾಕಿಯ ಕುರಿತು ಪ್ರತಿಕ್ರಿಯಿಸುತ್ತ, ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲೆಡೆ ಸಂಭ್ರಮಿಸುತ್ತಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ, ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿತ್ತು. ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದು, ಅದನ್ನು ಸಾರ್ವಜನಿಕರು ಕೂಡ ಸ್ವಾಗತಿಸಿದ್ದಾರೆ. ‘ಇಂತಹ ವಿಚಾರವನ್ನು ರಾಜಕೀಯಕ್ಕೆ ಬಿಟ್ಟುಬಿಡಿ, ನೀವು ಆ ಕೆಲಸ ಮಾಡಲು ಹೋಗಬೇಡಿ’ ಎಂದು ಹೇಳುವ ಮೂಲಕ, ಪಾರ್ವತಿ ಅವರನ್ನು ಮಾನಸಿಕ ಹಿಂಸೆಗೆ ಗುರಿ ಪಡಿಸಬೇಡಿ ಎಂಬ ಅರ್ಥ ಬರುವಂತೆ, ನ್ಯಾಯ ಪೀಠ ಹೇಳಿದೆ ಮತ್ತು ಆ ಮೂಲಕ ಸರ್ವೋಚ್ಚ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಕಿವಿ ಹಿಂಡಿದೆ.

ಇನ್ನೊಂದು ಕೇಸಿನ ವಿಚಾರಣಾ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಇದೇ ಪೀಠ ಕರ್ನಾಟಕ ಸರಕಾರಕ್ಕೆ ಮಂಗಳಾರತಿ ಎತ್ತಿದೆ. ಇದು ಅತ್ಯಂತ ಕುತೂಹಲಕರವಾದ ವಿಷಯ. ಮಾಧ್ಯಮ ಮತ್ತು ಕರ್ನಾಟಕದ ಜನತೆ ನೆನಪಿಟ್ಟುಕೊಳ್ಳಬಹುದಾದ ವಿಚಾರ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ಹೇಳುತ್ತ ಅವರ ಮೇಲೆ ಸರಕಾರ ಪ್ರಕರಣ ದಾಖಲಿಸಿತ್ತು. ಅದನ್ನು ಪ್ರಶ್ನಿಸಿದ್ದ ಸೂರ್ಯ, ಕರ್ನಾಟಕ ಉಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಸೂರ್ಯ ವಿರುದ್ದ ಹಾಕಿದ್ದ ಎಫ್​​ಐಆರ್​ ಅನ್ನು ಉಚ್ಚ ನ್ಯಾಯಾಲಯ ವಜಾ ಗೊಳಿಸಿತ್ತು. ಇದನ್ನು ವೈಯಕ್ತಿಕ ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿತ್ತು. ಸೋಮವಾರ ಈ ಕೇಸಿನ ಕುರಿತಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಗವಾಯಿ ಅವರ ನೇತೃತ್ವದ ಪೀಠವು ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸಿದೆ. ಅಷ್ಟೇ ಅಲ್ಲ ಈ ರೀತಿಯ ವಿಚಾರವನ್ನು ತಮ್ಮ ಬಳಿ ತರಬೇಡಿ ಎಂಬುದನ್ನು ಖಡಕ್ಕಾಗಿ ಹೇಳಿದೆ.

ಇದನ್ನೂ ಓದಿ
Image
ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ನೋಟಿಸ್: ಕೇಂದ್ರದ ಪಾತ್ರವಿಲ್ಲ ಎಂದ ಜೋಶಿ
Image
ಬಿಜೆಪಿ ಬಣ ರಾಜಕೀಯ: ದೆಹಲಿಯಲ್ಲಿ ತಂತ್ರ-ಪ್ರತಿತಂತ್ರ!
Image
ಕೊನೆಗೂ ಮುನಿಸು ಮರೆತು ಒಂದಾದ ಜನಾರ್ದನ ರೆಡ್ಡಿ, ಶ್ರೀರಾಮುಲು
Image
ಇಲ್ಲಿಗೆ ಭೇಟಿ ಕೊಟ್ಟವರು ಸಿಎಂ ಕುರ್ಚಿ ಕಳೆದುಕೊಂಡ್ರು: ಈಗ ಸಿದ್ದರಾಮಯ್ಯಗೂ

ತೇಜಸ್ವಿ ಸೂರ್ಯ ಅವರಿಗೆ ಸಂಬಂಧಿಸಿದ ಕೇಸು ಸಾರ್ವಜನಿಕರಿಗೆ ಹೇಗೆ ಪ್ರಸ್ತುತ ಎನ್ನುವ ವಿಚಾರ ಉದ್ಭವಿಸುವುದು ಸಹಜ. ಆಗಸ್ಟ್ ಎರಡನೇ ವಾರ ಪ್ರಾರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಶೇಷ ಕಾನೂನೊಂದನ್ನು ಜಾರಿಗೆ ತರುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ. ಈ ಕುರಿತಾದ ಒಂದು ವಿಧೇಯಕಕ್ಕೆ ಈ ಅಧಿವೇಶನದಲ್ಲಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ವಿಧೇಯಕವು ಕಾನೂನಾಗಿ ಜಾರಿಗೆ ಬಂದರೆ ಸಾಮಾಜಿಕ ಜಾಲತಾಣದ ಮೇಲೆ ಕರ್ನಾಟಕ ಸರ್ಕಾರ ತನ್ನ ಕಬಂಧ ಬಾಹುವನ್ನು ಬೀಸುವುದು ಖಂಡಿತ. ಅಷ್ಟೇ ಅಲ್ಲ ಸರಕಾರದ ವಿರುದ್ಧ ಧ್ವನಿಯೆತ್ತುವ ಜನರ ಮಾತು, ಕೃತಿ, ನಡುವಳಿಕೆಯನ್ನು ಗಮನಿಸಿ, ಕಾದು, ಅವರ ಮೇಲೆ ಕೇಸು ಹಾಕಿ ಬಂಧಿಸಿ ಜೈಲಿಗೆ ಅಟ್ಟಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ವಿಧೇಯಕದ ಹಿಂದೆ ಒಂದಿಬ್ಬರು ಯುವ ಮಂತ್ರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಕೈ ಇರುವುದು ಕಂಡು ಬರುತ್ತಿದೆ.

ಸರಕಾರ ತನ್ನ ಉದ್ದೇಶವನ್ನು ಈಗಾಗಲೇ ಸ್ಪಷ್ಟಪಡಿಸಿದೆ; ಇದು ಪತ್ರಕರ್ತರ ವಿರುದ್ಧ ಬಳಸುವ ಅಸ್ತ್ರ ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡುವ ಮತ್ತು ಸುಳ್ಳು ಸುದ್ದಿ ಹರಡಿಸುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಈ ಅಸ್ತ್ರವನ್ನು ಬಳಸಲಾಗುವುದು ಮತ್ತು ಈಗ ತರುತ್ತಿರುವ ಕಾನೂನಿನಡಿ ಶಿಕ್ಷಿಸಲಾಗುವುದು ಎಂದಿದೆ. ಆದರೆ ನೇರ ಮಾತಿನಂತಿರುವುದಿಲ್ಲ, ಯಾವುದೇ ಸರಕಾರದ ಕೃತಿ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತೆಗೆದುಕೊಂಡ ಕೆಲವು ಉಪಕ್ರಮಗಳನ್ನು ರಾಜ್ಯದ ಕಾಂಗ್ರೆಸ್ ನಾಯಕರು ಈ ಹಿಂದೆ ತೀವ್ರವಾಗಿ ಟೀಕಿಸಿದ್ದಾರೆ. ಫ್ಯಾಕ್ಟ್​ ಚೆಕ್ ತಂಡವನ್ನು ತಾನು ರಚಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದಾಗ, ಕಾಂಗ್ರೆಸ್ ಪಕ್ಷದ ಕೇಂದ್ರದ ಮತ್ತು ರಾಜ್ಯದ ನಾಯಕರು ಬಿಜೆಪಿಯ ಮೇಲೆ ಮುಗಿಬಿದ್ದು ಟೀಕಿಸಿದ್ದರು. ಈಗ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ, ಸುಳ್ಳು ಸುದ್ದಿ ಹಬ್ಬಿಸುವವರನ್ನು ಹದ್ದುಬಸ್ತಿನಲ್ಲಿಡಬೇಕು ಎಂಬ ನೆಪದಲ್ಲಿ ರಾಜಕೀಯ ವಿರೋಧಿಗಳನ್ನು ಜೈಲಿಗಟ್ಟುವ ಹುನ್ನಾರದೊಂದಿಗೆ ಈ ವಿಧೇಯಕವನ್ನು ತರಲು ಹೊರಟಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಯಾವುದು ಸುಳ್ಳು ಸುದ್ದಿ? ಇದನ್ನು ನಿರ್ಧರಿಸುವವರು ಯಾರು? ಯಾವುದೋ ನ್ಯಾಯಾಲಯ ಅಥವಾ ಅರೆ ನ್ಯಾಯಾಲಯವು ಇದನ್ನು ನಿರ್ಧರಿಸುವುದಿಲ್ಲ. ಆಡಳಿತದಲ್ಲಿರುವ ರಾಜಕೀಯ ಪಕ್ಷದ ನಾಯಕರು ಪೊಲೀಸರನ್ನು ದಾಳವಾಗಿಸಿಕೊಂಡು ಇದನ್ನು ನಿರ್ಧರಿಸುತ್ತಾರೆ. ಮತ್ತು ಹಾಗೆ ಉಪಯೋಗಿಸಿಕೊಂಡು ತಮ್ಮ ವಿರೋಧಿಗಳು ಆಡಿದ ಮಾತು ಮತ್ತು ಅವರ ನಡವಳಿಕೆಯನ್ನು ಸುಳ್ಳು ಸುದ್ದಿಯ ಪ್ರವರ್ಗಕ್ಕೆ ಸೇರಿಸಿ ಎಫ್​​ಐಆರ್ ಹಾಕುವ ಮತ್ತು ಆ ಮೂಲಕ ವಿರೋಧಿಗಳನ್ನು ಹೆದರಿಸುವ ಚಾಳಿ ಇತ್ತೀಚೆಗೆ ಶುರುವಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸುಳ್ಳು ಸುದ್ದಿಯ ಪೆಡಂಬೂತವನ್ನು ತೋರಿಸುತ್ತಾ ತಮಗೆ ಆಗದ ಜನರನ್ನು ಬಂಧಿಸುವುದನ್ನು ನಾವು ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠದಿಂದ ಬಂದ ಮಾತು ಬಹಳ ಮುಖ್ಯವಾಗಿದೆ. ‘ನೀವು ರಾಜಕೀಯ ಉದ್ದೇಶಕ್ಕೆ ಈ ರೀತಿಯ ಅಸ್ತ್ರವನ್ನು ಬಳಸುತ್ತೀರಿ. ಇದನ್ನು ನಿಲ್ಲಿಸಿ,’ ಎಂದು ಖಡಕ್​ ಆಗಿ ಹೇಳುವ ಮೂಲಕ ಗವಾಯಿ ಅವರು ಕರ್ನಾಟಕ ಸರಕಾರಕ್ಕೆ ಮಂಗಳಾರತಿ ಎತ್ತಿದ್ದಾರೆ.

ಮುಡಾ ಕೇಸಿನಲ್ಲಿ ಪಾರ್ವತಿಯವರ ವಿರುದ್ಧ ಗುರಾಣಿಯನ್ನು ಎತ್ತಲು ನೀಡದಂತೆ ಇಡಿಗೆ ತಿವಿದ ಸರ್ವೋಚ್ಚ ನ್ಯಾಯಾಲಯವು, ಸುಳ್ಳು ಸುದ್ದಿಯ ಹೆಸರಿನಲ್ಲಿ ಕಂಡವರ ಮೇಲೆ ಕೇಸು ಹಾಕುವ ರಾಜ್ಯ ಸರಕಾರದ ಚಪಲಕ್ಕೆ ಕೂಡ ಕಡಿವಾಣ ಹಾಕಿದ್ದಾರೆ. ನಿನ್ನೆಯ ಬೆಳವಣಿಗೆಯ ನಂತರ ರಾಜ್ಯ ಸರಕಾರ ತಾನು ತರಲು ಹೊರಟಿರುವ ವಿಧೇಯಕದ ಕುರಿತು ಮರು ಚಿಂತನೆ ಮಾಡಬಹುದೇ?

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯಗೆ ಬಿಗ್​ ರಿಲೀಫ್​: ಸುಳ್ಳು ಸುದ್ದಿ ಕೇಸ್​ ಅರ್ಜಿ ವಜಾ, ಸರ್ಕಾರಕ್ಕೆ ಮುಖಭಂಗ

ಸಮಾಜದಲ್ಲಿನ ಕೆಲ ಅವಿವೇಕಿಗಳ ಕೆಟ್ಟ ನಡತೆ ಮತ್ತು ಅವರ ಕುಕೃತ್ಯಕ್ಕೆ ಪ್ರತಿ ಬಾರಿಯೂ ಒಂದು ಹೊಸ ಕಾನೂನು ತರುವುದು ಮದ್ದಲ್ಲ. ಇದನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಮೊದಲು ಮನಗಾಣಬೇಕು. ಇದಕ್ಕೆ ಅನೇಕ ದಾರಿಗಳಿವೆ ಎಂಬುದನ್ನು ಕಂಡುಕೊಳ್ಳಬೇಕಾಗಿದ್ದು ಸರಕಾರದ ಕರ್ತವ್ಯ. ಈಗೇನೋ, ಕಾಂಗ್ರೆಸ್ ಸರ್ಕಾರ ಒಂದು ಹೊಸ ಕಾನೂನು ಮಾಡಬಹುದು, ಕೆಲವರನ್ನು ಜೈಲಿಗಟ್ಟಿ ತಾತ್ಕಾಲಿಕವಾಗಿ ಖುಷಿ ಪಡಬಹುದು. ಮುಂದೊಂದು ದಿನ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದು, ಕಾಂಗ್ರೆಸ್ ನಾಯಕರನ್ನುಇದೇ ಕಾನೂನಿನಡಿ ಜೈಲಿಗಟ್ಟಿದರೆ ಆಗ ಈ ನಾಯಕರು ಏನು ಮಾಡುತ್ತಾರೆ? ಇದನ್ನು ಮನದಟ್ಟು ಮಾಡಿಕೊಂಡು ಮಳೆಗಾಲದ ಅಧಿವೇಶನದಲ್ಲಿ ತರುತ್ತಿರುವ ವಿಧೇಯಕವನ್ನು ಹಿಂಪಡೆದರೆ ಒಳಿತು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ