ಸೂಯೆಜ್ ಕಾಲುವೆ ಸಂಕಷ್ಟ: 14 ಟಗ್​ ಬೋಟ್​ಗಳ ಸತತ ಪ್ರಯತ್ನಕ್ಕೆ ಕದಲಿತು ದೈತ್ಯ ಹಡಗು, ಸರಕು ಇಳಿಸಲು ಈಜಿಪ್ಟ್ ಸಿದ್ಧತೆ

Suez Canal Blockage: ಎವರ್​ ಗಿವನ್​ ಹಡಗಿನಲ್ಲಿರುವ ಕಂಟೇನರ್​ಗಳನ್ನು ಕೆಳಗಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಸೂರೆಜ್ ಕಾಲುವೆ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಒಸಮಾ ರಬೀ ಹೇಳಿದ್ದಾರೆ.

ಸೂಯೆಜ್ ಕಾಲುವೆ ಸಂಕಷ್ಟ: 14 ಟಗ್​ ಬೋಟ್​ಗಳ ಸತತ ಪ್ರಯತ್ನಕ್ಕೆ ಕದಲಿತು ದೈತ್ಯ ಹಡಗು, ಸರಕು ಇಳಿಸಲು ಈಜಿಪ್ಟ್ ಸಿದ್ಧತೆ
ಎವರ್​ಗಿವನ್ ಹಡಗು ಕದಲಿಸುವ ಪ್ರಯತ್ನಕ್ಕೆ ತುಸು ಫಲ ಸಿಕ್ಕಿದೆ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ganapathi bhat

Updated on:Mar 28, 2021 | 10:48 PM

ಕೈರೋ: ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ದಡಕ್ಕೆ ಅಪ್ಪಳಿಸಿ ನಿಂತಿರುವ ದೈತ್ಯ ಸರಕು ಸಾಗಣೆ ಹಡಗು ಎವರ್​ ಗಿವನ್ ಅನ್ನು ಮತ್ತೆ ಸಂಚಾರ ಯೋಗ್ಯವಾಗುವಂತೆ ಮಾಡುವ ಸವಾಲಿನ ಕೆಲಸಕ್ಕೆ ಈಜಿಪ್ಟ್ ಸರ್ಕಾರ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಎರಡೂ ದಡಕ್ಕೆ ತಾಗಿಕೊಂಡು ನಿಂತಿರುವ ಎವರ್​ ಗಿವನ್ ಹಡಗನ್ನು ಕದಲಿಸಿ ಅದರ ಮಾರ್ಗದಲ್ಲಿ ಸಾಗುವಂತೆ ಮಾಡಿ, ಇತರ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನ ಭಾನುವಾರವೂ ಮುಂದುವರಿಯಿತು. ಈಜಿಪ್ಟ್​ ಅಧ್ಯಕ್ಷ ಅಬ್ದೆಲ್ ಫಾತಾಹ್ ಅಲ್ ಸಿಸ್ಸಿ ಭಾನುವಾರ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಎವರ್​ ಗಿವನ್​ ಹಡಗಿನಲ್ಲಿರುವ ಕಂಟೇನರ್​ಗಳನ್ನು ಕೆಳಗಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಸೂಯೆಜ್ ಕಾಲುವೆ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಒಸಮಾ ರಬೀ ಹೇಳಿದ್ದಾರೆ.

ಹಡಗಿನ ಅಡಿಯಲ್ಲಿರುವ ಮರಳು ತೆರವುಗೊಳಿಸಲು ಡ್ರೆಡ್ಜರ್​ಗಳು (ಹೂಳೆತ್ತುವ ಯಂತ್ರಗಳು) ಯತ್ನಿಸುತ್ತಿವೆ. ಕಾಲುವೆ ಪ್ರಾಧಿಕಾರದ ಬಳಿಯಿರುವ ಟಗ್​ ಬೋಟ್​ಗಳ (ದೈತ್ಯ ಹಡಗನ್ನು ಎಳೆಯಬಲ್ಲ ದೋಣಿ) ಜೊತೆಗೆ ಹಾಲೆಂಡ್ ಮತ್ತು ಇಟಲಿಯ ಇನ್ನೆರೆಡು ಟಗ್​ ಬೋಟ್​ಗಳು ಭಾನುವಾರ ಸೂಯೆಜ್ ಕಾಲುವೆಗೆ ಬಂದವು. ಎವರ್​ಗಿವನ್​ ಹಡಗನ್ನು ಸಂಚಾರಯೋಗ್ಯ ಸ್ಥಿತಿಗೆ ತರುವ ಪ್ರಯತ್ನಕ್ಕೆ ಹವಾಮಾನದ ಅಡಚಣೆಯೂ ದೊಡ್ಡ ತಲೆನೋವಾಗಿದೆ. ಅಲೆಗಳು ಮತ್ತು ಗಾಳಿ ಮನುಷ್ಯಪ್ರಯತ್ನಕ್ಕೆ ಪೂರಕವಾಗಿಲ್ಲ ಎಂದು ಪ್ರಾಧಿಕಾರ ಟ್ವೀಟ್​ನಲ್ಲಿ ತಿಳಿಸಿದೆ.

ಸರಕುಸಾಗಣೆ ಹಡಗಿನಲ್ಲಿರುವ ಕಂಟೇನರ್​ಗಳನ್ನು ಕೆಳಗಿಳಿಸುವ ಪ್ರಯತ್ನಕ್ಕೂ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಡಗಿನಿಂದ ತುರ್ತಾಗಿ ಕಂಟೇನರ್​ಗಳನ್ನು ಕೆಳಗಿಳಿಸಲು ಬೇಕಾದ ವಿಶೇಷ ಉಪಕರಣಗಳ ಖರೀದಿಗೂ ಈಜಿಪ್ಟ್ ಅಧ್ಯಕ್ಷರು ಒಪ್ಪಿಗೆ ಎನೀಡಿದ್ದಾರೆ. ಕಾಲುವೆಯಲ್ಲಿ ಸಿಲುಕಿರುವ ಎವರ್​ಗಿವನ್​ ಅಲ್ಲಿಂದ ಕದಲುವಂತೆ ಮಾಡುವ ಪ್ರಯತ್ನಕ್ಕೆ ಶನಿವಾರ ರಾತ್ರಿ ತುಸು ಫಲ ಸಿಕ್ಕಿದೆ. ಹಡಗಿನ ಅಡಿಯಲ್ಲಿರುವ ಹೂಳನ್ನು ತೆರವುಗೊಳಿಸಲು ಸತತ ಪ್ರಯತ್ನ ಸಾಗಿದೆ. ಕಾಲುವೆಯಲ್ಲಿ ಹಡಗು ಸಿಲುಕಿಕೊಳ್ಳಲು ವಾತಾವರಣವೇ ಕಾರಣ. ಎಂಜಿನ್ ಅಥವಾ ಮನುಷ್ಯ ತಪ್ಪುಗಳು ಅಲ್ಲ ಎಂದು ಹಡಗಿನ ಸಿಬ್ಬಂದಿ ಮತ್ತು ನಿರ್ವಹಣೆಯ ಹೊತ್ತಿರುವ ಬರ್ನ್​ಹಾರ್ಡ್​ ಶಟಲ್​ ಶಿಪ್​ಮ್ಯಾನೇಜ್​ಮೆಂಟ್​ ಕಂಪನಿಯ ಟೆಕ್ನಿಕಲ್ ಮ್ಯಾನೇಜರ್ ಹೇಳಿದ್ದಾರೆ.

ಇದನ್ನೂ ಓದಿ: ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್; ದಿನಕ್ಕೆ 70 ಸಾವಿರ ಕೋಟಿ ರೂ. ನಷ್ಟ

Ever Given Ship

ಎವರ್ ಗಿವನ್ ಹಡಗು

ಕದಲಿತು ಹಡಗು- ಕಾಲುವೆಯಲ್ಲಿ ಸಂಭ್ರಮಾಚರಣೆ 14 ಟಗ್​ ಬೋಟ್​ಗಳ ಸತತ ಪ್ರಯತ್ನದಿಂದ ಎವರ್​ಗಿವನ್ ಹಡಗು ಶನಿವಾರ ರಾತ್ರಿ ತುಸುವೇ ಕದಲಿದೆ. ಇದು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆಯಲ್ಲಿದ್ದ 14 ಟಗ್​ಬೋಟ್​ಗಳು ಒಂದೇ ಸಮ ಹಾರ್ನ್​ ಮೊಳಗಿಸಿ ಸಂಭ್ರಮಿಸಿವೆ. ಸಂಭ್ರಮಾಚರಣೆಯ ವಿಡಿಯೊ ಇದೀಗ ವೈರಲ್ ಆಗಿದೆ.

ಏನೇನು ಸಿಕ್ಕಿಹಾಕಿಕೊಂಡಿದೆ? ಸೂಯೆಜ್ ಕಾಲುವೆಯಲ್ಲಿ ಈಗ ಸಿಕ್ಕಿಹಾಕಿಕೊಂಡಿರುವುದು ಒಟ್ಟು 1.2 ಕೋಟಿ ಟನ್ ಸರಕು. 1 ಟನ್ ಅಂದರೆ ಸಾವಿರ ಕಿಜಿ. ಅಂಥ ಸಾವಿರ ಕೆಜಿಯನ್ನು 1.2 ಕೋಟಿಯಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ ಅಷ್ಟು ಸರಕು ಸಿಕ್ಕಿಹಾಕಿಕೊಂಡಿದೆ. ಅದರಲ್ಲಿ ಶೇ 34.1ರಷ್ಟು ಕಂಟೇನರ್​ಗಳು, ಶೇ 24.6 ಕಚ್ಚಾ ತೈಲ, ಶೇ 6.4ರಷ್ಟು ಸ್ವಚ್ಛ ಪೆಟ್ರೋಲಿಯಂ ಉತ್ಪನ್ನಗಳು, ಧಾನ್ಯಗಳು ಶೇ 6.1, ಕಲ್ಲಿದ್ದಲು ಶೇ 6, ಎಲ್​ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಶೇ 3.1, ಎಲ್​ಎನ್​ಜಿ (ಲಿಕ್ವಿಡ್ ನ್ಯಾಚುರಲ್ ಗ್ಯಾಸ್) ಶೇ 2.9, ಕಬ್ಬಿಣ ಶೇ 6.7, ಗೊಬ್ಬರ ಶೇ 5.2, ಇತರ ಶೇ 2.7 ಮತ್ತು ವಾಹನಗಳು ಶೇ 2.2ರಷ್ಟಿದೆ.

ತಜ್ಞರ ನೆರವು ಪಡೆದುಕೊಂದು ಎವರ್ ಗಿವನ್ ಸುತ್ತ ಇರುವ ಮರಳು ಹಾಗೂ ಮಣ್ಣು ತೆಗೆಯಲಾಗುತ್ತಿದೆ. ಇತ್ತ ಈ ಘಟನೆ ನಡೆದ ನಂತರದಿಂದ ಸೂಯೆಜ್ ಬಳಿ 200ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ. ಇನ್ನು ಐದು ದಿನದೊಳಗೆ ಮತ್ತೆ 137 ಸೇರ್ಪಡೆ ಆಗಲಿವೆ ಎನ್ನಲಾಗುತ್ತಿದೆ. ಈಗಾಗಲೇ ಶಿಪ್ಪಿಂಗ್ ಕಂಪೆನಿಗಳು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಾಟ ಆರಂಭಿಸಿವೆ. ಆದರೂ ಈ ಮಾರ್ಗವು ಏಷ್ಯಾ ಹಾಗೂ ಯುರೋಪ್ ಮಧ್ಯದ ಪ್ರಯಾಣಕ್ಕೆ ಸರಾಸರಿಯಾಗಿ ಕನಿಷ್ಠ 7 ದಿನಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: Suez Canal Blockage: ಎವರ್ ಗಿವನ್ ಕಂಟೇನರ್ ಹಡಗು ಬಿಡಿಸಲು ಅಮೆರಿಕ ನೆರವು; ವಿಶ್ವ ವಾಣಿಜ್ಯ ಚಟುವಟಿಕೆ ಅಯೋಮಯ

Published On - 10:29 pm, Sun, 28 March 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ