World Coronavirus Update: ಬ್ರೆಜಿಲ್​ನಲ್ಲಿ ಹೆಚ್ಚಿದ ಕೊವಿಡ್ ಸೋಂಕು; ಮೂರು ಲಕ್ಷಕ್ಕೆ ತಲುಪಿದ ಮೃತರ ಸಂಖ್ಯೆ

ಕೊರೊನಾ ವೈರಾಣು ದಾಂಗುಡಿಯಿಟ್ಟು ಒಂದು ವರ್ಷವೇ ಕಳೆದಿದ್ದು, ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಮತ್ತೊಮ್ಮೆ ಅಂಕಿಸಂಖ್ಯೆಗಳ ಎಲ್ಲೆ ಮೀರುತ್ತ ಜಿಗಿಯುತ್ತಿದೆ.

World Coronavirus Update: ಬ್ರೆಜಿಲ್​ನಲ್ಲಿ ಹೆಚ್ಚಿದ ಕೊವಿಡ್ ಸೋಂಕು; ಮೂರು ಲಕ್ಷಕ್ಕೆ ತಲುಪಿದ ಮೃತರ ಸಂಖ್ಯೆ
ಕೊರೊನಾ ಟೆಸ್ಟ್​
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 28, 2021 | 6:12 PM

ಬ್ರೆಜಿಲ್​ನಲ್ಲಿ ಕೊವಿಡ್-19 ಉಪಟಳ ಹೆಚ್ಚಳವಾಗಿದೆ. ಬ್ರೆಜಿಲ್​ನಲ್ಲಿ ಪ್ರತಿ ಗಂಟೆಗೆ 125 ಕೊವಿಡ್-19 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈಗಾಗಲೇ ಕೊರೊನಾ ವೈರಾಣುವಿನಿಂದ ಬ್ರೆಜಿಲ್ ಒಂದರಲ್ಲೇ ಮೂರು ಲಕ್ಷ ಜನ ಮೃತಪಟ್ಟಿದ್ದು, ದೇಶದ 16 ರಾಜ್ಯಗಳಲ್ಲಿ ಬೆಡ್​ಗಳ ಕೊರತೆ ಉಂಟಾಗಿದೆ. ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುವ ದೇಶ ಬ್ರೆಜಿಲ್. 1,24,90,362 ಕೊರೊನಾ ಸೋಂಕಿತರು ಈವರೆಗೆ ಪತ್ತೆಯಾಗಿದ್ದು, ಇವರಲ್ಲಿ 13,00,041 ಕೊರೊನಾ ಸೋಂಕು ಪ್ರಕರಣಗಳು ಸಕ್ರಿಯವಾಗಿವೆ. ಅಮೆರಿಕಕ್ಕೆ ಹೋಲಿಸಿದರೆ ಬ್ರೆಜಿಲ್​ನಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಅಧಿಕವಾಗಿದ್ದು, ಈವರೆಗೆ ಒಟ್ಟು 3,10,694 ಸೋಂಕಿತರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಒಂದು ವರ್ಷದ ನಂತರವೂ ಬ್ರೆಜಿಲ್​ನ ಆರೋಗ್ಯ ವ್ಯವಸ್ಥೆ ಇಷ್ಟೊಂದು ವೈಫಲ್ಯ ಅನುಭವಿಸಲಿದೆ ಎಂಬ ಊಹೆ ಇರಲಿಲ್ಲ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಯೋರ್ವರು ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟು ಕೊರೊನಾ ವೈರಸ್​ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 3,09,17,142 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಸದ್ಯ 70,06,619 ಸಕ್ರಿಯ ಪ್ರಕರಣಗಳಿವೆ. ಅಮೆರಿಕ ಒಂದರಲ್ಲೇ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 5,62013.

ಭಾರತದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿಲ್ಲ. ವಿಶ್ವದ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಕಳವಳ ಹುಟ್ಟಿಸುತ್ತಿದೆ. 1,19,71,624 ಕೊರೊನಾ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದು, ಸದ್ಯ 4,86,276 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 62,714 ಹೊಸ ಪ್ರಕರಣಗಳು ದಾಖಲಾಗಿದ್ದು, 28,739 ಸೋಂಕಿತರು ಗುಣಮುಖರಾಗಿದ್ದಾರೆ.ಇನ್ನೊಂದು ಕಳವಳದ ಸಂಗತಿ ಎಂದರೆ ಕಳೆದ 24 ಗಂಟೆಗಳಲ್ಲಿ 312 ಸೋಂಕಿತರು ಮೃತಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ 1,61,586 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಏಷ್ಯಾ ಖಂಡದಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಕೊರೊನಾ ಲಸಿಕೆ ವಿತರಣೆ ಕಾರ್ಯ ಭರದಿಂದ ನಡೆಯುತ್ತಿದ್ದು, ಈವರೆಗೆ 6,02,69,782 ಜನರಿಗೆ ಲಸಿಕೆ ವಿತರಿಸಲಾಗಿದೆ.

ಕರ್ನಾಟಕದಲ್ಲೂ ಆತಂಕ ಕರ್ನಾಟಕದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಅತ್ಯಂತ ಗಂಭೀರ ವಿಷಯವೆಂದರೆ 2021ರ ಮಾರ್ಚ್ 1ರಿಂದ 26ರವರೆಗೆ ಬೆಂಗಳೂರು ಒಂದೇ ನಗರದಲ್ಲಿ 472 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದ್ದು, ಬೆಂಗಳೂರಿನ 224 ಗಂಡುಮಕ್ಕಳು ಮತ್ತು 228 ಹೆಣ್ಣುಮಕ್ಕಳಿಗೆ ಈ ಅವಧಿಯಲ್ಲಿ ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

ಕೊರೊನಾ ವೈರಾಣು ದಾಂಗುಡಿಯಿಟ್ಟು ಒಂದು ವರ್ಷವೇ ಕಳೆದಿದ್ದು, ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಮತ್ತೊಮ್ಮೆ ಅಂಕಿಸಂಖ್ಯೆಗಳ ಎಲ್ಲೆ ಮೀರುತ್ತ ಜಿಗಿಯುತ್ತಿದೆ.

ಇದನ್ನೂ ಓದಿ: ಹೋಳಿ ಸಂಭ್ರಮಕ್ಕೆ ಕೊರೊನಾ ಅಡ್ಡಿ.. ಮನೆ ಮನೆಗಳಿಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶನ

ಇದನ್ನೂ ಓದಿ: Coronavirus Case in India: ದೇಶದಲ್ಲಿ ಕೊವಿಡ್​ನಿಂದ ಒಂದೇ ದಿನ 312 ಸಾವು, 62,714 ಹೊಸ ಪ್ರಕರಣ ಪತ್ತೆ