ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್; ದಿನಕ್ಕೆ 70 ಸಾವಿರ ಕೋಟಿ ರೂ. ನಷ್ಟ

Suez Canal Block By Ever Given Cargo Ship: ಎವರ್ ಗಿವನ್ ಎಂಬ ಹೆಸರಿನ 1312 ಅಡಿ ಉದ್ದದ ಬೃಹತ್ ಹಡಗು ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ಅಡ್ಡಡ್ಡ ನಿಂತ ಪರಿಣಾಮ ಒಂದು ದಿನಕ್ಕೆ 69 ಸಾವಿರ ಕೋಟಿ ರೂಪಾಯಿ ನಷ್ಟ ಆಗುತ್ತಿದೆ.

ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್; ದಿನಕ್ಕೆ 70 ಸಾವಿರ ಕೋಟಿ ರೂ. ನಷ್ಟ
ಎವರ್ ಗಿವನ್ ಹಡಗು
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 29, 2021 | 10:21 PM

ಸರಕುಗಳನ್ನು ಸಾಗಣೆ ಮಾಡುವ ಆ ಹಡಗಿನ ಹೆಸರು ಎವರ್ ಗಿವನ್. ಇನ್ನು ಇದು 1312 ಅಡಿ ಉದ್ದದ್ದು. ಕಳೆದ ಮಂಗಳವಾರದಂದು (ಮಾರ್ಚ್ 23, 2021) ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ದಿಢೀರನೆ ಟ್ರಾಫಿಕ್ ಜಾಮ್ ಆಗುವುದಕ್ಕೆ ಕಾರಣ ಆದ ಹಡಗು ಇದೇ. ಪ್ರಬಲವಾಗಿ ಬೀಸಿದ ಗಾಳಿಗೆ ಅಷ್ಟುದ್ದ ಹಾಗೂ ಗಾತ್ರದ ಹಡಗು ಅಡ್ಡಡ್ಡ ತಿರುಗಿ ನಿಂತುಬಿಟ್ಟಿತು. ಕೊನೆಗೆ ಬೇರೆ ದಾರಿ ಇಲ್ಲದೆ ಈಜಿಪ್ಟ್​ನಿಂದ ಕಾಲುವೆಯ ಹಳೆ ಚಾನೆಲ್ ತೆರೆದು, ಸ್ವಲ್ಪ ಮಟ್ಟಿಗೆ ದಟ್ಟಣೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಯಿತು. ಆದರೆ ಅಷ್ಟರಲ್ಲಿ ವಿಶ್ವದ ಅತ್ಯಂತ ಸಂದಣಿಯ ಜಲಮಾರ್ಗ ಸ್ತಬ್ಧವಾಗಿದ್ದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಮೇಲೇರಿತು.

ನಿಮಗೆ ಗೊತ್ತಿರಲಿ, ಜಾಗತಿಕ ವಾಣಿಜ್ಯ ವಹಿವಾಟಿನ ಶೇ 12ರಷ್ಟು ನಡೆಯುವುದು ಇದೇ ಸೂಯೆಜ್ ಕಾಲುವೆ ಮೂಲಕ. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಿ, ಏಷ್ಯಾ ಹಾಗೂ ಯುರೋಪ್ ಮಧ್ಯೆ ಅತ್ಯಂತ ಸಮೀಪದ ಸಮುದ್ರ ಮಾರ್ಗದ ನಂಟನ್ನು ಬೆಸೆಯುತ್ತದೆ. ಮೊನ್ನೆ ಸಂಚಾರ ದಟ್ಟಣೆಗೆ ಕಾರಣವಾದ ಹಡಗಿನ ಹೆಸರು ಎವರ್ ಗಿವನ್. ಇದು “ಎವರ್​ಗ್ರೀನ್” ಕಂಪೆನಿಗೆ ಸೇರಿದ್ದು. ಪನಾಮದಲ್ಲಿ ನೋಂದಣಿಯಾಗಿದೆ. ಚೀನಾದಿಂದ ಹೊರಟು ನೆದರ್ಲೆಂಡ್ಸ್​ನ ಬಂದರು ನಗರಿ ರೊಟರ್​ಡ್ಯಾಮ್ ತಲುಪಿತ್ತು. ಉತ್ತರಕ್ಕೆ ಚಲಿಸುತ್ತಾ ಸೂಯೆಜ್ ಕಾಲುವೆ ಮೂಲಕ ಮೆಡಿಟರೇನಿಯನ್ ಕಡೆಗೆ ಪಯಣಿಸಿತ್ತು.

400 ಮೀಟರ್ ಉದ್ದದ ಹಡಗು 2,00,000 ಟನ್​ನ ಈ ಹಡಗು 2018ರಲ್ಲಿ ನಿರ್ಮಾಣ ಆಗಿದೆ. ತೈವಾನೀಸ್ ಟ್ರಾನ್ಸ್​ಪೋರ್ಟ್ ಕಂಪೆನಿಯಿಂದ ಎವರ್​ಗಿವನ್ ಹಡಗಿನ ನಿರ್ವಹಣೆ ಆಗುತ್ತಿದೆ. ಮಂಗಳವಾರದಂದು ಸ್ಥಳೀಯ ಕಾಲಮಾನ ಬೆಳಗ್ಗೆ 7.40ರ ಹೊತ್ತಿಗೆ ಹಡಗು ಅಡ್ಡಡ್ಡ ತಿರುಗಿ ನಿಂತುಬಿಟ್ಟಿತು. ಈ ಹಡಗು ಅದೆಷ್ಟು ಅಗಾಧ ಅಂದರೆ, 400 ಮೀಟರ್ ಉದ್ದ (1312 ಅಡಿ) ಹಾಗೂ 59 ಮೀಟರ್ (193 ಅಡಿ) ಅಗಲ ಇದೆ. ಅಲ್ಲಿಗೆ ಎರಡೂ ಬದಿಯಲ್ಲಿ ಬರುತ್ತಿದ್ದ ಇತರ ಹಡಗುಗಳಿಗೆ ಸಾಗುವುದಕ್ಕೆ ಜಾಗವೇ ಇಲ್ಲದಂತೆ ಆಯಿತು. ಪ್ರಮುಖ ಸುದ್ದಿ ಸಂಸ್ಥೆ ರಾಯಿಟರ್ಸ್ ಸ್ಥಳೀಯ ಮೂಲಗಳನ್ನು ಆಧರಿಸಿ ಹೇಳುವಂತೆ, ಎವರ್​ಗ್ರೀನ್ ಉತ್ತರಕ್ಕೆ 30 ಹಡಗು ಇದ್ದರೆ, ದಕ್ಷಿಣಕ್ಕೆ ಮೂರು ಹಡಗು ಇದೆಯಂತೆ. ಸದ್ಯಕ್ಕೆ ಎವರ್​ಗಿವನ್ ಹಡಗಿನಲ್ಲಿ ಇರುವ ಎಲ್ಲ ಸಿಬ್ಬಂದಿಯೂ ಕ್ಷೇಮವಾಗಿದ್ದಾರೆ, ಯಾವುದೇ ಗಾಯಗಳಾಗಿಲ್ಲ.

ವಿಶ್ಲೇಷಕರು ಹೇಳುವ ಪ್ರಕಾರ, ಇಂಥ ಘಟನೆ ಬಹಳ ಅಪರೂಪ. ಆದರೆ ಇಂಥದ್ದರಿಂದ ಜಾಗತಿಕ ವ್ಯವಹಾರಗಳ ಮೇಲೆ ಭಾರೀ ಪರಿಣಾಮ ಆಗುತ್ತದೆ. ಕಚ್ಚಾ ತೈಲಗಳನ್ನು ಹೊತ್ತುತರುತ್ತಿದ್ದ ಹಡಗು ಕೂಡ ಈ ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿಕೊಂಡಿದೆ. ಈ ತನಕ ಸೂಯೆಜ್ ಕಾಲುವೆಯಲ್ಲಿ ಸಂಚರಿಸಿದ ಅತಿ ದೊಡ್ಡ ಹಡಗು ಇದೇ. ಒಂದು ವೇಳೆ ಈ ಹಡಗನ್ನು ಸರಾಗವಾಗಿ ಚಲಿಸುವಂತೆ ಮಾಡಲು ಸಾಧ್ಯವಾಗದಿದಲ್ಲಿ ಅದರೊಳಗಿರುವ ಸರಕನ್ನು ತೆಗೆದು ಸಾಗಿಸುವುದಕ್ಕೆ ಆರಂಭಿಸಬೇಕಾಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಸಾಮಾನ್ಯವಾಗಿ ಒಂದು ದಿನಕ್ಕೆ ಸೂಯೆಜ್ ಕಾಲುವೆಯಲ್ಲಿ 50 ಹಡಗುಗಳು ಸಂಚರಿಸುತ್ತವೆ.

Ever Given Ship Suez Canal Satellite Photo

ಎವರ್ ಗಿವನ್ ಹಡಗಿನ ಉಪಗ್ರಹ ಚಿತ್ರ

120 ಮೈಲುದ್ದದ ಕೃತಕ ಜಲ ಮಾರ್ಗ ಈ ಸೂಯೆಜ್ ಕಾಲುವೆ 120 ಮೈಲುದ್ದದ ಕೃತಕ ಜಲ ಮಾರ್ಗ. 1869ರಲ್ಲಿ ಇದು ಆರಂಭವಾದ ದಿನದಿಂದ ಭೌಗೋಳಿಕ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಈಗ ಈ ಕಾಲುವೆ ಅತ್ಯಂತ ಮುಖ್ಯವಾದ ಅಂತರರಾಷ್ಟ್ರೀಯ ಹಡಗುಗಳ ಜಲ ಸಾರಿಗೆ ಮಾರ್ಗವಾಗಿದೆ. ಈ ಸೂಯೆಜ್ ಕಾಲುವೆ ಇರುವುದು ಈಜಿಪ್ಟ್​ನಲ್ಲಿ. ಯುರೋಪ್​ನಿಂದ ಏಷ್ಯಾಕ್ಕೆ ನೇರವಾದ ಸಂಪರ್ಕವನ್ನು ಇದು ಕಲ್ಪಿಸುತ್ತದೆ. ಅಂದಹಾಗೆ ಈ ಸೂಯೆಜ್ ಕಾಲುವೆಯು ಮೂಲತಃ ಫ್ರೆಂಚ್ ಹೂಡಿಕೆದಾರರ ಮಾಲೀಕತ್ವಕ್ಕೆ ಒಳಪಟ್ಟಿತ್ತು. ಆ ನಂತರ ಒಟೋಮನ್ ಸಾಮ್ರಾಜ್ಯದ ಅವಧಿಯಲ್ಲಿ 19ನೇ ಶತಮಾನದ ಮಧ್ಯಭಾಗದಲ್ಲಿ ಈಜಿಪ್ಟ್ ಹತೋಟಿಗೆ ಬಂತು. 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಯಿತು. ಹತ್ತು ವರ್ಷದಲ್ಲಿ ನಿರ್ಮಾಣವಾದ ಈ ಕಾಲುವೆಗಾಗಿ 15 ಲಕ್ಷ ಕಾರ್ಮಿಕರು ಕಾರ್ಯ ನಿರ್ವಹಿಸಿದ್ದಾರೆ. ಬ್ರಿಟನ್ ವಸಾಹತು ಮತ್ತು ಫ್ರಾನ್ಸ್ ಜತೆಗೆ ರಾಜಕೀಯ ತಿಕ್ಕಾಟದಿಂದಾಗಿ ಕಾಲುವೆ ನಿರ್ಮಾಣದಲ್ಲಿ ತಡವಾಗುತ್ತಾ ಸಾಗಿ, ಮೊದಲಿಗೆ ಇರಿಸಿಕೊಂಡಿದ್ದ 5 ಕೋಟಿ ಅಮೆರಿಕನ್ ಡಾಲರ್ ಅಂದಾಜು ವೆಚ್ಚವು ದುಪಟ್ಟಾಯಿತು.

ಮೊದಲ ಎರಡು ಪ್ರಪಂಚ ಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಈ ಕಾಲುವೆಯ ಹತೋಟಿ ಹೊಂದಿದ್ದರು. ಆದರೆ ನಂತರದಲ್ಲಿ ಈಜಿಪ್ಟ್​ನೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, 1956ರಲ್ಲಿ ಸೈನ್ಯವನ್ನು ವಾಪಸ್ ಕರೆಸಿಕೊಂಡಿತು. ಇದಾದ ಮೇಲೆ ಈಜಿಪ್ಟ್ ಅಧ್ಯಕ್ಷರು ಕಾಲುವೆಯ ರಾಷ್ಟ್ರೀಕರಣ ಮಾಡಿದರು. ಅವರು ತೆಗೆದುಕೊಂಡ ಇತರ ಕ್ರಮಗಳು ಇಸ್ರೇಲ್ ಹಾಗೂ ಪಶ್ಚಿಮದ ಇತರ ದೇಶಗಳಿಂದ ಅಪಾಯ ತಂದೊಡ್ಡುವಂತಿದ್ದವು. ಇಸ್ರೇಲಿ, ಬ್ರಿಟಿಷ್ ಮತ್ತು ಫ್ರೆಂಚ್ ಸೈನ್ಯಗಳ ಹಸ್ತಕ್ಷೇಪಕ್ಕೆ ಕಾರಣ ಆಯಿತು. ಕೊನೆಗೆ ಅಮೆರಿಕದ ಮಧ್ಯಪ್ರವೇಶದಿಂದ ಮೇಲುನೋಟಕ್ಕೆ ಸಮಸ್ಯೆ ನಿವಾರಣೆ ಆದಂತಾಯಿತು.

10 ವರ್ಷಗಳ ಕಾಲ ಮುಚ್ಚಲಾಗಿತ್ತು ಈ ಹಿಂದೆ 1967ರಲ್ಲಿ ಅರಬ್- ಇಸ್ರೇಲಿ ಯುದ್ಧ ನಡೆದಾಗ ಹತ್ತು ವರ್ಷಗಳ ಕಾಲ ಈಜಿಪ್ಟ್​ನಿಂದ ಸೂಯೆಜ್ ಕಾಲುವೆ ಮುಚ್ಚಲಾಗಿತ್ತು. 14 ಸರಕು ಸಾಗಣೆ ಹಡಗುಗಳು (ಅವುಗಳನ್ನು ಯೆಲ್ಲೋ ಫ್ಲೀಟ್ ಎನ್ನಲಾಯಿತು) 1975ರಲ್ಲಿ ಮತ್ತೆ ಸೂಯೆಜ್ ಕಾಲುವೆ ತೆರೆಯುವ ತನಕ ಹಾಗೇ ಸಿಕ್ಕಿಬಿದ್ದಿದ್ದವು. ಕೆಲವು ಹಡಗುಗಳ ಅಪಘಾತದ ಕಾರಣಕ್ಕೆ ಹಲವು ಸಲ ಸೂಯೆಜ್ ಕಾಲುವೆ ಮುಚ್ಚಲಾಗಿದೆ. 2004ನೇ ಇಸವಿಯಲ್ಲಿ ರಷ್ಯನ್ ತೈಲ ಟ್ಯಾಂಕರ್​ನಿಂದಾಗಿ ಮೂರು ದಿನಗಳ ಕಾಲ ಸೂಯೆಜ್ ಕಾಲುವೆ ಮುಚ್ಚಿದ್ದು ಈಗಿನವರೆಗೆ ದಾಖಲೆ ಎಂಬಂತಿತ್ತು.

ಆದರೆ, ಈಗ ಎವರ್​ಗ್ರಿನ್​ಗೆ ಸೇರಿದ ಎವರ್ ಗಿವನ್ ಸಿಕ್ಕಿಹಾಕಿಕೊಂಡಿದೆಯಲ್ಲಾ ಇದು ವಿಶ್ವದ ಅತಿ ದೊಡ್ಡ ಸರಕು ಸಾಗಣೆ ಹಡಗುಗಳಲ್ಲಿ ಒಂದು. ಎಂಪೈರ್​ಸ್ಟೇಟ್ ಕಟ್ಟಡದಷ್ಟು ದೊಡ್ಡದಾಗಿದೆ. ಅಂದಹಾಗೆ ಸೂಯೆಜ್ ಕಾಲುವೆ ನಿರ್ಮಾಣ ಆಗಿದ್ದು ಸಣ್ಣ ಹಡಗುಗಳು ಸಂಚರಿಸಲು ಅನುಕೂಲ ಆಗುವ ಉದ್ದೇಶಕ್ಕೆ. ಈ ಕಾಲುವೆಯನ್ನು ಹಲವು ಸಲ ವಿಸ್ತರಣೆ ಹಾಗೂ ಆಳ ಮಾಡಲಾಗಿದೆ. ಈಚೆಗಷ್ಟೇ 800 ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಲಾಗಿದೆ.

ದಿನಕ್ಕೆ 70,000 ಕೋಟಿ ರೂಪಾಯಿ ನಷ್ಟ ಇನ್ನು ಈಗ ಇಷ್ಟು ದೊಡ್ಡ ಹಡಗು ಹೀಗೆ ಸಿಕ್ಕಿಹಾಕಿಕೊಳ್ಳುವುದಕ್ಕೆ ಏನು ಕಾರಣ ಅಂತ ನೋಡುವುದಾದರೆ, ಅಸ್ಪಷ್ಟ ಚಿತ್ರಣ ಹಾಗೂ ಎತ್ತರದ ಮಾರುತಗಳಿಂದ ಈಗಿನ ಘಟನೆ ಸಂಭವಿಸಿದೆ. ತಾಂತ್ರಿಕವಾಗಿ ಏನು ಪ್ರಯತ್ನಗಳನ್ನು ಮಾಡಬೇಕೋ ಆ ಮೂಲಕ ಈ ಹಡಗಿನ ಸಮಸ್ಯೆ ಪರಿಹರಿಸಲು ಯತ್ನಿಸಲಾಗುತ್ತದೆ. ಆದರೆ ತಜ್ಞರು ಹೇಳುವಂತೆ, ಬಹಳ ಸಮಸ್ಯೆಗಳಿಗೆ ಪ್ರಕೃತಿಯೇ ಪರಿಹಾರ ಆಗಬೇಕು. ಈ ಋತುವಿನಲ್ಲಿ ಬೀಸುವ ಪ್ರಬಲ ಮಾರುತಗಳ ಸಹಾಯದಿಂದ ಹಡಗು ಮತ್ತೆ ಸರಿಯಾದ ದಿಕ್ಕಿನೆಡೆಗೆ ತೇಲುವಂತೆ ಆಗಬಹುದು ಎಂಬ ನಿರೀಕ್ಷೆ ಇದೆ.

ಇತ್ತ ಎವರ್ ಗಿವನ್ ಮಾಲೀಕರ ತಲೆ ಮೇಲೆ ಲಕ್ಷಾಂತರ ಅಮೆರಿಕನ್ ಡಾಲರ್ ಮೌಲ್ಯದ ಇನ್ಷೂರೆನ್ಸ್ ಕ್ಲೇಮ್​ಗಳು ಹಾಗೂ ತುರ್ತು ರಕ್ಷಣಾ ಕಾರ್ಯಗಳ ಖರ್ಚು ಸಹ ಇವೆ. ಇನ್ನು 2020ನೇ ಇಸವಿಯಲ್ಲಿ ಈಜಿಪ್ಟ್ ಸರ್ಕಾರಕ್ಕೆ ಸೂಯೆಜ್ ಕಾಲುವೆಯಿಂದ ಬಂದಿರುವ ಆದಾಯ 561 ಕೋಟಿ ಅಮೆರಿಕನ್ ಡಾಲರ್. ಈಗ ಎವರ್ ಗಿವನ್ ಹಡಗು ಮತ್ತೆ ಸರಿಯಾಗಿ ಸಾಗಿಹೋಗಿ, ಜಲಮಾರ್ಗ ಪುನರಾರಂಭ ಮಾಡುವುದು ಆ ದೇಶಕ್ಕೂ ಬಹಳ ಮುಖ್ಯ ವಿಚಾರ ಆಗಿದೆ. ಇನ್ನೂ ಒಂದು ಸಂಗತಿ ಏನೆಂದರೆ, ಸೂಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹೀಗೆ ಒಂದು ದಿನ ಅಡ್ಡಡ್ಡ ನಿಲ್ಲುವುದರಿಂದ ಆಗುವ ಹಾನಿ 960 ಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ 69,120 ಕೋಟಿಗೂ ಹೆಚ್ಚಾಗುತ್ತದೆ.

(ಮಾಹಿತಿ ಕೃಪೆ: ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ಫೈನಾನ್ಷಿಯಲ್ ಎಕ್ಸ್​ಪ್ರೆಸ್)

ಇದನ್ನೂ ಓದಿ:ಜಗತ್ತಿನ ಒಂಟಿ ಮನೆಯ ರಹಸ್ಯ ಇದು..! ಯಾರಿರಬಹುದು ಈ ನಿರ್ಜನ ದ್ವೀಪದ ಪುಟ್ಟ ಮನೆಯಲ್ಲಿ?

Published On - 3:59 pm, Fri, 26 March 21

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘