ಜಗತ್ತಿನ ಒಂಟಿ ಮನೆಯ ರಹಸ್ಯ ಇದು..! ಯಾರಿರಬಹುದು ಈ ನಿರ್ಜನ ದ್ವೀಪದ ಪುಟ್ಟ ಮನೆಯಲ್ಲಿ?

ಇದು ಐಸ್​ಲ್ಯಾಂಡ್ ದೇಶದ ಸೊಬಗು.. ದಕ್ಷಿಣ ಐಸ್​ಲ್ಯಾಂಡ್​ನ ಎಲಿಡೆ ಎಂಬ ದ್ವೀಪ.. 15-18 ದ್ವೀಪಗಳ ಸಮೂಹವಾದ ವೆಸ್ಟ್ಮನ್ನೈಜರ್​​ನ ಒಂದು ಭಾಗ. ಇಂದು ಈ ದ್ವೀಪ ನಿರ್ಜನವಾಗಿದ್ದರೂ.. 300ವರ್ಷಗಳ ಹಿಂದೆ ಜನವಸತಿ ಇತ್ತು.

ಜಗತ್ತಿನ ಒಂಟಿ ಮನೆಯ ರಹಸ್ಯ ಇದು..! ಯಾರಿರಬಹುದು ಈ ನಿರ್ಜನ ದ್ವೀಪದ ಪುಟ್ಟ ಮನೆಯಲ್ಲಿ?
ನಿರ್ಜನ ದ್ವೀಪದಲ್ಲೊಂದು ಪುಟ್ಟ ಮನೆ
Follow us
Lakshmi Hegde
|

Updated on:Dec 20, 2020 | 6:32 PM

ವಿಶಾಲವಾದ ಸಾಗರದ ಮಧ್ಯೆ ಇರುವ ಒಂದು ಹಸಿರು ನಿರ್ಜನ ದ್ವೀಪದಲ್ಲಿ ಒಂದೇ ಒಂದು ಬಿಳಿ ಬಣ್ಣದ ಮನೆ ಇರುವ ಫೋಟೋ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ..h0rdur ಎಂಬ ಇನ್ಸ್ಟಾಗ್ರಾಂ ಬಳಕೆದಾರರು  ಮೊದಲು ಈ ಫೋಟೋ ಪೋಸ್ಟ್ ಮಾಡಿಕೊಂಡ ಬೆನ್ನಲ್ಲೇ ಅನೇಕರು ಇದನ್ನು ಶೇರ್​ ಮಾಡಿದ್ದಾರೆ.. ಈ ಪ್ರದೇಶ ಯಾವುದು? ಅಷ್ಟು ನಿರ್ಜನ ಪ್ರದೇಶದಲ್ಲಿ ಮನೆ ಕಟ್ಟಿಕೊಂಡವರು ಯಾರು? ಎಂಬಿತ್ಯಾದಿ ಕುತೂಹಲವನ್ನು ನೆಟ್ಟಿಗರು ಹೊರಹಾಕಿದ್ದಾರೆ..

ಇದು ಜಗತ್ತಿನ ಒಂಟಿ ಮನೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ.. ಇಲ್ಲಿ ಉಳಿಯಲು ಭಯವಾಗುತ್ತದಪ್ಪಾ ಎಂದು ಮತ್ತೊಂದಷ್ಟು ಮಂದಿ ಉದ್ಗಾರ ತೆಗೆದಿದ್ದಾರೆ.. ಇನ್ನೂ ಕೆಲವು ಮಂದಿ, ಇದು ಕನಸಿನ ಮನೆ ಎಂದಿದ್ದಾರೆ.. ಈ ಫೋಟೋ ನೋಡಿದರೆ ಎಂಥವರಿಗಾದರೂ ಕುತೂಹಲ ಉಂಟಾಗುವುದು ಸಹಜವೇ ಬಿಡಿ !

ಇದು ಐಸ್​ಲ್ಯಾಂಡ್ ದೇಶದ ಸೊಬಗು.. ದಕ್ಷಿಣ ಐಸ್​ಲ್ಯಾಂಡ್​ನ ಎಲಿಡೆ ಎಂಬ ದ್ವೀಪ.. 15-18 ದ್ವೀಪಗಳ ಸಮೂಹವಾದ ವೆಸ್ಟ್ಮನ್ನೈಜರ್​​ನ ಒಂದು ಭಾಗ. ಇಂದು ಈ ದ್ವೀಪ ನಿರ್ಜನವಾಗಿದ್ದರೂ.. 300ವರ್ಷಗಳ ಹಿಂದೆ ಜನವಸತಿ ಇತ್ತು. ಸುಮಾರು 5 ಕುಟುಂಬಗಳು ವಾಸವಾಗಿದ್ದವು. ಆದರೆ ಕುಟುಂಬಗಳು 1930ರಲ್ಲಿ ಇಲ್ಲಿಂದೆ ತೆರಳಿವೆ ಎಂದು ಹೇಳಲಾಗುತ್ತಿದೆ.

ಆದರೆ ಇಲ್ಲಿ ಕಾಣುತ್ತಿರುವುದು ಒಂದೇ ಒಂದು ಬಿಳಿಯ ಮನೆ. ಅಷ್ಟಕ್ಕೂ 1930ರಲ್ಲಿಯೇ ಜನರು ಅಲ್ಲಿಂದ ಹೋಗಿದ್ದಾರೆ ಎಂದರೆ, ಅವರ ಮನೆಯೂ ಅಷ್ಟು ಗಟ್ಟಿಮುಟ್ಟಾಗಿ ನಿಂತಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಎದ್ದಿದೆ.

ಹಾಗೇ, ಈ ಮನೆಯನ್ನು ಒಬ್ಬ ವಿಲಕ್ಷಣ ಕೋಟ್ಯಧಿಪತಿ, ಜಗತ್ತಿಗೆ ಪ್ರೇತಗಳು ದಾಳಿ ಮಾಡಿ, ನಾಗರಿಕ ಸಮಾಜಕ್ಕೆ ಅಪಾಯ ಉಂಟಾದಾಗ  (Zombie apocalypse -ಇದೊಂದು ಕಾಲ್ಪನಿಕ) ಬೇಕಾಗಬಹುದು ಎಂಬ ಕಾರಣಕ್ಕೆ ಇಲ್ಲಿ ಮನೆ ನಿರ್ಮಾಣ ಮಾಡಿದ್ದ ಎಂಬ ರೂಮರ್ ಕೂಡ ಎದ್ದಿದೆ. ಅಷ್ಟೇ ಅಲ್ಲ, ಈ ಮನೆ ಐಸ್​ಲ್ಯಾಂಡ್​ನ ಪ್ರಸಿದ್ಧ ಗಾಯಕ ಬಿಜಾರ್ಕ್​ ಅಥವಾ ಯಾವುದೋ ಸನ್ಯಾಸಿಗೆ ಸೇರಿದ್ದಿರಬಹುದು.. ಫೋಟೋ ಶಾಪ್​ ಮಾಡಿದ್ದಾಗಿರಬಹುದು ಎಂಬಿತ್ಯಾದಿ ಮಾತುಗಳೂ ಕೇಳಿಬಂದಿವೆ.

ಇಷ್ಟೇ ನೋಡಿ ರಹಸ್ಯ.. ಆದರೆ ಈ ಯಾವ ಅಭಿಪ್ರಾಯ.. ರೂಮರ್​ಗಳನ್ನೂ ನೀವು ನಂಬಬೇಕಿಲ್ಲ. ವಾಸ್ತವದಲ್ಲಿ ಈ ಎಲಿಡೆ ದ್ವೀಪದಲ್ಲಿ ಮನೆಯೊಂದು ಇರುವುದು ನಿಜ. ಇದು ಎಲಿಡೆ ಹಂಟಿಂಗ್ ಅಸೋಸಿಯೇಷನ್​ಗೆ ಸೇರಿದ್ದಾಗಿದ್ದು, 1950ರಲ್ಲಿ ನಿರ್ಮಾಣವಾಗಿದೆ. ಇಲ್ಲಿ ಯಾರೂ ಶಾಶ್ವತವಾಗಿ ವಾಸ ಮಾಡುತ್ತಿಲ್ಲ.. ಬದಲಿಗೆ ಸಾಗರದಲ್ಲಿ ಪಫಿನ್ಸ್ ಹಕ್ಕಿಗಳ ಬೇಟೆ, ಮೀನುಗಾರಿಕೆ ಹೋಗುವ ಹಂಟಿಂಗ್ ಅಸೋಸಿಯೇಷನ್​ನ ಸಿಬ್ಬಂದಿಗಾಗಿ ಕಟ್ಟಲಾಗಿದೆ. ಆವಿ ಸ್ನಾನಕ್ಕಾಗಿ ಮನೆಯನ್ನು ಬಳಸಿಕೊಳ್ಳಲಾಗುತ್ತಿದೆ.

Published On - 5:37 pm, Sat, 19 December 20

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?