Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯನ ಸಮೀಪ ಇರುವ ನಕ್ಷತ್ರದಲ್ಲಿ ಏಲಿಯನ್ಸ್​? ರೇಡಿಯೋ ತರಂಗಾಂತರ ಹುಟ್ಟುಹಾಕಿತು ಹೊಸ ಕುತೂಹಲ

ಖಗೋಳಶಾಸ್ತ್ರಜ್ಞರಿಗೆ ಇಂತಹ ತರಂಗಗಳು ಕಾಣಿಸುವುದು ಅತೀ ಸಾಮಾನ್ಯ ಪ್ರಕ್ರಿಯೆ. ಆದರೆ, ಈ ತರಂಗಗಳು ಪ್ರಕೃತಿ ಸಹಜವಾಗಿ ಮೂಡುತ್ತಿರುವುದೋ ಅಥವಾ ಮಾನವನ ಹಸ್ತಕ್ಷೇಪದಿಂದ ಆಗುತ್ತಿರುವುದೋ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ.

ಸೂರ್ಯನ ಸಮೀಪ ಇರುವ  ನಕ್ಷತ್ರದಲ್ಲಿ ಏಲಿಯನ್ಸ್​? ರೇಡಿಯೋ ತರಂಗಾಂತರ ಹುಟ್ಟುಹಾಕಿತು ಹೊಸ ಕುತೂಹಲ
ಸಾಂದರ್ಭಿಕ ಚಿತ್ರ
Follow us
Skanda
| Updated By: ರಾಜೇಶ್ ದುಗ್ಗುಮನೆ

Updated on:Dec 19, 2020 | 7:04 PM

ಏಲಿಯನ್​ ಕುರಿತಾದ ಜಿಜ್ಞಾಸೆ ಇಂದು ನಿನ್ನೆಯದಲ್ಲ. ವಿಜ್ಞಾನ ಜಗತ್ತು ಅವುಗಳಿಗಾಗಿ ನಿರಂತರ ಅಧ್ಯಯನ ಮಾಡುತ್ತಲೇ ಬಂದಿದೆ. ಏಲಿಯನ್​ಗಳ ಬೆನ್ನುಬಿದ್ದು ಅವುಗಳ ಅಸ್ತಿತ್ವದ ಕುರಿತಾಗಿ ಸಂಶೋಧಿಸುತ್ತಿರುವ ಆಸ್ಟ್ರೇಲಿಯಾದ ಖಗೋಳಶಾಸ್ತ್ರಜ್ಞರಿಗೆ ಈಗ ಅಚ್ಚರಿಯೊಂದು ಎದುರಾಗಿದೆ. ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಪ್ರಾಕ್ಸಿಮಾ ಸೆಂಚುರಿ ನಕ್ಷತ್ರದೆಡೆಯಿಂದ ಕುತೂಹಲಕಾರಿ ತರಂಗಗಳು ಹೊರಹೊಮ್ಮುತ್ತಿರುವ ವಿಚಾರ ಪತ್ತೆಯಾಗಿದೆ.

ಕಳೆದ ವರ್ಷ ಏಪ್ರಿಲ್​, ಮೇ ತಿಂಗಳಲ್ಲಿ ನಡೆಸಿದ ಅಧ್ಯಯನ ಈ ಕುತೂಹಲವನ್ನು ಹುಟ್ಟುಹಾಕಿದೆ. ಪಾರ್ಕ್ಸ್​ ಟೆಲಿಸ್ಕೋಪ್​ನಿಂದ ಸುಮಾರು 30 ಗಂಟೆಗಳ ಕಾಲ ಗಮನಿಸಿದಾಗ ಪ್ರಾಕ್ಸಿಮಾ ಸೆಂಚುರಿ ನಕ್ಷತ್ರದ ಕಡೆಯಿಂದ ರೇಡಿಯೋ ತರಂಗಗಳು ಹೊರ ಹೊಮ್ಮಿರುವ ವಿಚಾರ ಪತ್ತೆ ಆಗಿದೆ.

ಖಗೋಳಶಾಸ್ತ್ರಜ್ಞರಿಗೆ ಇಂತಹ ತರಂಗಗಳು ಕಾಣಿಸುವುದು ಅತೀ ಸಾಮಾನ್ಯ ಪ್ರಕ್ರಿಯೆ. ಆದರೆ, ಈ ತರಂಗಗಳು ಪ್ರಕೃತಿ ಸಹಜವಾಗಿ ಮೂಡುತ್ತಿರುವುದೋ ಅಥವಾ ಯಾವುದಾದರೂ ಜೀವಿಯ ಹಸ್ತಕ್ಷೇಪದಿಂದ ಆಗುತ್ತಿರುವುದೋ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ. ಸಾಧಾರಣವಾಗಿ ಯಾವುದೇ ಆಕಾಶಕಾಯಗಳಲ್ಲಿ ಸ್ಫೋಟವಾದಗಲೂ ತರಂಗಗಳು ಹೊರಹೊಮ್ಮುವ ಸಾಧ್ಯತೆ ಇರುತ್ತದೆ ಎಂದು ವರದಿಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಸಾದ ಮಾಜಿ ವಿಜ್ಞಾನಿ ಪೀಟ್​ ವಾರ್ಡನ್, ಈ ಅಧ್ಯಯನ ಅತ್ಯಂತ ಪ್ರಮುಖವಾಗಿದೆ. ವಿಜ್ಞಾನಿಗಳು ಕೆಲವು ಅಸ್ವಾಭಿವಿಕ ತರಂಗಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳ ಮೂಲ ಯಾವುದು ಎನ್ನುವುದನ್ನು ತಿಳಿಯಬೇಕಿದೆ. ಅಧ್ಯಯನ ಇನ್ನೂ ಪ್ರಗತಿಯಲ್ಲಿರುವುದರಿಂದ ಈಗಲೇ ಖಚಿತವಾಗಿ ಮಾತನಾಡುವುದು ಕಷ್ಟ ಎಂದು ತಿಳಿಸಿದ್ದಾರೆ.

ಪ್ರಾಕ್ಸಿಮಾ ಬಿ ನಕ್ಷತ್ರದಲ್ಲಿ ಜೀವಿಗಳು ಇರುವುದು ಕಷ್ಟಸಾಧ್ಯ. ಭೂಮಿಗೆ ಚಂದ್ರ ಹೇಗೆ ಸಮೀಪದಲ್ಲಿರುವುದೋ, ಅಂತೆಯೇ ಪ್ರಾಕ್ಸಿಮಾ ಬಿ ಸಹ ಸೂರ್ಯನಿಗೆ ಅಂಟಿಕೊಂಡಿದೆ. ಒಂದು ಪಾರ್ಶ್ವದಲ್ಲಿ ಬೆಳಕಿದ್ದಾಗ ಇನ್ನೊಂದೆಡೆ ಸಂಪೂರ್ಣ ಕತ್ತಲಾವರಿಸಿರುತ್ತದೆ. ಆದರೆ, ಅಲ್ಲಿಯ ವಾತಾವರಣದಲ್ಲಿ ಜೀವಿಗಳು ಸೃಷ್ಟಿಯಾಗುತ್ತವೆ ಎಂದು ಊಹಿಸಿಕೊಳ್ಳುವುದು ಸಹ ಕಷ್ಟವಿದೆ. ಇಷ್ಟಾದರೂ ನಮ್ಮ ಊಹೆ ತಪ್ಪಾಗಲಿ ಎಂದೇ ನಾವು ನಿರೀಕ್ಷಿಸುತ್ತೇವೆ ಎಂದು ವಿಜ್ಞಾನಿ ಡಾರ್ಟ್​ನೆಲ್ ಹೇಳಿದ್ದಾರೆ.

ಭೂಮಿಯ ಹೊರತಾಗಿ ಬೇರೆಡೆ ಜೀವಿಗಳು ನೆಲೆಸಿರುವ ಕುರಿತು ನಡೆಯುತ್ತಿರುವ ಅಧ್ಯಯನ ಇಂದು ನಿನ್ನೆಯದಲ್ಲ. 1897ರಲ್ಲಿ ಅಮೆರಿಕಾದ ನಿಕೋಲಾ ಟೆಸ್ಲಾ ಎನ್ನುವವರು ಮಂಗಳ ಗ್ರಹದಿಂದ ರೇಡಿಯೋ ತರಂಗಗಳು ಹೊಮ್ಮುತ್ತಿರುವುದಾಗಿ ವಾದಿಸಿದ್ದರು. ಅಲ್ಲಿ ಜೀವಿಗಳು ಇರಬಹುದು ಎಂದು ಅಂದಾಜಿಸಲಾಗಿತ್ತಾದರೂ ಮಂಗಳ ಗ್ರಹದ ಮೇಲೆ ಇತ್ತೀಚೆಗೆ ನಡೆದ ಸಂಶೋಧನೆಗಳಿಂದ ಅಲ್ಲಿ ಜೀವಿಗಳು ನೆಲೆಸಿಲ್ಲ ಎನ್ನುವುದು ಗೊತ್ತಾಗಿದೆ.

ಅಂತೆಯೇ, 1967, 1977, 2003ನೇ ಇಸವಿಯಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ಮಹತ್ತರ ಅಧ್ಯಯನಗಳು ನಡೆದಿವೆ. ಆದರೆ, ಇದುವರೆಗಿನ ಯಾವ ಅಧ್ಯಯನದಲ್ಲೂ ಏಲಿಯನ್​ ಅಸ್ತಿತ್ವದ ಕುರಿತಾಗಿ ನಿಖರ ಮಾಹಿತಿ ಸಿಕ್ಕಿಲ್ಲ.

ಏಲಿಯನ್​ಗಳಿಂದ ಮನುಷ್ಯರ ಫ್ರೆಂಡ್​ಶಿಪ್: ಇದು ಇಸ್ರೇಲಿ ಬಾಹ್ಯಾಕಾಶ ವಿಜ್ಞಾನಿಯ ಖಚಿತ ನುಡಿ

Published On - 7:03 pm, Sat, 19 December 20

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ