ಕೊವಿಡ್-19 ವಿರುದ್ಧ ಫೈಝರ್ ಲಸಿಕೆ ಹಾಕಿಸಿಕೊಂಡ ಇಸ್ರೇಲ್ ಪ್ರಧಾನಿ ನೆತನ್ಯಾಹು

ರಮಾತ್ ಗಾನ್​ನಲ್ಲಿರುವ ಶೆಬಾ ವೈದ್ಯಕೀಯ ಕೇಂದ್ರದಲ್ಲಿ ಪ್ರಧಾನಿ ನೆತನ್ಯಾಹು ಮತ್ತು ಇಸ್ರೇಲ್ ಆರೋಗ್ಯ ಸಚಿವ ಯುಲಿ ಎಡೆಲ್​ಸ್ಟಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೊವಿಡ್-19 ವಿರುದ್ಧ ಫೈಝರ್ ಲಸಿಕೆ ಹಾಕಿಸಿಕೊಂಡ ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊವಿಡ್-19 ಲಸಿಕೆ ಪಡೆಯುತ್ತಿರುವುದು.
Follow us
TV9 Web
| Updated By: ganapathi bhat

Updated on:Apr 06, 2022 | 11:31 PM

ಟೆಲ್​ಅವೀವ್: ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕೊವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಕೊರೊನಾ ವಿರುದ್ಧ ಲಸಿಕೆ ಚುಚ್ಚಿಸಿಕೊಂಡ ಇಸ್ರೇಲ್​ನ ಮೊದಲ ಪ್ರಜೆ ಅನಿಸಿಕೊಂಡಿದ್ದಾರೆ. ದೇಶವ್ಯಾಪಿ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ರಮಾತ್ ಗಾನ್​ನಲ್ಲಿರುವ ಶೆಬಾ ವೈದ್ಯಕೀಯ ಕೇಂದ್ರದಲ್ಲಿ ಪ್ರಧಾನಿ ನೆತನ್ಯಾಹು ಮತ್ತು ಇಸ್ರೇಲ್ ಆರೋಗ್ಯ ಸಚಿವ ಯುಲಿ ಎಡೆಲ್​ಸ್ಟಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ನಾನು ವೈಯಕ್ತಿಕ ಉದಾಹರಣೆಯಾಗಿದ್ದೇನೆ ಮತ್ತು ನಿಮ್ಮನ್ನೂ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ.

ಈ ತಿಂಗಳ ಅಂತ್ಯದೊಳಗಾಗಿ ಹತ್ತು ಲಕ್ಷದಷ್ಟು ಕೊವಿಡ್-19 ಲಸಿಕೆಗಳು ಲಭ್ಯವಾಗಲಿವೆ ಎಂಬ ಮಾಹಿತಿಯನ್ನೂ ಪ್ರಧಾನಿ ನೀಡಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮ ಟಿವಿಯಲ್ಲೂ ಪ್ರಧಾನಿ ಲಸಿಕೆ ಹಾಕಿಸಿಕೊಳ್ಳುವ ದೃಶ್ಯ ನೇರಪ್ರಸಾರವಾಗಿದೆ.

ಫೆಬ್ರವರಿಯಲ್ಲಿ ಮೊದಲ ಕೋವಿಡ್-19 ಪ್ರಕರಣ ಎದುರಿಸಿದ ಇಸ್ರೇಲ್, ಇದುವರೆಗೆ 3 ಲಕ್ಷದ 72 ಸಾವಿರದಷ್ಟು ಕೊವಿಡ್ ಪ್ರಕರಣಗಳನ್ನು ದಾಖಲಿಸಿದೆ. 3,070 ಮಂದಿ ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೀಗ, ಇಸ್ರೇಲ್ ಫೈಝರ್-ಬಯೊಎನ್​ಟೆಕ್ ಲಸಿಕೆಯನ್ನು ಜನರಿಗೆ ಹಾಕುವ ಪ್ರಕ್ರಿಯೆ ಆರಂಭಿಸಿದೆ.

ಅಮೆರಿಕಾ, ರಷ್ಯಾ, ಬ್ರಿಟನ್ ಕೂಡ ಲಸಿಕೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಪತ್ನಿ ಕೂಡ ಸೋಮವಾರ ಕೊವಿಡ್-19 ವಿರುದ್ಧದ ಫೈಝರ್ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

Published On - 12:55 pm, Sun, 20 December 20