ಒಂದು ಡಾಲರ್​ಗೆ ಬಿ.ಆರ್. ಶೆಟ್ಟಿಯ ಒಂದು ಕಂಪೆನಿ ಮಾರಾಟ! ದಾರಿ ಕಾಣದಾಗಿದೆ ‘ರಘುರಾಮ’ನಿಗೆ..

ಯುಎಇ ಮೂಲದ ಭಾರತೀಯ ಉದ್ಯಮಿ ಬಿಲಿಯನೇರ್ ಬಿ.ಆರ್. ಶೆಟ್ಟಿಯವರ ಫಿನಾಬ್ಲರ್ ಪಿಎಲ್ಸಿ ಕಂಪೆನಿಯು ಯುಎಇ ಎಕ್ಸ್ಚೇಂಜಿನಲ್ಲಿ 1 ಡಾಲರ್ ಗೆ ಮಾರಾಟಗೊಂಡಿದೆ! ಏನಿದರ ವೃತ್ತಾಂತ..

ಒಂದು ಡಾಲರ್​ಗೆ ಬಿ.ಆರ್. ಶೆಟ್ಟಿಯ ಒಂದು ಕಂಪೆನಿ ಮಾರಾಟ! ದಾರಿ ಕಾಣದಾಗಿದೆ ‘ರಘುರಾಮ’ನಿಗೆ..
ಬಿ. ಆರ್. ಶೆಟ್ಟಿ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Dec 19, 2020 | 3:35 PM

ಕಳೆದ ವರ್ಷ ಡಿಸೆಂಬರ್.. ಮಂಗಳೂರು ಮೂಲದ ಬಾವಗುತ್ತು ರಘುರಾಮ ಶೆಟ್ಟಿ ಯಾನೆ ಬಿ ಆರ್ ಶೆಟ್ಟಿ ಮಾಲೀಕತ್ವದ ಫಿನಬ್ಲರ್ ಕಂಪೆನಿಯ ಮಾರುಕಟ್ಟೆಯಲ್ಲಿ ಗಳಿಸಿದ್ದ (market capitalization) ಬಂಡವಾಳದ ಹಣ 1.5 ಬಿಲಿಯನ್ ಪೌಂಡ್​ಗಿಂತ ಜಾಸ್ತಿ ಇತ್ತು. ಒಂದು ವರ್ಷದ ನಂತರ, ವಿದೇಶಿ ವಿನಿಮಯ ಮಾಡಿಕೊಡುವ ಸಂಸ್ಥೆಯ ಬೆಲೆ 1 ಡಾಲರ್. ಶೆಟ್ಟಿಯವರ ಮಾಲೀಕತ್ವದ ಫಿನಬ್ಲರ್, ವಿದೇಶಿ ವಿನಿಮಯ ಪರಿಹಾರಗಳಿಗೆ ವೇದಿಕೆಯಾಗಿದ್ದ ಪ್ರಿಸಂ ಗ್ರೂಪ್ ಆಫ್ ಇಸ್ರೇಲಿನ ಅಂಗಸಂಸ್ಥೆಯಾದ ಗ್ಲೋಬಲ್ ಫಿನ್ಟೆಕ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದನ್ನು ಘೋಷಿಸಿಕೊಂಡಿತ್ತು. ನಂತರ ಕಳೆದ ಡಿಸೆಂಬರ್ ನಲ್ಲಿ ಈ ಕಂಪೆನಿ 1.5 ಬಿಲಿಯನ್ ಪೌಂಡ್ ಮಾರುಕಟ್ಟೆ ಬೆಲೆಯನ್ನೂ ಹೊಂದಿತ್ತು. ಆದರೆ ಈಗ ಕೇವಲ 1 ಡಾಲರ್ ಗೆ ಮಾರಾಟಗೊಂಡಿದೆ.

ಅಬುಬೇಕರ್ ಅಲ್ ಖೂರಿ ನೇತೃತ್ವದ ಆರ್ಎಸ್ಪಿ, ಅಬುಧಾಬಿ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಶೇಖ್ ಹಜ್ಜಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೂ ಈ ಕಂಪೆನಿ ವ್ಯವಹಾರ ಸಂಬಂಧವನ್ನಿಟ್ಟುಕೊಂಡಿದೆ. ಈ ವರ್ಷದ ಯುಎಇ ಮತ್ತು ಇಸ್ರೇಲಿ ಕಂಪನಿಗಳ ನಡುವಿನ ಮೊದಲ ಮಹತ್ವದ ವಾಣಿಜ್ಯ ವಹಿವಾಟುಗಳಲ್ಲಿ ಈ ಒಪ್ಪಂದವೂ ಸೇರಿದೆ. ಅಂದಿನಿಂದ, ಬ್ಯಾಂಕಿಂಗ್​ನಿಂದ ಹಿಡಿದು ಮೊಬೈಲ್ ಫೋನ್ ಸೇವೆಗಳವರೆಗಿನ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಆಗಿದ್ದೇನು? : ಎಲ್ಲವೂ ಸರಿ ಇದೆ ಎಂದುಕೊಂಡಾಗಲೇ ಏನಾದರೂ ಎಡವಟ್ಟಾಗುವುದು. 2019 ರಲ್ಲಿ ಲಂಡನ್ನಿನ ಮಡ್ಡಿ ವಾಟರ್ಸ್​ ಎಂಬ ಲೆಕ್ಕ ಪತ್ರ ಪರಿಶೀಧನಾ ಸಂಸ್ಥೆ ಮೊದಲ ಬಾರಿಗೆ ಶೆಟ್ಟಿಯವರ ಫಿನಬ್ಲರ್ ಕಂಪೆನಿಯಲ್ಲಿ ಅಪರಾ ತಪರಾ ಇದೆ ಎಂದು ಹೇಳಿತು. ಅಷ್ಟೇ ಅಲ್ಲ, ಬಂಡವಾಳದ ಜಾಸ್ತಿ ಮಾರಾಟ, ಮಾಡಿದ ಸಾಲಕ್ಕಿಂತ ಕಡಿಮೆ ಸಾಲವನ್ನು ಹೊರಜಗತ್ತಿಗೆ ತೋರಿಸಿದ್ದು ಮತ್ತು ಇರೋದಕ್ಕಿಂತ ಜಾಸ್ತಿ ನಗದು ಹಣವಿದೆ ಎಂದು ತೋರಿಸಿದೆ. ಇವೆಲ್ಲ ನೋಡಿದರೆ, ಶೆಟ್ಟಿಯವರ ಕಂಪೆನಿಯಲ್ಲಿ ಯಾವುದೂ ಸರಿ ಇಲ್ಲ ಎಂದು ಹೇಳಿದಂದಿನಿಂದ, ಲಂಡನ್ ಸ್ಟಾಕ್ ಎಕ್ಸಚೆಂಜ್​ನಲ್ಲಿ ಈ ಕಂಪೆನಿಯ ಶೇರು ಬೆಲೆ ಮಕಾಡೆ ಬಿದ್ದು ಈಗ ಒಂದು ವರ್ಷದ ನಂತರ ಅದೇ ಕಂಪೆನಿ 1 ಡಾಲರ್​ಗೆ ಮಾರಾಟವಾಗುವಂತಾಯ್ತು.

2019ರ ಡಿಸೆಂಬರಿನಲ್ಲಿ ಎಂಎನ್​ಸಿ ಹೆಲ್ಥ್​ನ ಷೇರುಗಳ ದರ 67 ಪರ್ಸೆಂಟಿಗೆ ಕುಸಿತ ಕಂಡಿದ್ದರಿಂದ ಷೇರುದಾರ ಕೆಂಗಣ್ಣಿಗೆ ಶೆಟ್ಟಿ ಗುರಿಯಾಗಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇವರೊಂದಿಗೆ ಉಪಾಧ್ಯಕ್ಷ ಖಲೀಫಾ ಬುಟ್ಟಿ ಮತ್ತು ಇತರ ನಾಲ್ವರು ಮಂಡಳಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿದರು. ಹೀಗಿರುವಾಗಲೇ ಫಿನಬ್ಲಿರ್ ಷೇರುಗಳ ಮೌಲ್ಯವೂ ಕುಸಿಯಿತು.

ಇದರಿಂದಾಗಿ ಯುಎಇಯ ಕೇಂದ್ರೀಯ ಬ್ಯಾಂಕ್(ಸಿಬಿಯುಎಇ) ಶೆಟ್ಟಿ ಮತ್ತು ಕುಟುಂಬದವರ ಜೊತೆಗೆ ಪಾಲುದಾರಿಕೆಯುಳ್ಳ ಕಂಪೆನಿಗಳ ಎಲ್ಲಾ ಬ್ಯಾಂಕ್ ಖಾತೆಗಳ ವ್ಯವಹಾರಕ್ಕೆ ನಿಷೇಧ ಬಿದ್ದಿತು. ಈ ಮೂಲಕ ಶೆಟ್ಟಿಯ ಕೆಲ ಕಂಪೆನಿಗಳು ಕಪ್ಪುಪಟ್ಟಿಗೆ ಸೇರಿದವು. ಇವರ ಇಡೀ ಬದುಕು ಏಳುಮುಳುಗಿನಲ್ಲೇ ಸಾಗಿದರೂ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ, ಔಷಧ ಕಂಪೆನಿಗಳನ್ನು ಕಟ್ಟುವ ಮೂಲಕ ಜನರ ಮನಸ್ಸನ್ನೂ ಗೆಲ್ಲುತ್ತ ಬಂದರು.  ಸದ್ಯ ಮಂಗಳೂರಿನಲ್ಲಿರುವ ಪದ್ಮಶ್ರೀ ಪುರಸ್ಕೃತ ಶೆಟ್ಟಿ  77ರ ವಯಸ್ಸಿನಲ್ಲಿ ಇನ್ನ್ಯಾವ ಹೆಜ್ಜೆ ಇಡಬಹುದು ಎನ್ನುವುದು ರಾಜ್ಯದ ಜನತೆಯೊಂದಿಗೆ ಜಾಗತಿಕ ಉದ್ಯಮ ವಲಯದ ಸದ್ಯದ ಕುತೂಹಲವೂ ಆಗಿದೆ.

ಹೇಗಿದ್ದವರು ಹೇಗಾದರು? : ವರ್ಷ: 1973. ತಂಗಿಯ ಮದುವೆಗೆಂದು ಮಾಡಿದ ಸಾಲ ತೀರಲಿಲ್ಲ ಎಂದು ಬಾವಗುತ್ತು ರಘುರಾಮ ಶೆಟ್ಟಿ ಅಂದರೆ ಎಲ್ಲರಿಗೂ ಪರಿಚಯವಿರುವ ಬಿ.ಆರ್​. ಶೆಟ್ಟಿ ಮಧ್ಯಪ್ರಾಚ್ಯದ ನೆಲಕ್ಕೆ ಕಾಲಿಟ್ಟರು. ಆಗ ಅವರ ಕಿಸೆಯಲ್ಲಿ ಇದ್ದುದು ಬರೀ 56 ರೂಪಾಯಿ. ಎಲ್ಲರಿಗೂ ಗೊತ್ತಿರುವಂತೆ ಅವರು ಭಾರತೀಯ ಮೂಲದ ಮೊದಲ ಔಷಧ ಮಾರಾಟಗಾರರಾಗಿ (medical representative) ಅಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಮೂವತ್ತೇಳು ವರ್ಷದ ನಂತರ, ವಿದೇಶಗಳಲ್ಲಿ ಮಾಡಿರುವ ಸಾಲ ಅವರನ್ನು ಬೆನ್ನು ಹತ್ತಿದೆ. ಬಿಲಿಯನೇರ್ ಬಿ.ಆರ್. ಶೆಟ್ಟಿಯವರ ಫಿನಾಬ್ಲರ್ ಪಿಎಲ್ಸಿ ಕಂಪೆನಿಯು ಯುಎಇ ಎಕ್ಸ್ಚೇಂಜಿನಲ್ಲಿ ಕೇವಲ 1 ಡಾಲರ್ ಗೆ ಮಾರಾಟಗೊಂಡಿದೆ. ಇದರೊಂದಿಗೆ ದಕ್ಷಿಣ ಕನ್ನಡ ಮೂಲದ ಶೆಟ್ಟಿಯವರ ಪಯಣದ ದಾರಿಯೇ ತಿರುಗಿದಂತಾಗಿದೆ.

1973ರಲ್ಲಿ ವರ್ಷಗಳ ಹಿಂದೆ ಒಬ್ಬ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಅಬುಧಾಬಿಗೆ ಕಾಲಿಟ್ಟ ಬಿ. ಆರ್. ಶೆಟ್ಟಿ 1975ರಲ್ಲಿ ನ್ಯೂ ಮೆಡಿಕಲ್ ಸೆಂಟರ್ ಕ್ಲಿನಿಕ್ ಆರಂಭಿಸಿ ಪತ್ನಿ ಚಂದ್ರಕುಮಾರಿಯನ್ನೇ ವೈದ್ಯೆಯಾಗಿ ನೇಮಿಸಿದರು. 1980ರಲ್ಲಿ ಯುಎಇ ಎಕ್ಸ್ಚೇಂಜ್, 1981ರಲ್ಲಿ ಎಂಎಂಸಿ ಟ್ರೇಡಿಂಗ್ ಆರಂಭಿಸಿ, ಯುಎಇ ವಿವಿಧ ವಲಯಗಳಿಗೆ ಸರಕು ಸರಬರಾಜುವಿನಲ್ಲಿ ತೊಡಗಿಕೊಂಡರು. 2003ರಲ್ಲಿ ಫಾರ್ಮಾಸ್ಯುಟಿಕಲ್ ಉತ್ಪಾದಕ ನಿಯೋಫಾರ್ಮಾ ಚಾಲನೆಗೊಂಡಿತು. ಹೀಗೆ ಇವರ ಉದ್ಯಮ ಸಾಹಸಗಳ ಪಯಣ ಶುರುವಾಯಿತು.

2010ರಲ್ಲಿ ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಎರಡು ಮಹಡಿಗಳನ್ನು ಖರೀದಿಸಿ ಗಮನ ಸೆಳೆದರು. 2012ರಲ್ಲಿ ಎನ್ಎಂಸಿ ಕಂಪೆನಿ ಎಲ್ಎಸ್ಇಯಲ್ಲಿ ನೋಂದಣಿಯಾಯಿತು. 2012ರಲ್ಲಿ ಈ ಕಂಪೆನಿಯು ಲಂಡನ್ ಸ್ಟಾಕ್ ಎಕ್ಸ್ಚೇಂಜಿನಲ್ಲಿ ಐಪಿಒ ಮೂಲಕ 117 ದಶಲಕ್ಷ ಪೌಂಡ್ ಸಂಗ್ರಹಿಸಿತ್ತು. ಆದರೆ ಹೀಗೆ ಸಾಹಸಕ್ಕೆ ಇಳಿದವರು ಯಾವಾಗಲೂ ಅಪಾಯದಂಚಿನಲ್ಲೇ ಬದುಕು ಸಾಗಿಸುತ್ತಿರುತ್ತಾರೆ. 2013ರಲ್ಲಿ ಮುಂಬೈನ ಅಂಬೋಲಿಯಲ್ಲಿ ಶೆಟ್ಟಿಯವರ ಮೇಲೆ ಗುಂಡಿನ ದಾಳಿ ನಡೆಸಲಾಯಿತು.  ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದರು. ಪಾತಕಿ ಛೋಟಾ ರಾಜನ್ ಮತ್ತು ಅವನ ಸಹಚರರಿಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು.

ಈ ಆಘಾತದಿಂದ ಚೇತರಿಸಿಕೊಂಡ ಶೆಟ್ಟಿ 2014ರಲ್ಲಿ ಬ್ರಿಟನ್ ಮೂಲದ ಟ್ರಾವೆಲೆಕ್ಸ್ ಅನ್ನು 100 ಕೋಟಿ ಪೌಂಡುಗಳಿಗೆ ಖರೀದಿಸಿದರು. 2017ರಲ್ಲಿ ಮಹಾಭಾರತ ಆಧರಿಸಿದ ಸಿನಿಮಾ ನಿರ್ಮಿಸಲು ಸುಮಾರು ರೂ. 1,000 ಕೋಟಿ ತೊಡಗಿಸುವುದಾಗಿ ಘೋಷಿಸಿದರು. 2018ರಲ್ಲಿ ಫಿನಬ್ಲರ್, ಟ್ರಾವೆಲೆಕ್ಸ್ ಮುಂತಾದ ಕಂಪೆನಿಗಳನ್ನ ಪ್ರಾರಂಭಿಸಿದರು. 2019ರ ಈ ಕಂಪೆನಿ ಹಗರಣಕ್ಕೆ ಸಿಲುಕಿತು. 2020ರ ಏಪ್ರಿಲ್ ಹೊತ್ತಿಗೆ ಭಾರತಕ್ಕೆ ಮರಳಿದರು.

15,000 ಕೋಟಿ ರೂ ಮೌಲ್ಯದ B.R. ಶೆಟ್ಟಿಯ ಫಿನಾಬ್ಲರ್ ಕಂಪನಿ ಕೇವಲ 75 ರೂಪಾಯಿಗೆ ಸೇಲ್!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ