AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!

Pawan Kalyan Vakeel Saab: ಸಂತೋಷ್​ ಚಿತ್ರಮಂದಿರದಲ್ಲಿ ರಾಬರ್ಟ್​ ಬದಲಿಗೆ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಸಿನಿಮಾವನ್ನು ಪ್ರದರ್ಶಿಸಲು ಪ್ಲ್ಯಾನ್​ ಸಿದ್ಧವಾಗಿತ್ತು. ಆದರೆ ಅದಕ್ಕೆ ದರ್ಶನ್​ ಅಭಿಮಾನಿಗಳು ಅವಕಾಶ ನೀಡಿಲ್ಲ.

Roberrt: ರಾಬರ್ಟ್​ ಎತ್ತಂಗಡಿ ಮಾಡಿಸಲು ಬಂದ ಪವನ್​ ಕಲ್ಯಾಣ್​ ಸಿನಿಮಾಗೆ ದರ್ಶನ್​ ಫ್ಯಾನ್ಸ್​ ಕೊಟ್ರು ಸಖತ್​ ಡಿಚ್ಚಿ!
ದರ್ಶನ್​ - ಪವನ್​ ಕಲ್ಯಾಣ್​
ಮದನ್​ ಕುಮಾರ್​
| Edited By: |

Updated on: Apr 06, 2021 | 3:08 PM

Share

ಲಾಕ್​ಡೌನ್​ ನಂತರದ ಕಡು ಕಷ್ಟದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದ ರಾಬರ್ಟ್​ ಸಿನಿಮಾ, ಈಗಲೂ ಹಲವು ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. 100 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿರುವ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಒಲವಿದೆ. ಆದರೆ ಟಾಲಿವುಡ್​ನ ಸ್ಟಾರ್​ ನಟ ಪವನ್​ ಕಲ್ಯಾಣ್​ ಅಭಿನಯದ ಹೊಸ ಸಿನಿಮಾದಿಂದಾಗಿ ಬೆಂಗಳೂರಿನಲ್ಲಿ ರಾಬರ್ಟ್​ ಚಿತ್ರಕ್ಕೆ ತೊಂದರೆ ಎದುರಾಗುವ ಸಾಧ್ಯತೆ ಇತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ‘ಚಾಲೆಂಜಿಂಗ್​ ಸ್ಟಾರ್​’ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಸಂತೋಷ್​ ಚಿತ್ರಮಂದಿರದಲ್ಲಿ ರಾಬರ್ಟ್​ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. ಏ.11ರಂದು ಬಿಡುಗಡೆಯಾಗ ಈ ಸಿನಿಮಾವನ್ನು ಈಗ ಸಂತೋಷ್​ ಥಿಯೇಟರ್​ನಿಂದ ಎತ್ತಂಗಡಿ ಮಾಡಿಸುವ ಪ್ರಯತ್ನ ನಡೆಯಿತು. ಅಂದರೆ, ಈ ಚಿತ್ರಮಂದಿರದಲ್ಲಿ ರಾಬರ್ಟ್​ ಬದಲಿಗೆ ಪವನ್​ ಕಲ್ಯಾಣ್​ ನಟನೆಯ ವಕೀಲ್​ ಸಾಬ್​ ಸಿನಿಮಾವನ್ನು ಪ್ರದರ್ಶಿಸಲು ಪ್ಲ್ಯಾನ್​ ಸಿದ್ಧವಾಗಿತ್ತು. ಆದರೆ ಅದಕ್ಕೆ ದರ್ಶನ್​ ಅಭಿಮಾನಿಗಳು ಅವಕಾಶ ನೀಡಿಲ್ಲ.

ವಕೀಲ್​ ಸಾಬ್​ ಸಿನಿಮಾ ಏ.9ರಂದು ಬಿಡುಗಡೆ ಆಗುತ್ತಿದೆ. ಆ ಚಿತ್ರವನ್ನು ಕರ್ನಾಟಕದಲ್ಲಿ ಕೆಆರ್​ಜಿ ಸಂಸ್ಥೆ ವಿತರಿಸುತ್ತಿದೆ. ರಾಬರ್ಟ್​ ಪ್ರದರ್ಶನ ಆಗುತ್ತಿರುವ ಸಂತೋಷ್​ ಚಿತ್ರಮಂದಿರದಲ್ಲಿ ಏ,9ರಿಂದ ವಕೀಲ್​ ಸಾಬ್​ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಡಿ ಬಾಸ್​ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಕೆಆರ್​ಜಿ ಸಂಸ್ಥೆಯ ಕಾರ್ತಿಕ್​ ಗೌಡ ಅವರು ತೀರ್ಮಾನ ಬದಲಾಯಿಸಿದ್ದಾರೆ.

ಸಂತೋಷ್​ ಚಿತ್ರಮಂದಿರದಲ್ಲಿ ರಾಬರ್ಟ್​ ಪ್ರದರ್ಶನವನ್ನೇ ಮುಂದುವರಿಸುವುದಾಗಿ ಕಾರ್ತಿಕ್​ ಗೌಡ ಸ್ಪಷ್ಟಪಡಿಸಿದ್ದಾರೆ. ಸಂತೋಷ್​ ಚಿತ್ರಮಂದಿರದ ಬದಲಿಗೆ ಗಾಂಧಿನಗರದ ಭೂಮಿಕಾ ಥಿಯೇಟರ್​ನಲ್ಲಿ ವಕೀಲ್​ ಸಾಬ್​ ಸಿನಿಮಾ ಪ್ರದರ್ಶಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಈ ವಿಚಾರವನ್ನು ಇಟ್ಟುಕೊಂಡು ಯಾವುದೇ ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬವನ್ನು ಟಾರ್ಗೆಟ್​ ಮಾಡುವುದು ಸರಿಯಲ್ಲ ಎಂದು ಕಾರ್ತಿಕ್​ ಗೌಡ ಟ್ವೀಟ್​ ಮಾಡಿದ್ದಾರೆ.

ಇನ್ನು, ರಾಬರ್ಟ್​ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇನ್ನೂ ಒಂದಷ್ಟು ದಿನಗಳ ಕಾಲ ಸಂತೋಷ್​ ಚಿತ್ರಮಂದಿರದಲ್ಲೇ ರಾಬರ್ಟ್​ ಪ್ರದರ್ಶನ ಕಾಣಲಿದೆ. ದರ್ಶನ್​ ಅವರ ಅಭಿಮಾನಿಗಳು ಸಹಕರಿಸಬೇಕು’ ಎಂದು ಉಮಾಪತಿ ಟ್ವೀಟ್​ ಮಾಡಿದ್ದಾರೆ. ರಾಬರ್ಟ್​ ತೆರೆಕಂಡು 28 ದಿನ ಪೂರೈಸಿದೆ. ನಟ ದರ್ಶನ್​, ನಾಯಕಿ ಆಶಾ ಭಟ್​, ನಿರ್ದೇಶಕ ತರುಣ್​ ಸುಧೀರ್​ ಅವರಿಗೆ ಈ ಚಿತ್ರದಿಂದ ಭರ್ಜರಿ ಗೆಲುವು ಸಿಕ್ಕಿದೆ.

ಇದನ್ನೂ ಓದಿ: 100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ

ಹೋಳಿ ಹಬ್ಬಕ್ಕೆ ಅಭಿಮಾನಿಗಳಿಗೆ ರಾಬರ್ಟ್​ ಕಡೆಯಿಂದ ಸಿಕ್ತು ಕಲರ್​ಫುಲ್​ ಗಿಫ್ಟ್​!

(Roberrt vs Vakeel Saab: Darshan fans urge KRG to continue Roberrt in Santhosh Theater)

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!