100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ

Roberrt Box Office collection: 100 ಕೋಟಿ ರೂ. ಕ್ಲಬ್​ ಸೇರುವತ್ತ ಹೆಜ್ಜೆ ಹಾಕುತ್ತಿದ್ದ ರಾಬರ್ಟ್​ ಸಿನಿಮಾ ಕಡೆಗೂ 20ನೇ ದಿನಕ್ಕೆ ಈ ಗುರಿ ಮುಟ್ಟಿದೆ. ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಇಂಥ ಸಾಥನೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ ರಾಬರ್ಟ್​ ಪಾತ್ರವಾಗಿದೆ.

100 ಕೋಟಿ ರೂ. ಬಾಚಿಕೊಂಡ ರಾಬರ್ಟ್​! ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಹೊಸ ದಾಖಲೆ
ದರ್ಶನ್​ - ರಾಬರ್ಟ್​
Follow us
|

Updated on:Mar 31, 2021 | 2:19 PM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಗೆದ್ದು ಬೀಗಿದೆ. ಚಂದನವನದ ಬಾಕ್ಸ್​ ಆಫೀಸ್​ನಲ್ಲಿ ಈವರೆಗೂ ಯಾವ ಚಿತ್ರವೂ ಮಾಡಿರದ ಸಾಧನೆಯನ್ನು ‘ರಾಬರ್ಟ್​’ ಮಾಡಿದೆ. ಈ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಲೆಕ್ಷನ್​ ಆಗಿದೆ. ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಮತ್ತೆ ಸಾಬೀತಾಗಿದೆ.

ಮಾ.11ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದ್ದ ರಾಬರ್ಟ್ ಸಿನಿಮಾ ಮೊದಲ ದಿನವೇ 17.24 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂತು. ಒಂದು ವಾರದ ಬಳಿಕವೂ ರಾಬರ್ಟ್​ ನಾಗಾಲೋಟ ಮುಂದುವರಿದಿತ್ತು. 8 ದಿನಗಳಲ್ಲಿ ಈ ಚಿತ್ರ 78.36 ಕೋಟಿ ರೂ. ಬಾಚಿಕೊಂಡು ಗೆಲುವಿನ ಪತಾಕೆ ಹಾರಿಸಿತ್ತು. ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ರಾಬರ್ಟ್​ ಬಿಡುಗಡೆಯಾಗಿ 20 ದಿನ ಕಳೆದಿದೆ. ಒಂದು ವಾರದ ಬಳಿಕ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖ ಆಗಿದ್ದರೂ ಕೂಡ ಉತ್ತಮ ಪ್ರದರ್ಶನ ಕಾಣುತ್ತಿತ್ತು. 100 ಕೋಟಿ ಕ್ಲಬ್​ ಸೇರುವತ್ತ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಈ ಸಿನಿಮಾ ಕಡೆಗೂ 20ನೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಇಂಥ ಸಾಥನೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ ರಾಬರ್ಟ್​ ಪಾತ್ರವಾಗಿದೆ.

ತರುಣ್​ ಸುಧೀರ್​ ನಿರ್ದೇಶನ ಹಾಗೂ ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣದ ‘ರಾಬರ್ಟ್​’ಗೆ ಆಶಾ ಭಟ್​ ನಾಯಕಿ. ಚಂದನವನದಲ್ಲಿ ಆಶಾ ಭಟ್​ಗೆ ಇದು ಮೊದಲ ಸಿನಿಮಾ. ಹೀಗೆ ಅವರ ಚೊಚ್ಚಲ ಚಿತ್ರವೇ ​100 ಕೋಟಿ ರೂ. ಕ್ಲಬ್​ ಸೇರಿಕೊಂಡಿರುವುದು ಹೆಚ್ಚುಗಾರಿಕೆ. ದರ್ಶನ್​ ವೃತ್ತಿಜೀವನಕ್ಕೆ ರಾಬರ್ಟ್​ನಿಂದ ಅತಿ ದೊಡ್ಡ ಹಿಟ್​ ಸಿಕ್ಕಿದೆ. ನಿರ್ದೇಶಕ ತರುಣ್​ ಸುಧೀರ್​ ಒಬ್ಬ ಯಶಸ್ವಿ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ.

2018ರಲ್ಲಿ ತೆರೆಕಂಡ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರ ಕೇವಲ 7 ದಿನಕ್ಕೆ 100 ಕೋಟಿ ರೂ. ಗಳಿಸಿತ್ತು ಎಂದು ವರದಿ ಆಗಿತ್ತು. ಆದರೆ ಆ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಡಬ್​ ಆಗಿ ಅಷ್ಟು ಕಲೆಕ್ಷನ್​ ಮಾಡಿತ್ತು. ಕೇವಲ ಕನ್ನಡದಲ್ಲೇ 100 ಕೋಟಿ ರೂ. ಗಳಿಸುವ ಮೂಲಕ ‘ರಾಬರ್ಟ್​’ ತನ್ನದೇ ಹಾದಿಯಲ್ಲಿ ರೆಕಾರ್ಡ್​ ಮಾಡಿದೆ.

ರಾಬರ್ಟ್​ಗೆ ಈ ಪರಿ ಯಶಸ್ಸು ಸಿಗುವುದಕ್ಕೆ ಕಾರಣವಾದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ರಾಜ್ಯಾದ್ಯಂತ ವಿಜಯ ಯಾತ್ರೆ ಮಾಡಬೇಕು ಎಂದು ದರ್ಶನ್​ ಪ್ಲ್ಯಾನ್​ ಮಾಡಿಕೊಂಡಿದ್ದರು. ಆದರೆ ಕೋವಿಡ್​-19 ಎರಡನೇ ಅಲೆ ಹರಡುವ ಭೀತಿಯಿಂದಾಗಿ ಸದ್ಯಕ್ಕೆ ವಿಜಯ ಯಾತ್ರೆಯನ್ನು ಕ್ಯಾನ್ಸಲ್​ ಮಾಡಲಾಗಿದೆ. ಸೋಶಿಯಲ್​ ಮೀಡಿಯಾ ಮೂಲಕವೇ ದರ್ಶನ್​ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಕೋವಿಡ್​ ವಿಘ್ನಗಳ ನಡುವೆಯೂ ರಾಬರ್ಟ್​ 100 ಕೋಟಿ ರೂ. ಸಾಧನೆ ಮಾಡಿರುವುದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಅಭಿಮಾನಿಗಳಿಗೆ ರಾಬರ್ಟ್​ ಕಡೆಯಿಂದ ಸಿಕ್ತು ಕಲರ್​ಫುಲ್​ ಗಿಫ್ಟ್​!

Darshan: ರಿಯಲ್ ಸಾರಥಿ ಜೊತೆ ರೀಲ್​ ಸಾರಥಿ ಭೇಟಿ! ಡಿ ಬಾಸ್​ ದರ್ಶನ್​ ಬಾಲ್ಯದ ವಿಶೇಷ ವ್ಯಕ್ತಿ ಇವರು

Published On - 10:38 am, Wed, 31 March 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ