AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸದ ಸಮಯದಲ್ಲಿ ಹೀರೋಯಿನ್ ಜೊತೆ ರಕ್ಷಿತ್​ ಶೆಟ್ಟಿ ಮೋಜು! ಫೋಟೋ ವೈರಲ್​

Rakshit Shetty: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಇನ್ನೂ ಶೂಟಿಂಗ್​ ಆರಂಭ ಆಗಿಲ್ಲ. ಅಷ್ಟರಲ್ಲಾಗಲೇ ಜನರು ರುಕ್ಮಿಣಿ ಮತ್ತು ರಕ್ಷಿತ್​ ಜೋಡಿಯನ್ನು ಸಖತ್​ ಇಷ್ಟಪಡುತ್ತಿದ್ದಾರೆ. ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಕೆಲಸದ ಸಮಯದಲ್ಲಿ ಹೀರೋಯಿನ್ ಜೊತೆ ರಕ್ಷಿತ್​ ಶೆಟ್ಟಿ ಮೋಜು! ಫೋಟೋ ವೈರಲ್​
ರಕ್ಷಿತ್​ ಶೆಟ್ಟಿ - ರುಕ್ಮಿಣಿ ವಸಂತ್​
ಮದನ್​ ಕುಮಾರ್​
|

Updated on: Mar 31, 2021 | 2:48 PM

Share

ನಟ ರಕ್ಷಿತ್​ ಶೆಟ್ಟಿ ಅವರು ಡಿಫರೆಂಟ್​ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ವೃತ್ತಿಜೀವನ ಮಾತ್ರವಲ್ಲದೆ ಖಾಸಗಿ ಬದುಕಿನ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಆ ಸಂದರ್ಭದ ಕೆಲವು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಹೇಮಂತ್​ ಎಂ. ರಾವ್​ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿತ್ತು. ಅಲ್ಲದೆ, ಪಾತ್ರದ ಸಲುವಾಗಿ ವರ್ಕ್​ಶಾಪ್​ನಲ್ಲಿ ಪಾಲ್ಗೊಳ್ಳುವುದಾಗಿಯೂ ರಕ್ಷಿತ್​ ಹೇಳಿದ್ದರು. ಪ್ರಸ್ತುತ ನಾಯಕಿ ರುಕ್ಮಿಣಿ ವಸಂತ್​ ಜೊತೆ ಅವರು ವರ್ಕ್​ಶಾಪ್​ನಲ್ಲಿ ತೊಡಗಿಕೊಂಡಿದ್ದಾರೆ.

ಈ ವರ್ಕ್​ಶಾಪ್​ ಸಮಯದ ಕೆಲವು ಫೋಟೋಗಳು ಈಗ ವೈರಲ್​ ಆಗಿವೆ. ಆ ಫೋಟೋಗಳನ್ನು ಹಂಚಿಕೊಂಡಿರುವುದು ಸ್ವತಃ ರಕ್ಷಿತ್​ ಶೆಟ್ಟಿ ಎಂಬುದು ವಿಶೇಷ. ಅವುಗಳ ಜೊತೆಯಲ್ಲಿ ಅವರು ನೀಡಿದ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ‘ಕೆಲಸದಲ್ಲಿ ನೀವು ಮೋಜು ಮಾಡುತ್ತಿದ್ದೀರಿ ಎಂದರೆ ನೀವು ಕೆಲಸ ಮಾಡುತ್ತಿಲ್ಲ ಎಂದು ಅರ್ಥವೇ? ಅಥವಾ ನಿಮ್ಮ ಕೆಲಸ ಅಷ್ಟು ಗ್ರೇಟ್​ ಆಗಿದೆ ಎಂದು ಅರ್ಥವೇ?’ ಎಂದು ರಕ್ಷಿತ್​ ಬರೆದುಕೊಂಡಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಇನ್ನೂ ಶೂಟಿಂಗ್​ ಆರಂಭ ಆಗಿಲ್ಲ. ಅಷ್ಟರಲ್ಲಾಗಲೇ ಜನರು ರುಕ್ಮಿಣಿ ಮತ್ತು ರಕ್ಷಿತ್​ ಜೋಡಿಯನ್ನು ಸಖತ್​ ಇಷ್ಟಪಡುತ್ತಿದ್ದಾರೆ. ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಶೆಟ್ರೇ.. ನಿಮ್ಮ ಜೋಡಿ ಸೂಪರ್​ ಆಗಿದೆ. ಮದುವೆ ಆಗಿ‘ ಎಂದು ಕೆಲವು ಅಭಿಮಾನಿಗಳು ಸಲಹೆ ನೀಡುತ್ತಿದ್ದಾರೆ.

ಈ ಸಿನಿಮಾದ ಮೂಲಕ ಒಂದು ಗಂಭೀರವಾದ ಪ್ರೇಮಕತೆಯನ್ನು ನಿರ್ದೇಶಕ ಹೇಮಂತ್​ ರಾವ್​ ಹೇಳಲಿದ್ದಾರಂತೆ. ಕತೆಯ ಬಗ್ಗೆ ರಕ್ಷಿತ್​ ಹೆಚ್ಚು ಭರವಸೆ ವ್ಯಕ್ತಪಡಿಸಿದ್ದಾರೆ. ನಾಯಕ ಮತ್ತು ನಾಯಕಿಯ ಫಸ್ಟ್​ಲುಕ್​ ಪೋಸ್ಟರ್​ಗಳು ಕೂಡ ಗಮನ ಸೆಳೆಯುತ್ತಿವೆ. ಇದಲ್ಲದೆ, ‘777 ಚಾರ್ಲಿ’ ಚಿತ್ರದ ಅಂತಿಮ ಹಂತದ ಕೆಲಸಗಳಲ್ಲಿ ರಕ್ಷಿತ್​ ಶೆಟ್ಟಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷಿತ್​ ಶೆಟ್ಟಿಗೆ ರುಕ್ಮಿಣಿ ಜೊತೆ ಇದೇ ಮೊದಲ ಬಾರಿಗೆ ಸೀರಿಯಸ್​ ಆಗಿ ಲವ್​ ಆಗ್ತಿದೆ! ಏನ್​ ಸಮಾಚಾರ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ