AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ವರ್ಷಗಳ ಹಿಂದೆ ಶುರುವಾದ ಲವ್​ಸ್ಟೋರಿ ಬಗ್ಗೆ ರಕ್ಷಿತ್​ ಶೆಟ್ಟಿ ಮನದಾಳದ ಮಾತು!

ನಟ ರಕ್ಷಿತ್​ ಶೆಟ್ಟಿ ಸದ್ಯ ‘777 ಚಾರ್ಲಿ‘ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆ 8 ವರ್ಷಗಳ ಹಿಂದಿನ ಲವ್​ ಸ್ಟೋರಿಯನ್ನು ನೆನಪಿಸಿಕೊಂಡಿದ್ದಾರೆ.

8 ವರ್ಷಗಳ ಹಿಂದೆ ಶುರುವಾದ ಲವ್​ಸ್ಟೋರಿ ಬಗ್ಗೆ ರಕ್ಷಿತ್​ ಶೆಟ್ಟಿ ಮನದಾಳದ ಮಾತು!
ರಕ್ಷಿತ್​ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on: Mar 08, 2021 | 7:12 PM

Share

ಸ್ಯಾಂಡಲ್​ವುಡ್​ನ ಟಾಪ್ ನಟರಲ್ಲಿ ತಾವೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ. ಹೊಸತನದ ಸಿನಿಮಾಗಳ ಮೂಲಕ ಅವರು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸೋಲು-ಗೆಲುವುಗಳ ನಡುವೆ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಅವರು ಸೃಷ್ಟಿಸಿಕೊಂಡಿದ್ದಾರೆ. ಅವರ ವೃತ್ತಿ ಬದುಕಿಗೆ ದೊಡ್ಡ ಟರ್ನ್​ ನೀಡಿದ್ದು, ಒಂದು ಲವ್​ ಸ್ಟೋರಿ. ಅದೇ ‘ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ’!

ಹೌದು, ರಕ್ಷಿತ್​ ಶೆಟ್ಟಿಗೆ ಚಿತ್ರರಂಗದಲ್ಲಿ ಮೊದಲ ಯಶಸ್ಸು ಸಿಕ್ಕಿದ್ದು ‘ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ‘ ಸಿನಿಮಾ ಮೂಲಕ. 2013ರಲ್ಲಿ ತೆರೆಕಂಡಿದ್ದ ಆ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿಗೆ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ ನಟಿಸಿದ್ದರು. ‘ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ‘ ತೆರೆಕಂಡು ಇಂದಿಗೆ (ಮಾ.8) 8 ವರ್ಷಗಳಾಗಿವೆ. ತಮ್ಮ ಬದುಕಿಗೆ ಹೊಸ ತಿರುವು ನೀಡಿದ ಆ ಚಿತ್ರವನ್ನು ರಕ್ಷಿತ್​ ಶೆಟ್ಟಿ ಮತ್ತು ಇಡೀ ತಂಡದವರು ನೆನಪಿಸಿಕೊಂಡಿದ್ದಾರೆ.

‘ಚಿತ್ರರಂಗದಲ್ಲಿ ನನ್ನ ವೃತ್ತಿಬದುಕಿಗೆ ಪುಷ್ಠಿ ನೀಡಿದ ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ ಸಿನಿಮಾ ಸುಂದರವಾದ 8 ವರ್ಷಗಳನ್ನು ಪೂರೈಸಿದೆ. ಈ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದಗಳು‘ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ. ಹೊಸತನದ ಚಿತ್ರಕಥೆಯನ್ನು ಹೊಂದಿದ್ದ ಈ ಚಿತ್ರ ಸೂಪರ್​ ಹಿಟ್​ ಆಗಿತ್ತು. ಆ ಚಿತ್ರದ ಗೆಲುವಿನ ಬಳಿಕ ರಕ್ಷಿತ್​ ಶೆಟ್ಟಿಗೆ ‘ಸಿಂಪಲ್​ ಸ್ಟಾರ್​’ ಎಂಬ ಬಿರುದು ಕೂಡ ಸಿಕ್ಕಿತು.

‘ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ’ ಚಿತ್ರಕ್ಕೆ ಸುನಿ ನಿರ್ದೇಶನ ಮಾಡಿದ್ದರು. ಬಳಿಕ ಅವರು ಸಿಂಪಲ್​ ಸುನಿ ಎಂದೇ ಖ್ಯಾತರಾದರು. ಅವರು ಕೂಡ ಚಿತ್ರದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘8 ವರುಷದ ಹಿಂದಿನ ಈ ದಿನ ಕನಸೊಂದು ಮೊಳಗಿತ್ತು. ಬೆಳ್ಳಿತೆರೆಗೆ ಹಾರಿ, ಮರೆಯಲಾಗದ ನನ್ನ 2ನೇ ಜನನ ಈ ಸಿಂಪಲ್ಲಾಗ್ ಒಂದ್ LOVE STORY’ ಎಂದಿದ್ದಾರೆ ನಿರ್ದೇಶಕ ಸುನಿ. ಬಿ.ಜೆ. ಭರತ್​ ಸಂಗೀತ ನಿರ್ದೇಶನ ಮಾಡಿದ್ದ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್​ ಆಗಿವೆ.

ಇದನ್ನೂ ಓದಿ: ಇನ್ನೂ ಉತ್ತಂಗಕ್ಕೇರು: ರಶ್ಮಿಕಾಗೆ ಮನಃಪೂರ್ವಕವಾಗಿ ಹಾರೈಸಿದ ರಕ್ಷಿತ್​ ಶೆಟ್ಟಿ

ಯೂಟ್ಯೂಬ್​ನಲ್ಲಿ 10 ಕೋಟಿ ವ್ಯೂಸ್​ ಗಳಿಸಿತು ‘ಬೆಳಗೆದ್ದು’ ಸಾಂಗ್​.. ರಕ್ಷಿತ್​ ಶೆಟ್ಟಿಯನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More