ಇನ್ನೂ ಉತ್ತಂಗಕ್ಕೇರು: ರಶ್ಮಿಕಾಗೆ ಮನಃಪೂರ್ವಕವಾಗಿ ಹಾರೈಸಿದ ರಕ್ಷಿತ್​ ಶೆಟ್ಟಿ

ರಶ್ಮಿಕಾ ಮಂದಣ್ಣಗೆ ಹಿಟ್​ ತಂದುಕೊಟ್ಟ ಸಿನಿಮಾ ಕಿರಿಕ್​ ಪಾರ್ಟಿ. ಇದು ಅವರ ಮೊದಲ ಚಿತ್ರ ಕೂಡ ಹೌದು. ಈ ಸಿನಿಮಾ ನಂತರದಲ್ಲಿ ರಶ್ಮಿಕಾ ಹಾಗೂ ನಟ ರಕ್ಷಿತ್​ ಶೆಟ್ಟಿ ಪರಸ್ಪರ ಪ್ರೀತಿಸಿದ್ದರು. ಕುಟುಂಬದ ಸಮ್ಮುಖದಲ್ಲಿ ಎಂಗೇಜ್​ಮೆಂಟ್​ ಕೂಡ ಆಗಿತ್ತು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು. 

ಇನ್ನೂ ಉತ್ತಂಗಕ್ಕೇರು: ರಶ್ಮಿಕಾಗೆ ಮನಃಪೂರ್ವಕವಾಗಿ ಹಾರೈಸಿದ ರಕ್ಷಿತ್​ ಶೆಟ್ಟಿ
ರಕ್ಷಿತ್​-ರಶ್ಮಿಕಾ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 25, 2020 | 8:27 PM

‘ರಶ್ಮಿಕಾ ನೀನು ಇನ್ನೂ ಬೆಳೆಯಬೇಕು. ನಿನ್ನ ಕನಸುಗಳೆಲ್ಲ ನಿಜವಾಗಬೇಕು’- ಹೀಗೆಂದು ರಕ್ಷಿತ್​ ಶೆಟ್ಟಿ ನಟಿ ರಶ್ಮಿಕಾಗೆ ಹಾರೈಸಿದ್ದಾರೆ! ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ರಶ್ಮಿಕಾ ಮಂದಣ್ಣಗೆ ಹಿಟ್​ ತಂದುಕೊಟ್ಟ ಸಿನಿಮಾ ಕಿರಿಕ್​ ಪಾರ್ಟಿ. ಇದು ಅವರ ಮೊದಲ ಚಿತ್ರ ಕೂಡ ಹೌದು. ಈ ಸಿನಿಮಾ ನಂತರದಲ್ಲಿ ರಶ್ಮಿಕಾ ಹಾಗೂ ನಟ ರಕ್ಷಿತ್​ ಶೆಟ್ಟಿ ಪರಸ್ಪರ ಪ್ರೀತಿಸಿದ್ದರು. ಕುಟುಂಬದ ಸಮ್ಮುಖದಲ್ಲಿ ಎಂಗೇಜ್​ಮೆಂಟ್​ ಕೂಡ ಆಗಿತ್ತು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

ಇಬ್ಬರೂ ಬೇರೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಅನ್​ ಫಾಲೋ ಮಾಡಿಕೊಂಡಿದ್ದರು. ಇವೆಲ್ಲ ಕಳೆದು ಸುಮಾರು ಎರಡು ವರ್ಷಗಳೇ ಆಗುತ್ತಾ ಬಂದಿವೆ. ಆದರೆ, ಈವರೆಗೆ ಇಬ್ಬರೂ ಟ್ವಿಟರ್​ನಲ್ಲಿ ಒಬ್ಬರನ್ನೊಬ್ಬರು ಟ್ಯಾಗ್​ ಮಾಡಿಕೊಂಡಿರಲಿಲ್ಲ.

ಕಿರಿಕ್​ ಪಾರ್ಟಿ ಸಿನಿಮಾದ ಬೆಳಗೆದ್ದು ಹಾಡು ಬರೋಬ್ಬರಿ 10 ಕೋಟಿ ವೀಕ್ಷಣೆ ಕಂಡಿತ್ತು. ಇದೇ ಖುಷಿಯಲ್ಲಿ ಟ್ವೀಟ್​ ಮಾಡಿದ್ದ ರಶ್ಮಿಕಾ ಮಂದಣ್ಣ, ರಕ್ಷಿತ್​ ಶೆಟ್ಟಿಯನ್ನೂ ಟ್ಯಾಗ್​ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು.

ಈಗ ಈ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ರಕ್ಷಿತ್, ಇನ್ನೂ ಬೆಳಿ. ನಿನ್ನ ಎಲ್ಲ ಕನಸುಗಳು ನನಸಾಗಲಿ ಎಂದಿದ್ದಾರೆ.

ಯೂಟ್ಯೂಬ್​ನಲ್ಲಿ 10 ಕೋಟಿ ವ್ಯೂಸ್​ ಗಳಿಸಿತು ‘ಬೆಳಗೆದ್ದು’ ಸಾಂಗ್​.. ರಕ್ಷಿತ್​ ಶೆಟ್ಟಿಯನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada