Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್​ನಲ್ಲಿ 10 ಕೋಟಿ ವ್ಯೂಸ್​ ಗಳಿಸಿತು ‘ಬೆಳಗೆದ್ದು’ ಸಾಂಗ್​.. ರಕ್ಷಿತ್​ ಶೆಟ್ಟಿಯನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ

ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು 10 ಕೋಟಿ ವೀಕ್ಷಣೆ ಪಡೆಯುತ್ತಿದ್ದಂತೆ ರಶ್ಮಿಕಾ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ. ಟ್ವೀಟ್​ನ ಕೊನೆಯಲ್ಲಿ ರಶ್ಮಿಕಾ ರಕ್ಷಿತ್​ ಶೆಟ್ಟಿಯನ್ನು ಟ್ಯಾಗ್​ ಮಾಡಿದ್ದು ನನ್ನೊಳಗಿನ ಸಾನ್ವಿಗಾಗಿ ಹುಡುಕಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಯೂಟ್ಯೂಬ್​ನಲ್ಲಿ 10 ಕೋಟಿ ವ್ಯೂಸ್​ ಗಳಿಸಿತು ‘ಬೆಳಗೆದ್ದು’ ಸಾಂಗ್​.. ರಕ್ಷಿತ್​ ಶೆಟ್ಟಿಯನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ
ಬೆಳಗೆದ್ದು ಹಾಡಿನ ಒಂದು ತುಣುಕು
Follow us
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 25, 2020 | 10:31 AM

ಕಿರಿಕ್​ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡು ಯುಟ್ಯೂಬ್​ನಲ್ಲಿ ಬರೋಬ್ಬರಿ 10 ಕೋಟಿ ವೀಕ್ಷಕರನ್ನು ಗಳಿಸಿಕೊಂಡಿದೆ. 2016ರ ನವೆಂಬರ್​ 25 ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಗೊಂಡಿದ್ದ ಈ ಹಾಡು ಇದೀಗ 10 ಕೋಟಿ ವೀಕ್ಷಣೆ ಗಳಿಸಿರುವ ಕಾರಣ ‘ಕಿರಿಕ್’​ ತಂಡ ಫುಲ್​ ಖುಷಿಯಾಗಿದೆ. ಟ್ವಿಟರ್​, ಫೇಸ್​ಬುಕ್​ ಮುಂತಾದ ಕಡೆ ‘10 ಕೋಟಿ’ಯ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಸಿನಿಮಾ ಬಿಡುಗಡೆಯಾದಾಗ ಭಾರೀ ಸುದ್ದಿಯಲ್ಲಿದ್ದರು. ಆದರೆ, ನಂತರದ ದಿನಗಳಲ್ಲಿ ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಅಭಿಪ್ರಾಯ ಮೂಡಿದ ಕಾರಣ ಜೋಡಿಯ ಕುರಿತಾದ ಸುದ್ದಿ ತಣ್ಣಗಾಗಿತ್ತು. ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲೂ ಇವರಿಬ್ಬರೂ ಸಂಪರ್ಕದಲ್ಲಿರುವುದು ಕಂಡುಬಂದಿರಲಿಲ್ಲ.

ಆದರೆ, ಇದೀಗ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ’ ಹಾಡು 10 ಕೋಟಿ ವೀಕ್ಷಣೆ ಪಡೆಯುತ್ತಿದ್ದಂತೆ ರಶ್ಮಿಕಾ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ. ನನ್ನ ಮೊಟ್ಟ ಮೊದಲ ಹಾಡು ಈ ಸಾಧನೆ ಮಾಡಿರುವುದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಚಿತ್ರೀಕರಣದ ಸಂದರ್ಭವನ್ನು ಮತ್ತೆ ನೆನಪಿಸಿಕೊಂಡು ನನ್ನೊಳಗಿನ ಸಾನ್ವಿಗಾಗಿ ಹುಡುಕಾಡುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಅಚ್ಚರಿಯೆಂದರೆ ಈ ಟ್ವೀಟ್​ನ ಕೊನೆಯಲ್ಲಿ ರಶ್ಮಿಕಾ ರಕ್ಷಿತ್​ ಶೆಟ್ಟಿಯನ್ನು ಟ್ಯಾಗ್​ ಮಾಡಿದ್ದಾರೆ. ರಿಷಬ್​ ಶೆಟ್ಟಿ, ಅಜನೀಶ್​ ಬಿ ಲೋಕನಾಥ್​, ಸಂಯುಕ್ತ ಹೆಗಡೆ ಜೊತೆ ರಕ್ಷಿತ್​ ಶೆಟ್ಟಿಯನ್ನೂ ಟ್ಯಾಗ್ ಮಾಡಿರುವುದು ಕುತೂಹಲ ಮೂಡಿಸಿದೆ.

ಇಡೀ ಕಿರಿಕ್​ ತಂಡ ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. 10 ಕೋಟಿ ದಾಟಿದ ನನ್ನ ಮೊದಲ ಹಾಡು ಎಂದು ಅಜನೀಶ್​ ಬಿ ಲೋಕನಾಥ್​ ಸಂತಸ ಹಂಚಿಕೊಂಡಿದ್ದಾರೆ. ಫೇಸ್​ಬುಕ್​ನಲ್ಲೂ ವೀಡಿಯೋ ಹಂಚಿಕೊಳ್ಳಲಾಗಿದ್ದು ಸದ್ಯ ಕಿರಿಕ್​ ಪಾರ್ಟಿ ಅಭಿಮಾನಿಗಳು ಸಖತ್​ ಖುಷಿಯಲ್ಲಿದ್ದಾರೆ.

We are beaming because the numbers are booming! #Belageddu arrives at a startling 100M views on YouTube! ? #100MillionForBelageddu

Check Out The Song, Again ? – https://youtu.be/ebz20FHrT44

#KirikParty

Posted by Paramvah Studios on Wednesday, December 23, 2020

ರಶ್ಮಿಕಾ ಮಂದಣ್ಣ ಬಾಲಿವುಡ್​ಗೆ ಕಾಲಿಡೋಕೆ ಸಿಕ್ತು ಮುಹೂರ್ತ: ಸ್ಟಾರ್​ ನಟನ ಜೊತೆ ಕೊಡಗು ಹುಡುಗಿ ರೊಮ್ಯಾನ್ಸ್​

Published On - 8:15 pm, Thu, 24 December 20

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್