ರಕ್ಷಿತ್​ ಶೆಟ್ಟಿಗೆ ರುಕ್ಮಿಣಿ ಜೊತೆ ಇದೇ ಮೊದಲ ಬಾರಿಗೆ ಸೀರಿಯಸ್​ ಆಗಿ ಲವ್​ ಆಗ್ತಿದೆ! ಏನ್​ ಸಮಾಚಾರ?

ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​ 10 ದಿನಗಳ ಕಾಲ ವರ್ಕ್​ಶಾಪ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ಈ ವರ್ಕ್​ಶಾಪ್​ ಮಾಡಲಾಗುತ್ತಿದೆ.

ರಕ್ಷಿತ್​ ಶೆಟ್ಟಿಗೆ ರುಕ್ಮಿಣಿ ಜೊತೆ ಇದೇ ಮೊದಲ ಬಾರಿಗೆ ಸೀರಿಯಸ್​ ಆಗಿ ಲವ್​ ಆಗ್ತಿದೆ! ಏನ್​ ಸಮಾಚಾರ?
ರುಕ್ಮಿಣಿ ವಸಂತ್​ - ರಕ್ಷಿತ್​ ಶೆಟ್ಟಿ
Follow us
ಮದನ್​ ಕುಮಾರ್​
|

Updated on: Mar 12, 2021 | 6:00 PM

‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು, ಅವರು ಲವ್​ ಬಗ್ಗೆ ಮಾತು ಶುರುಮಾಡಿದರೆ ಎಲ್ಲರ ಕಿವಿ ಚುರುಕಾಗುತ್ತದೆ. ಅಂದಹಾಗೆ, ಈಗ ರಕ್ಷಿತ್​ ಒಂದು ಸೀರಿಯಸ್​ ಲವ್​ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಇದು ನಟಿ ರಕ್ಮಿಣಿ ವಸಂತ್​ ಜೊತೆಗಿನ ಪ್ರೇಮ್​ ಕಹಾನಿ ಎಂಬುದು ವಿಶೇಷ.

ರಕ್ಷಿತ್​ ಶೆಟ್ಟಿಗೂ ರುಕ್ಮಿಣಿಗೂ ನಿಜ ಜೀವನದಲ್ಲಿ ಲವ್​ ಆಯ್ತಾ? ಹಾಗೇನೂ ಇಲ್ಲ. ಇದು ಸಿನಿಮಾ ಕಥೆಯಲ್ಲಿನ ಲವ್​ ಸ್ಟೋರಿ. ಇವರಿಬ್ಬರು ಜೊತೆಯಾಗಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಒಂದು ಪೇಮಕಥೆಯ ಸಿನಿಮಾ ಆಗಿದ್ದು, ಆ ಬಗ್ಗೆ ರಕ್ಷಿತ್​ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಆ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಮೂಡುವಂತೆ ಮಾಡಿದ್ದಾರೆ.

‘ಮೊದಲ ಬಾರಿಗೆ ನಾನು ಒಂದು ಸೀರಿಯಸ್​ ಲವ್​ ಸ್ಟೋರಿ ಕಥೆಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದಕ್ಕೆ ಹೇಮಂತ್​ ರಾವ್​ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆ ನಾನು ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಅವರು ಎಮೋಷನ್​ಗಳನ್ನು ಚೆನ್ನಾಗಿ ಚಿತ್ರಿಸುತ್ತಾರೆ ಎಂಬುದು ಗೊತ್ತಿದೆ. ಆದರೆ ಅವರು ಇಂಥ ಒಂದು ಸೀರಿಯಸ್​ ಲವ್​ಸ್ಟೋರಿಯನ್ನು ತೆರೆ ಮೇಲೆ ಹೇಗೆ ತೋರಿಸುತ್ತಾರೆ ಎಂಬ ಕುತೂಹಲ ನನಗೆ ಇದೆ’ ಎಂದಿದ್ದಾರೆ ರಕ್ಷಿತ್​ ಶೆಟ್ಟಿ.

‘ಇದು ಅದ್ಭುತವಾದ ಕಥೆ. ಒಬ್ಬ ನಟನಾಗಿ ನನಗೆ ಇದು ಹೆಚ್ಚು ಖುಷಿ ನೀಡಿದೆ. ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮೊದಲಾರ್ಧ ಒಂದು ರೀತಿ, ದ್ವಿತೀಯಾರ್ಧ ಇನ್ನೊಂದು ರೀತಿ ಇರಲಿದ್ದೇನೆ. ಆ ಎರಡೂ ಶೇಡ್​ನ ಅನಾವರಣ ಮಾಡಲು ನಾನು ಕಾಯುತ್ತಿದ್ದೇನೆ. ಇಲ್ಲಿಯವರೆಗೆ ನಾನು ಇಷ್ಟು ಸೀರಿಯಸ್​ ಆದ ಲವ್​ಸ್ಟೋರಿಯ ಸಿನಿಮಾದಲ್ಲಿ ನಟಿಸಿರಲಿಲ್ಲ. ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ, ಕಿರಿಕ್​ ಪಾರ್ಟಿ ಸಿನಿಮಾಗಳಲ್ಲಿ ತುಂಬ ಫನ್ನಿ ಆಗಿತ್ತು. ಆದರೆ ಈ ಸಿನಿಮಾದಲ್ಲಿ ಗಂಭೀರವಾಗಿರಲಿದೆ’ ಎಂಬುದು ರಕ್ಷಿತ್​ ಶೆಟ್ಟಿ ಮಾತು.

ಈ ಪಾತ್ರಕ್ಕಾಗಿ ರುಕ್ಮಿಣಿ ಮತ್ತು ರಕ್ಷಿತ್​ ತಯಾರಿ ನಡೆಸಬೇಕಿದೆ. ‘ಲವ್​ ಸ್ಟೋರಿ ಸಿನಿಮಾ ಮಾಡುವಾಗ ನಟ-ನಟಿಯ ಮಧ್ಯೆ ಕೆಮಿಸ್ಟ್ರೀ ತುಂಬ ಮುಖ್ಯ ಆಗುತ್ತದೆ. ಅದಕ್ಕಾಗಿ ನಾನು ಮತ್ತು ರುಕ್ಮಿಣಿ 10 ದಿನಗಳ ಕಾಲ ವರ್ಕ್​ಶಾಪ್​ನಲ್ಲಿ ಪಾಲ್ಗೊಳ್ಳಲಿದ್ದೇವೆ’ ಎಂದು ರಕ್ಷಿತ್​ ಮಾಹಿತಿ ನೀಡಿದ್ದಾರೆ. ಇನ್ನು, ಅವರು ‘777 ಚಾರ್ಲಿ’ ಸಿನಿಮಾದ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಅದರ ಶೂಟಿಂಗ್​ ಮುಗಿದಿದ್ದು, ಡಬ್ಬಿಂಗ್​ ಕೆಲಸಗಳು ಚಾಲ್ತಿಯಲ್ಲಿವೆ. ಆ ಚಿತ್ರದ ಬಗ್ಗೆಯೂ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಕಿರಿಕ್​ ಪಾರ್ಟಿ 2’ ಸಿನಿಮಾಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಇಲ್ಲಿದೆ ರಕ್ಷಿತ್​ ಶೆಟ್ಟಿ ನೀಡಿದ ಗುಡ್​ ನ್ಯೂಸ್​!

8 ವರ್ಷಗಳ ಹಿಂದೆ ಶುರುವಾದ ಲವ್​ಸ್ಟೋರಿ ಬಗ್ಗೆ ರಕ್ಷಿತ್​ ಶೆಟ್ಟಿ ಮನದಾಳದ ಮಾತು!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ