ಎರಡನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ರಾಬರ್ಟ್ ಹವಾ..ಮೂರೇ ದಿನಕ್ಕೆ 50 ಕೋಟಿ ದಾಟಲಿದೆ ಕಲೆಕ್ಷನ್?
Roberrt 2nd Day Collection: ಮೊದಲ ದಿನವಾದ ಗುರುವಾರ ರಾಬರ್ಟ್ 17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ರಾಬರ್ಟ್ ತನ್ನ ನಾಗಾಲೋಟ ಮುಂದುವರಿಸಿದೆ.
ದರ್ಶನ್ ನಟನೆಯ ರಾಬರ್ಟ್ ಸಿನಿಮಾ ರಾಜ್ಯದ್ಯಂತ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡಿದೆ. ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿದ್ದ ಈ ಸಿನಿಮಾ ಎರಡನೇ ದಿನವೂ ಅಬ್ಬರಿಸಿದೆ. ದರ್ಶನ್ ಅಭಿಮಾನಿಗಳು ಅಕ್ಷರಶಃ ಹಬ್ಬದೂಟ ಸವಿದ ಖುಷಿಯಲ್ಲಿದ್ದಾರೆ. ಮೂರೇ ದಿನಕ್ಕೆ ರಾಬರ್ಟ್ ಸಿನಿಮಾ ಕಲೆಕ್ಷನ್ 50 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ. ಇಡೀ ಕರ್ನಾಟಕದಲ್ಲಿ ರಾಬರ್ಟ್ ಬಿಡುಗಡೆಗೂ ಮುನ್ನವೇ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಈ ಹಬ್ಬದ ವಾತಾವರಣ ಎರಡನೇ ದಿನವೂ ಮುಂದುವರಿದೆ. ಪ್ರತಿ ಜಿಲ್ಲೆಯಲ್ಲಿಯೂ ಡಿ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್ ನಿಲ್ಲಿಸಿ ಸಂಭ್ರಮಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲ, ಮೊದಲ ದಿನದ ಟಿಕೆಟ್ಗಳನ್ನು ಎಲ್ಲರೂ ಮುಗಿಬಿದ್ದು ಖರೀದಿ ಮಾಡಿದ್ದರು. ಹಾಗಾಗಿ ರಾಜ್ಯಾದ್ಯಂತ ಎರಡನೇ ದಿನವೂ ಸಿನಿಮಾ ಕೋಟ್ಯಂತರ ರೂ. ಗಳಿಕೆ ಮಾಡಿದೆ.
ಮೊದಲ ದಿನವಾದ ಗುರುವಾರ ರಾಬರ್ಟ್ 17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ರಾಬರ್ಟ್ ತನ್ನ ನಾಗಾಲೋಟ ಮುಂದುವರಿಸಿದೆ. ಕರ್ನಾಟಕದಲ್ಲಿ ಈ ಸಿನಿಮಾ ಶುಕ್ರವಾರ 12.78 ಕೋಟಿ ರೂಪಾಯಿ ತನ್ನ ಜೇಬಿಗೆ ಹಾಕಿಕೊಂಡಿದೆ. ಈ ಮೂಲಕ ಎರಡೇ ದಿನಕ್ಕೆ ಸಿನಿಮಾ ಕಲೆಕ್ಷನ್ 30 ಕೋಟಿ ರೂಪಾಯಿ ಸಮೀಪಿಸಿದೆ.
ಗುರುವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದರಿಂದ ‘ರಾಬರ್ಟ್’ಗೆ ರಜಾ ದಿನದ ಅನುಕೂಲ ಆಗಿತ್ತು. ಶುಕ್ರವಾರ ಚಿತ್ರರಂಗಕ್ಕೆ ವಿಶೇಷ ದಿನ. ಹೀಗಾಗಿ, ಅಭಿಮಾನಿಗಳು ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಇನ್ನು ಇನ್ನು ವೀಕೆಂಡ್ನಲ್ಲಿಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಮಾಸ್ ಅಭಿಮಾನಿಗಳಿಗೆ ಮಾತ್ರವಲ್ಲದೆ, ಫ್ಯಾಮಿಲಿ ಪ್ರೇಕ್ಷಕರನ್ನೂ ಈ ಸಿನಿಮಾ ಸೆಳೆದುಕೊಳ್ಳುತ್ತಿದೆ. ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಮೂರನೇ ದಿನವಾದ ಶನಿವಾರ (ಮಾ.13) ಸಿನಿಮಾ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದ ಮೂಲಕ ನಟಿ ಆಶಾ ಭಟ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ. ‘ಚೌಕ’ ಚಿತ್ರದ ನಂತರ ತರುಣ್ ಸುಧೀರ್ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮೊಗದಲ್ಲಿ ಗೆಲುವಿನ ನಗು ಮೂಡಿದೆ.
ಇದನ್ನೂ ಓದಿ: ‘ರಾಬರ್ಟ್ ಪೈರಸಿ ಮಾಡಿದವರಿಗೆ ಶಿಕ್ಷೆ ಕೊಡೋದು ದೊಡ್ಡ ವಿಚಾರವಲ್ಲ; ಆದ್ರೆ ಅದರಿಂದ ಬೇರೆ ನಟರ ಹೆಸರು ಬರುತ್ತವೆ’