‘ರಾಬರ್ಟ್​ ಪೈರಸಿ ಮಾಡಿದವರಿಗೆ ಶಿಕ್ಷೆ ಕೊಡೋದು ದೊಡ್ಡ ವಿಚಾರವಲ್ಲ; ಆದ್ರೆ ಅದರಿಂದ ಬೇರೆ ನಟರ ಹೆಸರು ಬರುತ್ತವೆ’

‘ರಾಬರ್ಟ್​ ಪೈರಸಿ ಮಾಡಿದವರಿಗೆ ಶಿಕ್ಷೆ ಕೊಡೋದು ದೊಡ್ಡ ವಿಚಾರವಲ್ಲ; ಆದ್ರೆ ಅದರಿಂದ ಬೇರೆ ನಟರ ಹೆಸರು ಬರುತ್ತವೆ’
ನಿರ್ಮಾಪಕ ಉಮಾಪತಿ (ಫೈಲ್ ಚಿತ್ರ)

ಈಗಾಗಲೇ ಪೈರಸಿ ಮಾಡಿದ ಕೆಲವರನ್ನ ಪತ್ತೆ ಹಚ್ಚಲಾಗಿದೆ. ಅವರಿಗೆ ಶಿಕ್ಷೆ ಕೊಡುವುದು ದೊಡ್ಡ ವಿಚಾರವೇನಲ್ಲ. ಆದರೆ ಅದರಿಂದ ಬೇರೆ ನಟರ ಹೆಸರುಗಳು ಬರುತ್ತವೆ. ಬೇರೆ ನಟರ ಅಭಿಮಾನಿಗಳಿಂದ ಪೈರಸಿ ಆಯ್ತು ಅಂತಾರೆ. ಹಾಗಾಗಿ, ನಾವು ಬೆಂಕಿ ಹಚ್ಚಬಾರದು, ಆದಷ್ಟು ಆರಿಸಬೇಕು ಎಂದು ಉಮಾಪತಿ ಹೇಳಿದರು.

KUSHAL V

| Edited By: Apurva Kumar Balegere

Jun 23, 2021 | 1:29 PM

ಬೆಂಗಳೂರು: ರಾಬರ್ಟ್​​ ಚಿತ್ರ ರೆಕಾರ್ಡ್​​ ಮಾಡಿ ಹರಿಬಿಟ್ಟ ಕೆಲ ಕಿಡಿಗೇಡಿಗಳು ಹಾಗೂ ಸಿನಿಮಾದ ಪೈರಸಿ ಕುರಿತು ಚಿತ್ರದ ನಿರ್ಮಾಪಕ ಉಮಾಪತಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಪೈರಸಿ ಮಾಡಿದ ಕೆಲವರನ್ನ ಪತ್ತೆ ಹಚ್ಚಲಾಗಿದೆ. ಅವರಿಗೆ ಶಿಕ್ಷೆ ಕೊಡುವುದು ದೊಡ್ಡ ವಿಚಾರವೇನಲ್ಲ. ಆದರೆ ಅದರಿಂದ ಬೇರೆ ನಟರ ಹೆಸರುಗಳು ಬರುತ್ತವೆ. ಬೇರೆ ನಟರ ಅಭಿಮಾನಿಗಳಿಂದ ಪೈರಸಿ ಆಯ್ತು ಅಂತಾರೆ. ಹಾಗಾಗಿ, ನಾವು ಬೆಂಕಿ ಹಚ್ಚಬಾರದು, ಆದಷ್ಟು ಆರಿಸಬೇಕು ಎಂದು ಉಮಾಪತಿ ಹೇಳಿದರು.

ಪೈರಸಿ ಆಗಿರುವ 2 ಸಾವಿರಕ್ಕೂ ಹೆಚ್ಚು ಲಿಂಕ್​ಗಳು ಸಿಕ್ಕಿವೆ. ಆದರೆ ಸಿಕ್ಕಿರುವ ಲಿಂಕ್​ಗಳು ಯಾವುದೂ ಓಪನ್​ ಆಗುತ್ತಿಲ್ಲ. ಆದ್ರೆ ಲಿಂಕ್ ಓಪನ್ ಮಾಡುವವರ ಅಕೌಂಟ್​ನಿಂದ ದುಡ್ಡು ಮಾತ್ರ ಕಟ್ ಆಗ್ತಿದೆಯಂತೆ. ನಾವು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದು ಸಹಕಾರಿಯಾಗಿದೆ. 40ಮಂದಿ ಇರೋ ಆ್ಯಂಟಿ ಸ್ಕ್ವಾಡ್​ ರಚಿಸಿದ್ದೆವು. ಇದನ್ನೂ ಮೀರಿ ಪೈರಸಿ ಮಾಡಿದ್ರೂ ತೊಂದರೆಯಿಲ್ಲ. ಕಂಟೆಂಟ್ ಚೆನ್ನಾಗಿದ್ರೆ ಜನ ಸಿನಿಮಾ ನೋಡೇ ನೋಡ್ತಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ಸಹ ಹೇಳಿದರು.

ರಾಬರ್ಟ್​​ ಚಿತ್ರಕ್ಕೆ ಪೈರಸಿ ಕಾಟ ನಟ ದರ್ಶನ್​ ಅಭಿನಯದ ರಾಬರ್ಟ್​​ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಪೂರ್ತಿ ಸಿನಿಮಾ ರೆಕಾರ್ಡ್​​ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಈಗಾಗಲೇ ಲಿಂಕ್​ಗಳನ್ನ ಡಿಲೀಟ್​ ಮಾಡಿರುವ ತಂಡ ಸುಮಾರು 300-400 ಲಿಂಕ್ ಡಿಲಿಟ್ ಮಾಡಿಸಿದೆ. ಲಿಂಕ್​ ಡಿಲೀಟ್ ಮಾಡಿದ್ರೂ ಕಿಡಿಗೇಡಿಗಳು ಬೇರೆ ಬೇರೆ ಹೆಸರಿನಲ್ಲಿ ಅಪ್ಲೋಡ್ ಮಾಡ್ತಿದ್ದಾರೆ.

ಇತ್ತ, ಸ್ಟಾರ್​ಗಳು ಸುಮ್ಮನಿದ್ರೂ ಅವರ ಫ್ಯಾನ್ಸ್ ನಡುವಿನ ಕಚ್ಚಾಟ ನಿಲ್ಲುತ್ತಿಲ್ಲ. ಇದೀಗ, ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ನಡುವಿನ ಮಾತಿನ ವಿಡಿಯೋ ವೈರಲ್ ಆಗ್ತಿದೆ. ಹೌದು, ಅಭಿಮಾನದ ಅತಿರೇಕದ ಒಂದು ಘಟನೆ ಸಂಭವಿಸಿದೆ.

ಥಿಯೇಟರ್ ಅಂಗಳದಲ್ಲಿ ಕಿಚ್ಚನ ವಿರುದ್ಧ ದರ್ಶನ್​ ಅಭಿಮಾನಿಗಳು ಘೋಷಣೆ ಕೂಗಿದ್ದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ರಾಬರ್ಟ್ ಸಿನಿಮಾ ರಿಲೀಸ್ ವೇಳೆ ಘಟನೆ ನಡೆದಿದೆ. ಹೀಗಾಗಿ, ಅದನ್ನ ಕಂಡು ಸುದೀಪ್ ಅಭಿಮಾನಿಗಳು ದರ್ಶನ್​ ಫ್ಯಾನ್ಸ್​ಗಳಿಗೆ ವಾರ್ನ್ ಮಾಡಿದ್ದಾರೆ.

ಕೆಲವು ಪದಗಳನ್ನ ಬಳಸಿರೋದ್ರಿಂದ ನಮಗೆ ಬೇಸರವಾಗಿದೆ. ಅಭಿಮಾನದ ಅತೀರೇಕದ ವರ್ತನೆಯಲ್ಲಿ ಒಮ್ಮೊಮ್ಮೆ ಹೀಗಾಗುತ್ತೆ. ಆದರೆ, ಪದೇ ಪದೇ ಹೀಗಾಗಬಾರದು ಎಂದು ಕಿಚ್ಚನ ಅಭಿಮಾನಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೊನೆಗೆ ದರ್ಶನ್​ ಅಭಿಮಾನಿಯೊಬ್ಬ ವಿಡಿಯೋ ಬಗ್ಗೆ ಕ್ಷಮೆ ಕೇಳಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ರೆಡಿ ಮಾಡಿದ ಟೀಂ ಎಸ್​ಐಟಿ ಬಲೆಗೆ; ‘ಸಿಡಿ ಲೇಡಿ’ ಬಾಯ್​ಫ್ರೆಂಡ್ ಕೂಡ ಅಂದರ್​!

Follow us on

Most Read Stories

Click on your DTH Provider to Add TV9 Kannada