ರಮೇಶ್ ಜಾರಕಿಹೊಳಿ ಸಿಡಿ ರೆಡಿ ಮಾಡಿದ ಟೀಂ ಎಸ್‌ಐಟಿ ಬಲೆಗೆ; ‘ಸಿಡಿ ಲೇಡಿ’ ಬಾಯ್ಫ್ರೆಂಡ್ ಕೂಡ ಅಂದರ್!
ಬಲೆಗೆ ಬಿದ್ದ ಐವರ ವಹಿವಾಟು ಜಾಡು ಹಿಡಿದ SIT ಐವರ ಕಾಲ್ ರೆಕಾರ್ಡ್ಸ್ ಹಾಗೂ ಹಣಕಾಸಿನ ವಹಿವಾಟು ಟ್ರ್ಯಾಕ್ ಮಾಡೋಕೆ ಮುಂದಾದರು. ಬೆಂಗಳೂರು ಸೇರಿ ಕೆಲವೆಡೆ ಭೇಟಿಯಾಗಿದ್ದ ಐವರ ತಾಂತ್ರಿಕ ದಾಖಲೆ ಸಂಗ್ರಹಿಸಿದ ಬಳಿಕ ಪೊಲೀಸ್ ತಂಡವು ಬೇಟೆ ಆರಂಭಿಸಿತು. ಹಾಗಾಗಿ, ಬಹು ಸುಲಭವಾಗಿ ಮೊದಲ ದಿನವೇ ಐವರಿಗೆ ಗಾಳ ಹಾಕಿದ ಎಸ್‌ಐಟಿ ತಂಡ ಎಲ್ಲರನ್ನೂ ಅರೆಸ್ಟ್ ಮಾಡಿದೆ. ಸದ್ಯ, ಸಿಐಡಿ ಕಚೇರಿಯಲ್ಲಿ ಎಲ್ಲರ ವಿಚಾರಣೆ ನಡೆಸುತ್ತಿರುವ SIT ತಂಡ ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಐವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಯುವತಿ ಹಾಗೂ ನಾಲ್ವರು ಯುವಕರನ್ನು SIT ಅರೆಸ್ಟ್ ಮಾಡಿದೆ. ಸದ್ಯ, ವಿಶೇಷ ತನಿಖಾ ತಂಡ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಯಾರು ಈ ಐವರು? ಅಂದ ಹಾಗೆ, ಅರೆಸ್ಟ್ ಆದ ಈ ಐವರ ವಿವರ ಹೀಗಿದೆ.
ಬಂಧಿತ ವ್ಯಕ್ತಿ ನಂ.1: ವಿಜಯನಗರದಲ್ಲಿ ವಾಸವಾಗಿದ್ದ ಓರ್ವ ಯುವಕನನ್ನು ತಂಡ ಬಂಧಿಸಿದೆ. ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಈ ಯುವಕ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟಿದ್ದ. ಮೂಲತಃ ರಾಮನಗರದವನಾದ ಯುವಕ ವಿಜಯನಗರದಲ್ಲಿ ವಾಸವಾಗಿದ್ದ.
ಬಂಧಿತ ವ್ಯಕ್ತಿ ನಂ.2: ಸಿಡಿ ಕೇಸ್ನಲ್ಲಿ ರಾಮನಗರ ಮೂಲದ ಯುವತಿಯೊಬ್ಬಳನ್ನು ಸಹ ಬಂಧಿಸಲಾಗಿದೆ. ಬಂಧಿತ ನಂ.1 ಆಗಿರುವ ವಿಜಯನಗರದ ಯುವಕನ ಸ್ನೇಹಿತೆಯಾಗಿದ್ದ ಈಕೆ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿ ಜೊತೆಗಿದ್ದಳು. ಇದಲ್ಲದೆ, ರಾಮನಗರದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.
ಬಂಧಿತ ವ್ಯಕ್ತಿ ನಂ.3: ಚಾಮರಾಜಪೇಟೆಯಲ್ಲಿ ವಾಸವಾಗಿದ್ದ ಒಬ್ಬ ಯುವಕನನ್ನು ಸಹ SIT ತಂಡ ಅರೆಸ್ಟ್ ಮಾಡಿದೆ. ಈತ ಸೈಬರ್ ಸ್ಪೆಷಲಿಸ್ಟ್ ಆಗಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಬಂಧಿತ ವ್ಯಕ್ತಿ ನಂ.4: ಚಿಕ್ಕಮಗಳೂರು ಮೂಲದ ಆಲ್ದೂರಿನ ಒಬ್ಬ ಯುವಕನ ಬಂಧನವಾಗಿದೆ. ಇತ್ತೀಚೆಗೆ ವೆಬ್ ಸಿರೀಸ್ ಮಾಡುತ್ತಿದ್ದ ಆಲ್ದೂರಿನ ಈ ಯುವಕ ರಮೇಶ್ ಜಾರಕಿಹೊಳಿ ಸಿಡಿ ಮೇಕಿಂಗ್‌ನಲ್ಲಿ ಭಾಗಿಯಾಗಿದ್ದ.
ಬಂಧಿತ ವ್ಯಕ್ತಿ ನಂ.5: ಸಿಡಿಯಲ್ಲಿರುವ ಲೇಡಿಯ ಬಾಯ್ಫ್ರೆಂಡ್ನ ಸಹ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲೇ ಆತನನ್ನು ವಶಕ್ಕೆ ಪಡೆದಿರುವ SIT ತಂಡ ಈತ ಸಿಡಿ ಮೇಕಿಂಗ್ ಗ್ಯಾಂಗ್ ಸದಸ್ಯರಿಗೆ ಸಾಥ್ ನೀಡಿದ್ದ ಎಂಬ ಮಾಹಿತಿ ಕೊಟ್ಟಿದೆ. ಇದಲ್ಲದೆ, ಈತ CD ಹಂಚಿಕೆದಾರರ ಜೊತೆ ಸಹ ಸಂಪರ್ಕದಲ್ಲಿದ್ದ.
ಸಿಡಿ ಮೇಕಿಂಗ್ ಕಿಂಗ್ಪಿನ್ಸ್ ಬೆಂಗಳೂರಿಂದ ಎಸ್ಕೇಪ್! ಇತ್ತ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಭಾರಿ ಸದ್ದುಮಾಡುತ್ತಿದ್ದಂತೆ, ಸಿಡಿ ಮೇಕಿಂಗ್ನ ರೂವಾರಿಗಳಾಗಿದ್ದ ಇಬ್ಬರು ಕಿಂಗ್ಪಿನ್ಸ್ ಬೆಂಗಳೂರಿಂದ ಎಸ್ಕೇಪ್ ಆಗಿದ್ದಾರೆ. ಬೆಂಗಳೂರು ಬಿಟ್ಟು ಸದ್ಯ ಆಂಧ್ರದಲ್ಲಿ ಅಡಗಿರುವ ಕಿಂಗ್ಪಿನ್ಸ್ಗಾಗಿ SIT ತಂಡ ಶೋಧ ನಡೆಸುತ್ತಿದೆ.
ಸರ್ವರ್ ಹ್ಯಾಕ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದರು ಅಂದ ಹಾಗೆ, ಬಂಧಿತರು ಸರ್ವರ್ ಹ್ಯಾಕ್ ಮಾಡಿ ಮಾಜಿ ಸಚಿವರ ಸಿಡಿ ಅಪ್ಲೋಡ್ ಮಾಡಿದ್ದರು. ಐಪಿ ಅಡ್ರೆಸ್ ಬದಲಾವಣೆ ಮಾಡಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಹಾಗಾಗಿ, ವಿಡಿಯೋವನ್ನು ಬೆಂಗಳೂರಿನಲ್ಲಿ ಅಪ್ಲೋಡ್ ಮಾಡಿದ್ದರೂ ರಷ್ಯಾದಲ್ಲಿ ಅಪ್ಲೋಡ್ ಆದಂತೆ ಭಾಸವಾಗುವಂತಿತ್ತು. ಹೀಗಾಗಿ, ಸಿಡಿ ರಷ್ಯಾದ ಸರ್ವರ್ನಲ್ಲಿ ಅಪ್ಲೋಡ್ ಆಗಿತ್ತೆಂದು ತೋರಿಸುತ್ತಿತ್ತು.
ಮೊದಲ ದಿನವೇ ಎಸ್‌ಐಟಿ ಬೇಟೆಯಾಡಿದ್ದು ಹೇಗೆ? ಅಂದ ಹಾಗೆ, ರಮೇಶ್ ಜಾರಕಿಹೊಳಿ CD ಬಹಿರಂಗ ಪ್ರಕರಣದ ತನಿಖೆ ವಹಿಸಿಕೊಂಡ ಮೊದಲ ದಿನವೇ ಎಸ್‌ಐಟಿ ಬಂಧಿತರನ್ನು ಬೇಟೆಯಾಡಿದ್ದು ಹೇಗೆ ಎಂಬುದರ ರೋಚಕ ಸ್ಟೋರಿ ಇಲ್ಲಿದೆ. ಮೊದಲ ದಿನವೇ ಐವರನ್ನು ಬಲೆಗೆ ಬೀಳಿಸಿದ ರಹಸ್ಯವನ್ನು ನಿಮ್ಮ ಟಿವಿ9 ಬಿಚ್ಚಿಟ್ಟಿದೆ.
ಬಲೆಗೆ ಬಿದ್ದ ಐವರ ವಹಿವಾಟು ಜಾಡು ಹಿಡಿದ SIT ಐವರ ಕಾಲ್ ರೆಕಾರ್ಡ್ಸ್ ಹಾಗೂ ಹಣಕಾಸಿನ ವಹಿವಾಟು ಟ್ರ್ಯಾಕ್ ಮಾಡೋಕೆ ಮುಂದಾದರು. ಬೆಂಗಳೂರು ಸೇರಿ ಕೆಲವೆಡೆ ಭೇಟಿಯಾಗಿದ್ದ ಐವರ ತಾಂತ್ರಿಕ ದಾಖಲೆ ಸಂಗ್ರಹಿಸಿದ ಬಳಿಕ ಪೊಲೀಸ್ ತಂಡವು ಬೇಟೆ ಆರಂಭಿಸಿತು. ಹಾಗಾಗಿ, ಬಹು ಸುಲಭವಾಗಿ ಮೊದಲ ದಿನವೇ ಐವರಿಗೆ ಗಾಳ ಹಾಕಿದ ಎಸ್‌ಐಟಿ ತಂಡ ಎಲ್ಲರನ್ನೂ ಅರೆಸ್ಟ್ ಮಾಡಿದೆ. ಸದ್ಯ, ಸಿಐಡಿ ಕಚೇರಿಯಲ್ಲಿ ಎಲ್ಲರ ವಿಚಾರಣೆ ನಡೆಸುತ್ತಿರುವ SIT ತಂಡ ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್
Published On - 6:06 pm, Fri, 12 March 21