Street Food | ಇವು ರಾಜಧಾನಿಯಲ್ಲಿರುವ ವೆರೈಟಿ ಚಾಟ್​ ಸೆಂಟರ್​ಗಳು; ಟ್ರೈ ಮಾಡಿಲ್ಲ ಅಂದ್ರೆ ಈಗ್ಲೇ ಹೋಗಿ

ಬೆಂಗಳೂರು ಸೇರಿದಂತೆ ಬಹುತೇಕ ಪ್ರದೇಶಗಳ ಜನರು ಕೂಡಾ ಚಾಟ್ಸ್ ಪ್ರಿಯರೇ. ಅದಕ್ಕೆಂದೇ ಬೆಂಗಳೂರಿನಲ್ಲಿ ತಲೆಯೆತ್ತಿರುವ ಚಾಟ್ಸ್ ಸೆಂಟರ್​ಗಳ ಸಂಖ್ಯೆ ಕಡಿಮೆ ಏನಿಲ್ಲ, ಮಸಾಲೆ ಬಟಾಣಿ ಬೆರೆಸಿದ ಸೌತ್ ಇಂಡಿಯನ್ ಸ್ಟೈಲ್​ನ ಚಾಟ್, ಆಲೂ ಮಸಾಲೆಯಿರುವ ನಾರ್ತ್ ಇಂಡಿಯನ್ ಸ್ಟೈಲ್ನ ಚಾಟ್ಸ್, ಚಿಕ್ಕಬಳ್ಳಾಪುರದ ಪಾನಿಪೂರಿ ಮತ್ತು ಭೇಲ್, ನಿಪ್ಪಟ್ಟು,.

Street Food | ಇವು ರಾಜಧಾನಿಯಲ್ಲಿರುವ ವೆರೈಟಿ ಚಾಟ್​ ಸೆಂಟರ್​ಗಳು; ಟ್ರೈ ಮಾಡಿಲ್ಲ ಅಂದ್ರೆ ಈಗ್ಲೇ ಹೋಗಿ
ಬಾಯಲ್ಲಿ ನೀರು ತರಿಸುವ ಪಾನಿಪುರಿ
Follow us
ಆಯೇಷಾ ಬಾನು
| Updated By: Skanda

Updated on:Mar 13, 2021 | 2:54 PM

ಚಾಟ್ಸ್​​ ಬೇಡ ಎನ್ನುವವರ ಸಂಖ್ಯೆ ಬಹಳ ಕಮ್ಮಿ. ತಿನ್ನೋದನ್ನ ಕಮ್ಮಿ ಮಾಡ್ಬೇಕು ಅಂತ ಎಷ್ಟೇ ಪ್ರಯತ್ನಿಸಿದ್ರು ಈ ಚಾಟ್ಸ್​​ಗಳ ತಿನ್ನೋದನ್ನು ಬಿಡೋಕೆ ಆಗಲ್ಲ. ಅಷ್ಟು ಅದಕ್ಕೆ ಹೊಂದಿಕೊಂಡಿರುತ್ತಾರೆ. ಅದರಲ್ಲೂ ಕೆಲವರಿಗೆ ಡಿಫೆರೆಂಟ್ ವೆರೈಟಿ ಚಾಟ್ಸ್ ಸವಿಯ ಬೇಕು ಅನ್ನೋ ಆಸೆ ಇರುತ್ತೆ. ಪಾನಿ ಪೂರಿ, ದಹಿ ಪೂರಿ, ಪಾಪ್ಡಿ ಚಾಟ್ ಮುಂತಾದವು ಪ್ಲೇಟ್​ಗಳಲ್ಲಿ ತಂದು ನಮ್ಮ ಮುಂದೆ ಬಂದರೆ ನಾವು ಮಾಡುವ ಅಂದೆಂತಹ ಕಠಿಣ ಡಯಟ್ ಕೂಡಾ ಮರೆತೇ ಹೋಗುತ್ತೆ. ಚಾಟ್ಸ್ ಸಿಹಿ, ಹುಳಿ, ಪುದಿನಾ, ಕೊತ್ತಂಬರಿ, ನಿಂಬೆ ರಸ ಮತ್ತು ಕಪ್ಪು ಉಪ್ಪಿನ ಪರಿಮಳ ಮೂಗಿಗೆ ಬಡಿದಾಗ ಎಂಥವರ ಬಾಯಲ್ಲೂ ನೀರೂರತ್ತೆ. ಮಂಡಕ್ಕಿ, ಸೇವ್, ಕಡ್ಲೆಕಾಯಿ, ಆಲೂಗಡ್ಡೆ, ಬೆಂದ ಬಟಾಣಿ ಇವುಗಳನ್ನು ಕಣ್ಣಿಂದ ನೋಡುತ್ತಾ, ಮೂಗಿನಿಂದ ಆಘ್ರಾಣಿಸುತ್ತಾ ಇದ್ದರೆ ಒಂದು ಕೈ ನೋಡೇ ಬಿಡೋಣ ಎಂದು ಚಾಟ್ಸ್ ಸವಿಯಲು ಮುಂದಾಗುವ ಜನರೇ ಹೆಚ್ಚಾಗಿ ನಮ್ಮಲ್ಲಿ ಕಾಣಸಿಗುತ್ತಾರೆ.

ಬೆಂಗಳೂರು ಸೇರಿದಂತೆ ಬಹುತೇಕ ಪ್ರದೇಶಗಳ ಜನರು ಕೂಡಾ ಚಾಟ್ಸ್ ಪ್ರಿಯರೇ. ಅದಕ್ಕೆಂದೇ ಬೆಂಗಳೂರಿನಲ್ಲಿ ತಲೆಯೆತ್ತಿರುವ ಚಾಟ್ಸ್ ಸೆಂಟರ್​ಗಳ ಸಂಖ್ಯೆ ಕಡಿಮೆ ಏನಿಲ್ಲ, ಮಸಾಲೆ ಬಟಾಣಿ ಬೆರೆಸಿದ ಸೌತ್ ಇಂಡಿಯನ್ ಸ್ಟೈಲ್​ನ ಚಾಟ್, ಆಲೂ ಮಸಾಲೆಯಿರುವ ನಾರ್ತ್ ಇಂಡಿಯನ್ ಸ್ಟೈಲ್​ನ ಚಾಟ್ಸ್, ಬಂಗಾರಪೇಟೆ ಚಾಟ್ಸ್​, ಚಿಂತಾಮಣಿ ಪಾನಿಪೂರಿ ಮತ್ತು ಭೇಲ್, ನಿಪ್ಪಟ್ಟು, ಮಂಡಕ್ಕಿ, ಕಡ್ಲೆಕಾಯಿ ಮತ್ತು ಚಟ್ನಿಗಳ ಕಾಂಬಿನೇಷನ್ ಮುಂತಾದವು ಜನರ ನಾಲಿಗೆ ತಣಿಸುತ್ತಿಸುತ್ತಿವೆ. ನಗರದಲ್ಲಿ ಹಲವಾರು ಚಾಟ್ಸ್ ಸೆಂಟರ್​ಗಳಿಂದ ಕೆಲವು ದಶಕಗಳಿಂದ ಜನರಿಗೆ ಚಾಟ್ಸ್ ಉಣಬಡಿಸಿ ಗಮನ ಸೆಳೆದಿವೆ. ಅವುಗಳ ಕೆಲವು ವಿಶಿಷ್ಟ ಚಾಟ್​ಗಳಿಗಾಗಿ ಹೆಸರುವಾಸಿಯಾಗಿವೆ.

ಕರ್ನಾಟಕ ಭೇಲ್ ಹೌಸ್ 1975 ರಲ್ಲಿ ಪ್ರಭುಲಿಂಗ ದೇವ ಎಂಬವರು ಆರಂಭಿಸಿದ ಕರ್ನಾಟಕ ಭೇಲ್ ಹೌಸ್​ ತುಂಬಾ ಫೇಮಸ್. ಈ ಚಾಟ್ ಸೆಂಟರ್​ನ ಮೆನುವಿನಲ್ಲಿ ಪ್ರಮುಖವಾಗಿ ಐದು ಮೆನುಗಳಿವೆ. ಅವು ಯಾವುವೆಂದರೆ ಪಾನಿ ಪೂರಿ, ಭೇಲ್ಪೂರಿ, ಮಸಾಲ ಪೂರಿ, ಸೇವ್ ಪೂರಿ ಮತ್ತು ಆಲೂ ದಹಿ ಪುರಿ. ಈ ಚಾಟ್ ಸೆಂಟರ್​ಗೆ ಭೇಟಿ ನೀಡದೆ ಬೆಂಗಳೂರಿನ ಟೂರ್ ಚಾರ್ಟ್​​ ಕಂಪ್ಲೀಟ್ ಆಗುವುದಿಲ್ಲ. ಬೆಂಗಳೂರಿನ ಮೊದಲ ಚಾಟ್ ಸೆಂಟರ್ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ತನ್ನ ಹಳೆಯ ಫ್ಲೇವರ್ ಅನ್ನು ಈಗಲೂ ಉಳಿಸಿಕೊಂಡಿರುವುದು ಈ ಚಾಟ್ ಸೆಂಟರ್​ನ ವಿಶೇಷತೆಯಾಗಿದೆ. ಇಲ್ಲಿಗೆ ಹಲವಾರು ನಟರು, ಕ್ರಿಕೆಟ್ ಆಟಗಾರರು ಮತ್ತು ರಾಜಕಾರಣಿಗಳೂ ಭೇಟಿ ನೀಡುತ್ತಾರೆ.

ಶ್ರೀ ದುರ್ಗಾ ಚಾಟ್ಸ್ ಸೆಂಟರ್-ಬಸವನಗುಡಿ ಈ ಚಾಟ್ಸ್ ಸೆಂಟರ್ ಚಿಂತಾಮಣಿ ಚಾಟ್ಸ್ ಮತ್ತು ಭೇಲ್​ಗೆ ತುಂಬಾ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ 73 ಕಿ.ಮೀ ದೂರವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಚಿಂತಾಮಣಿ ತಾಲೂಕಿನಿಂದ ಇಲ್ಲಿನ ಚಾಟ್ಸ್ ಬರುತ್ತದೆ. ಇಲ್ಲಿನ ಚಾಟ್​ನಲ್ಲಿ ಆ ಪ್ರದೇಶದ ಖಾರ ಕಡ್ಲೆಕಾಯಿ ಬೀಜ, ನಿಪ್ಪಟ್ಟು, ಹೆಸರುಬೇಳೆ, ಸೇವ್, ಚಕ್ಕುಲಿ ಮತ್ತು ಮಂಡಕ್ಕಿಯ ಬಳಕೆ ಮಾಡಲಾಗುತ್ತೆ. ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಈ ಸೆಂಟರನ್ನು ದಶಕದ ಹಿಂದೆ ಜಿಎಸ್ ರಾಜೀವ್ ಮತ್ತು ಮಹಾಲಿಂಗಯ್ಯ ಬ್ರದರ್ಸ್ ಅವರು ಆರಂಭಿಸಿದರು. ಇಲ್ಲಿನ ಆರ್ಆರ್ ಘೀ ಪುರಿ, ಕೆಬಿ ಪುರಿ ಮತ್ತು 4 ಇನ್ ಒನ್ ತುಂಬಾ ರುಚಿಯಾಗಿರುತ್ತವೆ. ಇದಲ್ಲದೆ ಫ್ಲೋಟಿಂಗ್ ಪಾನಿಪುರಿ, ಪೈನಾಪಲ್ ಮಸಾಲ, ಸ್ಪೆಷಲ್ ಟೊಮ್ಯಾಟೋ ಸ್ಲೈಸ್, ಕೋಡುಬಳೆ ಪುರಿ ಮಸಾಲ, ಹೆಸರುಬೇಳೆ ಮಸಾಲ, ಕರ್ಡ್ ಬೂಂದಿ, ಕರ್ಡ್ ಅವಲಕ್ಕಿ, ಜೈನ್ ಭೇಲ್ ಇವೆಲ್ಲವೂ ತುಂಬಾ ರುಚಿಯಾಗಿವೆ.

ಗಣೇಶ್ ಚಾಟ್ಸ್-ವಿ.ವಿ ಪುರಂ ಇಲ್ಲಿನ ಫ್ಲೋಟಿಂಗ್ ಪಾನಿ ಪೂರಿ ಮತ್ತು ಗೋಲ್ಡ್ ಫಿಂಗರ್ ಮಸಾಲ ತುಂಬಾ ಫೇಮಸ್. ಜೀರಿಗೆ ನೀರಿನಲ್ಲಿ ತೇಲುವ ಪಾನಿಪೂರಿಯನ್ನು ತಿನ್ನುವ ಖುಷಿಯೇ ಚೆನ್ನಾಗಿರುತ್ತದೆ. ಪುಟ್ಟ ಮಕ್ಕಳಿಗೆ ಇಲ್ಲಿನ ಗೋಲ್ಡ್ ಫಿಂಗರ್ ಮಸಾಲ ಇಷ್ಟವಾಗುತ್ತದೆ. ಇದಲ್ಲದೆ ಟೊಮ್ಯಾಟೋ ನಿಪ್ಪಟ್ಟು, ಸ್ವೀಟ್ ಕಾರ್ನ್ ಮಸಾಲ ಮತ್ತು ಗಾರ್ಲಿಕ್ ಭೇಲ್​ಗಳು ತುಂಬಾ ರುಚಿಯಾಗಿರುತ್ತವೆ. ಇಲ್ಲಿ ಒಟ್ಟು 50 ಚಾಟ್ಸ್ ವೆರೈಟಿಗಳಿವೆ. ಈ ಸೆಂಟರ್​ನ ಮಾಲೀಕ ಗಣೇಶ್ ಶೆಟ್ಟಿಯವರು ಆಗಾಗ ಹೊಸ ಮೆನುವನ್ನು ಪರಿಚಯಿಸುತ್ತಿರುತ್ತಾರೆ. ಈ ಪೈಕಿ ಸ್ಕ್ವೇರ್ ಕಟೋರಿ ಚಾಟ್ ಲೇಟೆಸ್ಟ್ ಸೇರ್ಪಡೆಯಾಗಿದೆ.

ಶ್ರೀ ಸಾಯಿ ಶ್ರಾವಂತಿ ಬಂಗಾರಪೇಟ್ ಪಾನಿಪೂರಿ ಆ್ಯಂಡ್ ಚಾಟ್ಸ್ ಇಲ್ಲಿನ ಪಾನಿಪೂರಿ ಸಿಕ್ಕಾಪಟ್ಟೆ ಪಾಪ್ಯೂಲರ್ ಆಗಿದೆ. ಈ ಪಾನಿಪೂರಿ ಬಂಗಾರ್ ಪೇಟೆ ಪಾನಿಪೂರಿ ಎಂದೇ ಜನಪ್ರಿಯವಾಗಿದೆ. ದಶಕದ ಇತಿಹಾಸವಿರುವ ಈ ಶಾಪ್​ನಲ್ಲಿ ಪಾನಿಪೂರಿಗೆ ಬಳಸುವ ಪಾನಿಯನ್ನು ಮಣ್ಣಿನ ಮಡಕೆಯಲ್ಲಿ ಶೇಖರಿಸಿ ಇಡಲಾಗುತ್ತದೆ. ಈ ಪಾನಿಗೆ ಮೆಣಸಿನಕಾಯಿ, ನಿಂಬೆ, ಕೊತ್ತಂಬರಿ ಸೊಪ್ಪು, ಕಾಳು ಮೆಣಸು ಬಳಸಿದ್ದರೂ ಅದರ ಬಣ್ಣ ಪಾರದರ್ಶಕವಾಗಿರುವುದು ವಿಶೇಷ. ಈ ಪಾನಿಗೆ ಚಿಕ್ಕಬಳ್ಳಾಪುರದ ಸಣ್ಣ ಮೆಣಸಿಕಾಯಿಯನ್ನು ಬಳಸುತ್ತಾರೆ. ಅದನ್ನು ಪೇಸ್ಟ್ ಮಾಡಿದಾಗ ಅದು ತನ್ನ ಬಣ್ಣ ಕಳೆದುಕೊಳ್ಳುತ್ತದೆ. ಬಳಿಕ ಇದನ್ನು ಇತರ ಸಾಮಗ್ರಿಗಳೊಂದಿಗೆ ಮಿಕ್ಸ್ ಮಾಡಲಾಗುತ್ತದೆ.

ರಾಕೇಶ್ ಕುಮಾರ್ ಪಾನಿಪೂರಿ-ಜಯನಗರ ಇಲ್ಲಿನ ದೊಡ್ಡ ಗಾತ್ರದ ಪಾನಿಪೂರಿ ಮತ್ತು ಅಸ್ಲಿ ಚುರುಮರ್ ಚಾಟ್​ಗಳು ತುಂಬಾ ಜನಪ್ರಿಯವಾಗಿವೆ. ಇದರ ಮಾಲಿಕ ರಾಕೇಶ್ ಕುಮಾರ್ ಅವರು ಬನಾರಸ್ ಮೂಲದವರು. ಇಲ್ಲಿನ ಗೋಲ್ಗಪ್ಪಾ ಅಥವಾ ಪೂರಿಯ ಗಾತ್ರ ದೊಡ್ಡದು ಮತ್ತು ಅದರೊಳಗಿರುವ ಮಸಾಲೆಯೂ ಹೆವಿಯಾಗಿರುತ್ತದೆ. ಆದ್ದರಿಂದ ಸಾಮಾನ್ಯವಾಗಿ ಎರಡು ಪ್ಲೇಟ್ ಪಾನಿಪೂರಿ ತಿನ್ನುವವರು ಇಲ್ಲಿ ಒಂದೇ ಪ್ಲೇಟ್​ನಲ್ಲಿ ತೃಪ್ತರಾಗಿ ಬಿಡುತ್ತಾರೆ. ಜಯನಗರ ಮೂರನೇ ಬ್ಲಾಕ್​ನಲ್ಲಿರುವ ಈ ಸಣ್ಣ ಅಂಗಡಿ ಉತ್ತರ ಭಾರತ ಶೈಲಿಯ ಚಾರ್ಟ್​ಗಳಿಗಾಗಿಯೇ ಹೆಸರುವಾಸಿ. ಇದಲ್ಲದೆ ಇಲ್ಲಿನ ಚುರುಮುರ್ ಚಾಟ್ ಕೂಡಾ ತುಂಬಾ ವಿಶೇಷವಾದದು. ಇದನ್ನು ಬೇಯಿಸಿದ ಆಲೂಗಡ್ಡೆಯಿಂದ ಮಾಡದೆ ಕಡ್ಲೆಹಿಟ್ಟಿನ ಪಕೋಡಾಗಳಿಂದ ಮಾಡುವುದೇ ಇಲ್ಲಿನ ವಿಶೇಷ.

ಇದನ್ನೂ ಓದಿ: Bangarpet panipuri ಬಾಯಲ್ಲಿ ನೀರು ತರಿಸುತ್ತೆ ಬಂಗಾರಪೇಟೆಯ ವೆರೈಟಿ ವೆರೈಟಿ ಪಾನಿ ಪುರಿ.. ಏನಿದರ ವಿಶೇಷ? ಇಲ್ಲಿದೆ ನೋಡಿ

Published On - 2:52 pm, Sat, 13 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ